ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1
ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 48ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇದು ಸೇರಿದಂತೆ ಮೇರಿ ಒಟ್ಟಾರೆ 6 ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಸದ್ಯ ಮೇರಿ 1700 ಅಂಕಗಳಿಸಿದ್ದಾರೆ.
ನವದೆಹಲಿ: ಭಾರತದ ತಾರಾ ಮಹಿಳಾ ಬಾಕ್ಸರ್ ಮೇರಿ ಕೋಮ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 48ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇದು ಸೇರಿದಂತೆ ಮೇರಿ ಒಟ್ಟಾರೆ 6 ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಸದ್ಯ ಮೇರಿ 1700 ಅಂಕಗಳಿಸಿದ್ದಾರೆ.
51ಕೆಜಿ ವಿಭಾಗಲ್ಲಿ ಪಿಂಕಿ ಜಾಂಗ್ರ 8ನೇ ಸ್ಥಾನ ಪಡೆದಿದ್ದಾರೆ. ಏಷ್ಯನ್ ಬೆಳ್ಳಿ ವಿಜೇತೆ ಮನೀಶಾ ಮೌನ್ 54ಕೆಜಿ ವಿಭಾಗದಲ್ಲಿ 8ನೇ ಸ್ಥಾನದಲ್ಲಿದ್ದಾರೆ. 57ಕೆಜಿ ವಿಭಾಗದಲ್ಲಿ ವಿಶ್ವ ಬೆಳ್ಳಿ ವಿಜೇತೆ ಸೋನಿಯಾ ಲಾಥರ್ 2ನೇ ಸ್ಥಾನಕ್ಕೇರಿದ್ದಾರೆ.
2001ರಲ್ಲಿ ಜರುಗಿದ ಚೊಚ್ಚಲ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದ ಮೇರಿ ಕೋಮ್ ಆ ಬಳಿಕ 6 ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 2012ರಲ್ಲಿನ ಲಂಡನ್ ಒಲಿಂಪಿಕ್ಸ್’ನಲ್ಲಿ ಮೇರಿ ಕಂಚು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದರು. 2020ರ ಟೋಕಿಯೋ ಒಲಿಂಪಿಕ್ಸ್’ನಲ್ಲಿ 48 ಕೆ.ಜಿ ವಿಭಾಗವನ್ನು ತೆಗೆದು ಹಾಕಲಾಗಿದ್ದು, ಬಹುತೇಕ ಮೇರಿ ಮುಂಬರುವ ಒಲಿಂಪಿಕ್ಸ್ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.