ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರ, ಕೋವಿಡ್ ಐಸಿಯುನಿಂದ ದಿಗ್ಗಜ ಅಥ್ಲೀಟ್ ಶಿಫ್ಟ್

* ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರ

* ಕೋವಿಡ್‌ನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಿಲ್ಖಾ ಸಿಂಗ್

* ಕೆಲದಿನಗಳ ಹಿಂದಷ್ಟೇ ಪತ್ನಿಯನ್ನು ಕಳೆದುಕೊಂಡಿರುವ ಮಿಲ್ಖಾ ಸಿಂಗ್

Legendary Athlete Milkha Singh stable out of COVID ICU kvn

ಮೊಹಾಲಿ(ಜೂ.16): ದೇಶದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರವಾಗಿದ್ದು, ಐಸಿಯು ಕೋವಿಡ್‌ ಕೇಂದ್ರದಿಂದ ಬೇರೆಡೆಗೆ ಅವರನ್ನು ವರ್ಗಾಯಿಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.

91 ವರ್ಷದ ಮಿಲ್ಖಾ ಸಿಂಗ್ ಅವರಿಗೆ ಜುಲೈ ತಿಂಗಳಿನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು, ಕೋವಿಡ್ ಐಸಿಯು ಕೇಂದ್ರದಿಂದ ಶಿಫ್ಟ್ ಮಾಡಲಾಗಿದೆ. ಸದ್ಯ ಅವರು ಮೆಡಿಕಲ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಿಲ್ಖಾ ಸಿಂಗ್ ಕುಟುಂಬದ ವಕ್ತಾರರರು ಮಾಧ್ಯಮಗಳಿಗೆ ತಿಳಿಸಿದ್ದಾರೆ

ಮಿಲ್ಖಾ ಸಿಂಗ್ ಕೋವಿಡ್‌ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಕೋವಿಡ್ ಐಸಿಯು ಕೇಂದ್ರದಿಂದ ಅವರನ್ನು ಶಿಫ್ಟ್ ಮಾಡಲಾಗಿದೆ ಎಂದು ಖಾಸಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಹಿರಿಯ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವು ಪ್ರತಿನಿತ್ಯ ಮಿಲ್ಖಾ ಸಿಂಗ್ ಅವರ ಆರೋಗ್ಯದ ಮೇಲೆ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ. 

ದಿಗ್ಗಜ ಅಥ್ಲೀಟ್‌ ಮಿಲ್ಖಾ ಪತ್ನಿ ನಿರ್ಮಲ್ ಕೌರ್ ಕೋವಿಡ್‌ಗೆ ಬಲಿ

ಕಳೆದ ಭಾನುವಾರ(ಜೂ.13)ವಷ್ಟೇ ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್(85) ಕೋವಿಡ್‌ನಿಂದಾಗಿ ಕೊನೆಯುಸಿರೆಳೆದಿದ್ದರು. ಪತಿ ಮಿಲ್ಖಾ ಸಿಂಗ್ ಜತೆಯಲ್ಲಿಯೇ ಮೊಹಾಲಿಯ ಖಾಸಗಿ ಅಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದರು. ನಿರ್ಮಲ್‌ ಕೌರ್ ಭಾರತ ಮಹಿಳಾ ವಾಲಿಬಾಲ್ ತಂಡದ ನಾಯಕಿಯಾಗಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios