ಭಾನುವಾರ ನಡೆದ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ದೀಪಾ 14.150 ಅಂಕಗಳನ್ನು ಕಲೆಹಾಕಿ ಚಿನ್ನಕ್ಕೆ ಮುತ್ತಿಟ್ಟರು. ಅರ್ಹತಾ ಸುತ್ತಿನಲ್ಲಿ ದೀಪಾ 13.400 ಅಂಕಗಳಿಸುವ ಮೂಲಕ ಮೊದಲಿಗರಾಗಿದ್ದರು.
ನವದೆಹಲಿ[ಜು.09]: ಟರ್ಕಿಯ ಮೆರ್ಸಿನ್‌ನಲ್ಲಿ ನಡೆದ ಎಫ್‌ಐಜಿ ವಿಶ್ವಕಪ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತದ ತಾರಾ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್, ಚಿನ್ನ ಗೆದ್ದಿದ್ದಾರೆ.
ರಿಯೋ ಒಲಿಂಪಿಕ್ಸ್ ಬಳಿಕ ಗಾಯದ ಸಮಸ್ಯೆಗೆ ತುತ್ತಾದ ದೀಪಾ 2 ವರ್ಷಗಳ ಕಾಲ ಜಿಮ್ನಾಸ್ಟಿಕ್‌ನಿಂದ ದೂರ ಉಳಿದಿದ್ದರು. ವಿಶ್ವ ಕಪ್ ಜಿಮ್ನಾಸ್ಟಿಕ್‌ನಲ್ಲಿ ದೀಪಾಗೆ ಇದು ಮೊದಲ ಪದಕವಾಗಿದೆ.
24 ವರ್ಷದ ತ್ರಿಪುರಾ ಮೂಲದ ದೀಪಾ 2016ರ ರಿಯೊ ಒಲಿಂಪಿಕ್ಸ್‌ನ ವಾಲ್ಟ್ ಸ್ಪರ್ಧೆಯ ಫೈನಲ್‌ನಲ್ಲಿ 4ನೇ ಸ್ಥಾನ ಪಡೆದಿದ್ದರು. ಉತ್ತಮ ಪ್ರದರ್ಶನ ತೋರಿದ್ದ ದೀಪಾ ಕೆಲವೇ ಅಂಕಗಳಿಂದ ಕಂಚಿನ ಪದಕದಿಂದ ವಂಚಿತರಾಗಿದ್ದರು.
ಭಾನುವಾರ ನಡೆದ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ದೀಪಾ 14.150 ಅಂಕಗಳನ್ನು ಕಲೆಹಾಕಿ ಚಿನ್ನಕ್ಕೆ ಮುತ್ತಿಟ್ಟರು. ಅರ್ಹತಾ ಸುತ್ತಿನಲ್ಲಿ ದೀಪಾ 13.400 ಅಂಕಗಳಿಸುವ ಮೂಲಕ ಮೊದಲಿಗರಾಗಿದ್ದರು.