Asianet Suvarna News Asianet Suvarna News

"ಕೇಳಿ ಶಾಕ್ ಆಯ್ತು..!" ಒಲಿಂಪಿಕ್ಸ್ ಸಿದ್ಧತೆಗೆ ನನಗೆ ಕೇಂದ್ರ ₹1.5 ಕೋಟಿ ಕೊಟ್ಟಿಲ್ಲ: ಅಶ್ವಿನಿ ಪೊನ್ನಪ್ಪ ಕಿಡಿ

ಭಾರತದ ತಾರಾ ಮಹಿಳಾ ಬ್ಯಾಡ್ಮಿಂಟನ್ ಪಟು ಅಶ್ವಿನಿ ಪೊನ್ನಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ತಮಗೆ ಸರ್ಕಾರ ಒಂದೂವರೆ ಕೋಟಿ ರುಪಾಯಿ ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Indian doubles badminton specialist Ashwini Ponnappa Blasts Sports Ministry Ridiculous Claim kvn
Author
First Published Aug 14, 2024, 11:42 AM IST | Last Updated Aug 14, 2024, 11:42 AM IST

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ ತಯಾರಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ನೀಡಲಾಗಿದೆ ಎನ್ನಲಾದ ಆರ್ಥಿಕ ನೆರವಿನ ಬಗ್ಗೆ ತಾರಾ ಶಟ್ಲರ್ ಅಶ್ವಿನಿ ಪೊನ್ನಪ್ಪ ಕಿಡಿಕಾಡಿದ್ದಾರೆ.

ಇತ್ತೀಚೆಗೆ ಭಾರತೀಯ ಕ್ರೀಡಾಪಟುಗಳಿಗೆ ನೀಡಿದ ಆರ್ಥಿಕ ನೆರವಿನ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಅಶ್ವಿನಿಗೆ 1.5 ಕೋಟಿ ರು. ಕೊಟ್ಟಿರುವುದಾಗಿ ತಿಳಿಸಲಾಗಿತ್ತು. ಆದರೆ ಇದು ಸುಳ್ಳು ಎಂದು ಅಶ್ವಿನಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

'ಈ ಸುದ್ದಿ ನೋಡಿ ನನಗೆ ಆಘಾತವಾಗಿದೆ. ಇಷ್ಟೊಂದು ಪ್ರಮಾಣದ ಹಣವನ್ನು ನನಗೆ ನೀಡಿರುವುದಾಗಿ ದೇಶಕ್ಕೆ ತಿಳಿಸುವುದು ಹಾಸ್ಯಸ್ಪದ. ಕೇಂದ್ರ ಕ್ರೀಡಾ ಇಲಾಖೆ ಒಲಿಂಪಿಕ್ಸ್‌ ವೇಳೆ ನನಗೆ ಸೂಕ್ತ ಕೋಚ್ ಸಹ ಒದಗಿಸಲಿಲ್ಲ. ನನ್ನ ಟ್ರೈನರ್‌ಗೆ ಸ್ವಂತ ಹಣದಲ್ಲಿ ವೇತನ ನೀಡುತ್ತಿದ್ದೇನೆ' ಎಂದು ಅಶ್ವಿನಿ ತಿಳಿಸಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಶ್ವ ಕುಸ್ತಿ ನಿಯಮದಲ್ಲಿನ ಲೋಪ ವಿನೇಶ್‌ ಫೋಗಟ್‌ಗೆ ವರವಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಕರ್ನಾಟಕದ ರಕ್ಷಿತಾ, ಸಕೀನಾ, ಶ್ರೀಹರ್ಷ

ಬೆಂಗಳೂರು: ಆ.28ರಿಂದ ಸೆ.8ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಭಾರತದ 84 ಅಥ್ಲೀಟ್‌ಗಳ ಪಟ್ಟಿ ಪ್ರಕಟಗೊಂಡಿದೆ. ಕರ್ನಾಟಕದ ರಕ್ಷಿತಾ ರಾಜು, ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ ಹಾಗೂ ಸಕೀನಾ ಖಾತೂನ್‌ ಕೂಡಾ ಸ್ಪರ್ಧಿಸಲಿದ್ದಾರೆ. ಮೂಲತಃ ಕರ್ನಾಟಕದ, ಸದ್ಯ ಉತ್ತರ ಪ್ರದೇಶದಲ್ಲಿ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಹಾಸ್‌ ಯತಿರಾಜ್‌ ಕೂಡಾ ಕಣಕ್ಕಿಳಿಯಲಿದ್ದಾರೆ.

ಬ್ಯಾಡ್ಮಿಂಟನ್‌ ತಾರೆ ಸುಹಾಸ್‌ ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದು, ಈ ಬಾರಿ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. 2018 ಹಾಗೂ 2023ರ ಪ್ಯಾರಾ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ರಕ್ಷಿತಾ ರಾಜು, ಈ ಬಾರಿ ಮಹಿಳೆಯರ 1500 ಮೀ. ಟಿ11 ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಸಕೀನಾ ಖಾತೂನ್‌ ಮಹಿಳೆಯರ 45 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ, ಶ್ರೀಹರ್ಷ ಶೂಟಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನು, ಕಳೆದ ಬಾರಿ ಚಿನ್ನ ವಿಜೇತ ಶೂಟರ್‌ ಅವನಿ ಲೇಖರಾ, ಮನೀಶ್‌ ನರ್ವಾಲ್‌, ಹೈಜಂಪ್‌ ಪಟುಗಳಾದ ನಿಶಾದ್ ಕುಮಾರ್‌, ತಂಘವೇಲ್‌ ಮರಿಯಪ್ಪನ್‌, ಆರ್ಚರಿ ತಾರೆ ಶೀತಲ್‌ ದೇವಿ ಕೂಡಾ ಈ ಬಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸಚಿನ್, ಸೆಹ್ವಾಗ್, ಯುವಿ ಆಟ ಕಣ್ತುಂಬಿಕೊಳ್ಳಲು ರೆಡಿಯಾಗಿ; ಅಭಿಮಾನಿಗಳಿಗೆ ಬಿಸಿಸಿಐ ಗುಡ್‌ ನ್ಯೂಸ್..?

ಸಾರ್ವಕಾಲಿಕ ಗರಿಷ್ಠ ಅಥ್ಲೀಟ್‌ಗಳು ಸ್ಪರ್ಧೆ

ಭಾರತ ಈ ಬಾರಿ ಸಾರ್ವಕಾಲಿಕ ಗರಿಷ್ಠ ಅಥ್ಲೀಟ್‌ಗಳನ್ನು ಪ್ಯಾರಾಲಿಂಪಿಕ್ಟ್‌ಗೆ ಕಳುಹಿಸಲಿದೆ. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ 54 ಮಂದಿ ಸ್ಪರ್ಧಿಸಿದ್ದು ದಾಖಲೆ ಎನಿಸಿತ್ತು. ಈ ಬಾರಿ ಹೆಚ್ಚುವರಿ 30 ಮಂದಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಟೋಕಿಯೋದಲ್ಲಿ 19 ಪದಕ ಗೆದ್ದಿದ್ದ ಭಾರತ

ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕಗಳನ್ನು ಗೆದ್ದು ಸಾರ್ವಜಾಲಿಕ ಶ್ರೇಷ್ಠ ಪ್ರದರ್ಶನ ನೀಡಿತ್ತು. ಒಟ್ಟಾರೆ 1960ರಿಂದ ಈ ವರೆಗೂ ಭಾರತ 9 ಚಿನ್ನ, 12 ಬೆಳ್ಳಿ, 10 ಕಂಚು ಸೇರಿ 31 ಪದಕ ಗೆದ್ದಿದೆ.
 

Latest Videos
Follow Us:
Download App:
  • android
  • ios