ಹೆಚ್ಚಾದ ಡೋಪಿಂಗ್: ಕ್ರೀಡಾ ಸಚಿವ ರಿಜಿಜು ಆತಂಕ
ದೇಶದ ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದರ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಡಿ.11): ಭಾರತದಲ್ಲಿ ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ದೀಪನಾ ಮದ್ದು ಸೇವಿಸಿ ಮೋಸ ಮಾಡುವ ಕ್ರೀಡಾಪಟುಗಳಿಗೆ ತಿಳುವಳಿಕೆ ಹೇಳುವಂತಹ ಕೆಲಸಗಳು ನಡೆಯಬೇಕು. ಈ ಮೂಲಕ ಭಾರತವನ್ನು ಉತ್ಕೃಷ್ಟ ಕ್ರೀಡಾ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಬೇಕು ಎಂದು ರಿಜಿಜು ಹೇಳಿದ್ದಾರೆ.
ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!
‘ಡೋಪಿಂಗ್‌ನಲ್ಲಿ ಸಿಕ್ಕಿಬೀಳುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ಉದ್ದೀಪನಾ ಸೇವನೆ ಮಾಡಿರುತ್ತಾರೆ ಎನ್ನುವುದು ತಪ್ಪು. ಹೀಗಾಗಿ, ಕ್ರೀಡಾಪಟುಗಳಿಗೆ ತಾವು ಸೇವಿಸುವ ಔಷಧ, ಆಹಾರ ಪೂರಕಗಳ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ರಿಜಿಜು ಹೇಳಿದ್ದಾರೆ. ಈ ವರ್ಷ 150ಕ್ಕೂ ಹೆಚ್ಚು ಭಾರತೀಯ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ.
ಸುನಿಲ್ ಶೆಟ್ಟಿ NADA ರಾಯಭಾರಿ:
ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ)ದ ರಾಯಭಾರಿಯಾಗಿ ಬಾಲಿವುಡ್ ನಟ ಸುನಿಲ್ ಶೆಟ್ಟಿಅವರನ್ನು ಮಂಗಳವಾರ ನೇಮಕ ಮಾಡಲಾಯಿತು. ಶಾಲಾ ಮಟ್ಟದಲ್ಲಿ ಸುನಿಲ್ ಶೆಟ್ಟಿ, ಡೋಪಿಂಗ್‌ನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದು ನಾಡಾ ನಿರ್ದೇಶಕ ನವೀನ್ ಅಗರ್‌ವಾಲ್ ಹೇಳಿದರು.