Asianet Suvarna News Asianet Suvarna News

ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ ವಿ ರೇವತಿ!

  • ಟೊಕಿಯೊ ಒಲಿಂಪಿಕ್ಸ್ ಸಮೀಪಿಸುತ್ತಿದ್ದಂತೆ ಪ್ರತಿಭಾವಂತ ಕ್ರೀಡಾಪಟುವಿಗೆ ಟಿಕೆಟ್
  • ಮುಧುರೈನ 23 ವರ್ಷ ರೇವತಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ
  • ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ದಾಖಲೆ ಬರೆಯಲು ಸಜ್ಜಾದ ರಿಲೇ ಓಟಗಾರ್ತಿ
Madurai Athlete V Revathi represent India at Tokyo Olympics in mixed relay event ckm
Author
Bengaluru, First Published Jul 7, 2021, 2:33 PM IST

ತಮಿಳುನಾಡು(ಜು.07): ಟೊಕಿಯೋ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ ಪ್ರತಿಭಾವಂತ ಕ್ರೀಡಾಪಟುಗಳ ಪಟ್ಟಿಗೆ ಇದೀಗ ವಿ ರೇವತಿ ಸೇರಿಕೊಂಡಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನಡೆದ ರಿಲೇ ಟ್ರಯಲ್ಸ್‌ನಲ್ಲಿ  400 ಮೀಟರ್ ಓಟವನ್ನು 53.55 ಸೆಕೆಂಡ್‌ನಲ್ಲಿ ಪೂರೈಸಿ ದಾಖಲೆ ಬರೆದಿದ್ದಾಳೆ. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳವು ಕ್ರೀಡಾಪಟುಗಳ ಪಟ್ಟಿಗೆ ಸೇರಿಕೊಂಡಿದ್ದಾಳೆ.

ಟೋಕಿಯೋ ಒಲಿಂಪಿಕ್ಸ್‌: ಮೇರಿ ಕೋಮ್, ಮನ್‌ಪ್ರೀತ್ ಧ್ವಜಧಾರಿಗಳು.

23ರ ಹರೆಯದ ವಿ ರೇವತಿ ಮತ್ತೊಂದು ಸಾಧನೆ ಮಾಡಿದ್ದಾರೆ. ಮುದುರೈ ಜಿಲ್ಲೆಯಿಂದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೀಗ ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿ ರೇವತಿ ಶೀಘ್ರದಲ್ಲೇ ಭಾರತ  ಭಾರತದ ರಿಲೆ ತಂಡ ಸೇರಿಕೊಳ್ಳಲಿದ್ದಾರೆ.  ಬಳಿಕ ಈ ತಂಡ ನೇರವಾಗಿ ಜಪಾನ್‌ಗೆ ಪ್ರಯಾಣ ಬೆಳೆಸಲಿದೆ.

ಟೋಕಿಯೋ ಒಲಿಂಪಿಕ್ಸ್‌ ಟಿಕೆಟ್ ಖಚಿತಪಡಿಸಿಕೊಂಡ ದ್ಯುತಿ ಚಾಂದ್

ವಿ ರೇವತಿ ಆಯ್ಕೆಗೆ ಕೋಚ್ ಕೆ ಕಣ್ಣನ್ ಸಂತಸ ವ್ಯಕ್ತಪಡಿಸಿದ್ದಾರೆ. ವಿ ರೇವತಿ ಹೆಚ್ಚು ಮಾತನಾಡುವ ಹುಡುಗಿಯಲ್ಲ. ಆದರೆ ಅವಳ ಪ್ರದರ್ಶನ ಎಲ್ಲಾ ಮಾತನಾಡುತ್ತಿದೆ. ಶ್ರದ್ಧೆ, ಶಿಸ್ತು ಹಾಗೂ ಕಠಿಣ ಅಭ್ಯಾಸದ ಮೂಲಕ ಈ ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್ ಅರ್ಹತೆ ಪಡೆಯುವ ಎಲ್ಲಾ ಅರ್ಹತೆ ನಿನಗಿದೆ. ಒಂದು ದಿನ ನೇರವೇರಲಿದೆ ಎಂದು ಪ್ರತಿ ಬಾರಿ ಹೇಳತ್ತಿದ್ದೆ. ಆದರೆ ರೇವತಿ ಇದಕ್ಕೆ ನಗುವಿನ ಮೂಲಕ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದಳು. ಇದೀಗ ಆ ಕನಸು ನನಸಾಗಿದೆ ಎಂದು ಕಣ್ಣನ್ ಹೇಳಿದ್ದಾರೆ.

Follow Us:
Download App:
  • android
  • ios