ನವದೆಹಲಿ(ಮಾ.22): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಯಂತ್ರಣ ಘಟಕ (ನಾಡಾ)ಗೆ ಕ್ರೀಡಾಪಟುಗಳ ಡೋಪಿಂಗ್‌ ಪರೀಕ್ಷೆ ನಡೆಸಲು ಕಷ್ಟವಾಗುತ್ತಿದೆ. ಈ ಕಾರಣ ಪರೀಕ್ಷೆಗಳನ್ನು ಶೇ.25ಕ್ಕೆ ಇಳಿಸಿರುವುದಾಗಿ ನಾಡಾ ನಿರ್ದೇಶಕ ನವೀವ್‌ ಅಗರ್‌ವಾಲ್‌ ತಿಳಿಸಿದ್ದಾರೆ. 

ಹೆಚ್ಚಾದ ಡೋಪಿಂಗ್‌: ಕ್ರೀಡಾ ಸಚಿವ ರಿಜಿಜು ಆತಂಕ

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕ್ರೀಡಾಪಟುಗಳ ಪರೀಕ್ಷೆ ನಡೆಸಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ‘ಉದ್ದೀಪನ ಪರೀಕ್ಷೆಗಳನ್ನು ನಡೆಸಲು ರಕ್ತ, ಮೂತ್ರ ಮಾದರಿಗಳನ್ನು ಸಂಗ್ರಹಿಸುವವರ ಪೈಕಿ ಬಹುತೇಕರು ಸರ್ಕಾರಿ ನೌಕರರಾಗಿದ್ದು, ಅವರೆಲ್ಲರೂ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವವರ ಪೈಕಿ ತೀರಾ ಅಗತ್ಯ ಎನಿಸಿದವರ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದ್ದೇವೆ’ ಎಂದು ನವೀನ್‌ ಅಗರ್‌ವಾಲ್‌ ಹೇಳಿದ್ದಾರೆ.

ಬ್ಯಾಡ್ಮಿಂಟನ್‌: ಥಾಮಸ್‌, ಊಬರ್‌ ಕಪ್‌ ಮುಂದಕ್ಕೆ

ಜಾಗತಿಕ ಮಟ್ಟದ ಪುರುಷರ ಹಾಗೂ ಮಹಿಳಾ ಬ್ಯಾಡ್ಮಿಂಟನ್‌ ಟೂರ್ನಿಗಳಾದ ಥಾಮಸ್‌ ಹಾಗೂ ಊಬರ್‌ ಕಪ್‌ ಟೂರ್ನಿಗಳನ್ನು ಮುಂದೂಡಲು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ನಿರ್ಧರಿಸಿದೆ. ಕೊರೋನಾ ಸೋಂಕಿನ ಭೀತಿಯಿಂದಾಗಿ ಮೇ 16ರಿಂದ 24 ವರೆಗೂ ಡೆನ್ಮಾರ್ಕ್ನಲ್ಲಿ ನಡೆಯಬೇಕಿದ್ದ ಟೂರ್ನಿಗಳನ್ನು ಮೂರು ತಿಂಗಳವರೆಗೂ ಮುಂದೂಡಲಾಗಿದೆ ಎಂದು ಬಿಡಬ್ಲ್ಯುಎಫ್‌ ಶನಿವಾರ ತಿಳಿಸಿದೆ.

ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

ಪರಿಷ್ಕೃತ ವೇಳಾಪಟ್ಟಿಪ್ರಕಟಗೊಂಡಿದ್ದು, ಆ.15ರಿಂದ 23ರ ವರೆಗೂ ನಡೆಸಲು ನಿರ್ಧರಿಸಲಾಗಿದೆ. ಇದು ತಾತ್ಕಲಿಕ ವೇಳಾಪಟ್ಟಿಯಾಗಿದ್ದು, ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಮತ್ತಷ್ಟುತಿಂಗಳುಗಳ ಕಾಲ ಮುಂದೂಡಲಾಗುತ್ತದೆ ಎಂದು ಬಿಡಬ್ಲ್ಯುಎಫ್‌ ತಿಳಿಸಿದೆ. ಇದರ ಜತೆಗೆ ಇನ್ನೂ ಕೆಲ ಪಂದ್ಯಾವಳಿಗಳನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾದರೆ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಡಬ್ಲ್ಯುಎಫ್‌ ತಿಳಿಸಿದೆ.