ಜಿಮ್ನಾಸ್ಟಿಕ್; 25ನೇ ಪದಕ ಗೆದ್ದು ದಾಖಲೆ ಬರೆದ ಬೈಲ್ಸ್‌ !

ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸಿಮೊನಾ ಬೈಲ್ಸ್ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಬರೋಬ್ಬರಿ 25 ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

most in gymnastics history 25 World Championships medals for Simone Biles

ಸ್ಟಟ್‌ಗಾರ್ಟ್(ಜರ್ಮನಿ)ಅ.14): ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅಮೇರಿಕದ ತಾರೆ ಸಿಮೊನಾ ಬೈಲ್ಸ್ 25ನೇ ಪದಕ ಗೆದ್ದು ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಭಾನುವಾರ(ಅ.13) ರಂದು ನಡೆದ ವನಿತೆಯರ ಫ್ಲೋರ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಸಿಮೊನಾ ಬೈಲ್ಸ್ ಚಿನ್ನದ ಪದಕ ಗೆದ್ದರು. 

most in gymnastics history 25 World Championships medals for Simone Biles

ಇದನ್ನೂ ಓದಿ: ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ ಚಿನ್ನ ಗೆದ್ದ ದೀಪಾ ಕರ್ಮಾಕರ್‌

ಈ ಟೂರ್ನಿಯಲ್ಲಿ ಬೈಲ್ಸ್ ಬಾಚಿಕೊಂಡ 5ನೇ ಚಿನ್ನದ ಪದಕ ಇದಾಗಿದೆ. ಬೀಮ್, ತಂಡ, ಆಲ್ರೌಂಡರ್, ವಾಲ್ಟ್ ಸ್ಪರ್ಧೆಗಳಲ್ಲಿ ಬೈಲ್ಸ್ ಚಿನ್ನದ ಪದ ಗೆದ್ದುಕೊಂಡರು. ಈ  ಮೂಲಕ ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್ ಪಟ್ಟ ಉಳಿಸಿಕೊಂಡಿದ್ದಾರೆ.

most in gymnastics history 25 World Championships medals for Simone Biles

ಇದನ್ನೂ ಓದಿ: ಜಿಮ್ನಾಸ್ಟಿಕ್ಸ್ ವಿಶ್ವಕಪ್'ನಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳೆ

ಬೈಲ್ಸ್ 25ನೇ ಪದಕ ಗೆಲ್ಲೋ ಮೂಲಕ ಬೆಲಾರಸ್‌ನ ಜಿಮ್ನಾಸ್ಟಿಕ್ ಪಟು ವಿಟಾಲಿ ಶೆರ್ಬೋ ಅವರ 23 ಪದಕ ಸಾಧನೆಯನ್ನು ಹಿಂದಿಕ್ಕಿದರು. ವಿಶ್ವ ಚಾಂಪಿಯನ್‌ಶಿಪ್ ಕೂಡದಲ್ಲಿ 19 ಚಿನ್ನ, 3 ಬೆಳ್ಳಿ ಹಾಗೂ 3 ಚಿನ್ನದ ಪದಕೊಂದಿಗೆ ಒಟ್ಟು 25 ಪದಕ ಗೆದ್ದ ಸಾಧನೆ ಮಾಡಿದ್ದಾರೆ. 

 

ಇದನ್ನೂ ಓದಿ: ಭಾರತದ ರೋಡ್ ಜಿಮ್ನಾಸ್ಟಿಕ್ಸ್‌ಗೆ ನಾಡಿಯಾ ಕೂಡಾ ಫಿದಾ!

2016ರ ರಿಯೋ ಒಲಿಂಪಿಕ್ಸ್ ಕೂಟದ ಆಲ್ರೌಂಡರ್, ಫ್ಲೋರ್, ಟೀಂ, ವಾರ್ಟ್ ವಿಭಾದಲ್ಲಿ ಒಟ್ಟು 4 ಚಿನ್ನ ಹಾಗೂ ಬ್ಯಾಲೆನ್ಸ್ ಬೀಮ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇನ್ನು ಪೆಸಿಫಿಕ್ ರಿಮ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ 2 ಚಿನ್ನದ ಪದಕ ಗೆದ್ದಿದ್ದಾರೆ. 22ರ ಹರೆಯದ ಸಿಮೊನ್ ಬೈಲ್ಸ್ ಇನ್ನಷ್ಟು ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

Latest Videos
Follow Us:
Download App:
  • android
  • ios