Asianet Suvarna News Asianet Suvarna News

ಸೆಮೀಸ್‌ ಕದನ ಸೋತ ಲಕ್ಷ್ಯ ಸೇನ್‌ಗಿದೆ ಇಂದು ಕಂಚು ಗೆಲ್ಲುವ ಬೆಸ್ಟ್ ಚಾನ್ಸ್..!

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಬ್ಯಾಡ್ಮಿಂಟನ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಲಕ್ಷ್ಯ ಸೇನ್‌ಗೆ ಇಂದು ಕಂಚಿನ ಪದಕ ಗೆಲ್ಲಲು ಉತ್ತಮ ಅವಕಾಶ ಇದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Lakshya Sen vs Lee Zii Jia bronze medal match at Paris Olympics 2024 all you need to know kvn
Author
First Published Aug 5, 2024, 9:13 AM IST | Last Updated Aug 5, 2024, 4:56 PM IST

ಒಲಿಂಪಿಕ್ಸ್‌ ಇತಿಹಾಸದಲ್ಲೇ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಪುರುಷ ಶಟ್ಲರ್‌ ಎನಿಸಿಕೊಳ್ಳುವ ಕಾತರದಲ್ಲಿದ್ದ ಲಕ್ಷ್ಯ ಸೇನ್‌ ಕನಸು ಭಗ್ನಗೊಂಡಿದೆ. ಭಾನುವಾರ 22 ವರ್ಷದ ಸೇನ್‌ ಅವರು ಹಾಲಿ ಒಲಿಂಪಿಕ್‌ ಚಾಂಪಿಯನ್‌, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ 20-22, 14-21 ಗೇಮ್‌ಗಳಲ್ಲಿ ವೀರೋಚಿತ ಸೋಲು ಕಂಡರು. ಇದೀಗ ಇಂದು ಲಕ್ಷ್ಯ ಸೇನ್ ಕಂಚಿನ ಪದಕ ಗೆಲ್ಲಲು ಉತ್ತಮ ಅವಕಾಶ ಒದಗಿ ಬಂದಿದೆ.

ಎರಡೂ ಗೇಮ್‌ಗಳಲ್ಲಿ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಹೊರತಾಗಿಯೂ ಸೇನ್‌ಗೆ ಗೆಲ್ಲಲಾಗಲಿಲ್ಲ. ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ 17-11ರಲ್ಲಿ ಮುಂದಿದ್ದ ಸೇನ್‌, ಬಳಿಕ ಗೇಮ್‌ ಪಾಯಿಂಟ್‌ವರೆಗೂ ತಲುಪಿದ್ದರು. ಆದರೆ 3 ಗೇಮ್‌ ಪಾಯಿಂಟ್‌ ಉಳಿಸಿ ಗೆದ್ದ ವಿಕ್ಟರ್‌ 1-0 ಮುನ್ನಡೆ ಸಾಧಿಸಿದರು.

ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲು: ಪುರುಷ & ಮಹಿಳಾ ವಿಭಾಗದಲ್ಲಿ ಪದಕ ಗೆದ್ದ ಅಥ್ಲೀಟ್‌..!

2ನೇ ಗೇಮ್‌ನ ಆರಂಭದಲ್ಲಿ ಸೇನ್‌ 7-0 ಅಂಕಗಳಿಂದ ಮುಂದಿದ್ದರೂ ಬಳಿಕ ಪುಟಿದೆದ್ದ ವಿಕ್ಟರ್‌, ಸೇನ್‌ ಮೇಲೆ ಸವಾರಿ ಮಾಡಿ ಪಂದ್ಯ ಗೆದ್ದು ಸತತ 3ನೇ ಒಲಿಂಪಿಕ್ಸ್‌ ಪದಕ ಖಚಿತಪಡಿಸಿಕೊಂಡರು.

ಸೇನ್‌ಗೆ ಇದೆ ಕಂಚು ಗೆಲ್ಲುವ ಅವಕಾಶ

ಸೆಮೀಸ್‌ನಲ್ಲಿ ಸೋತರೂ ಸೇನ್‌ ಸೋಮವಾರ ಕಂಚಿನ ಪದಕಕ್ಕಾಗಿ ಏಷ್ಯನ್‌ ಚಾಂಪಿಯನ್‌ಶಿಪ್‌ ವಿಜೇತ, ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಲಿದ್ದಾರೆ. ಇದರಲ್ಲಿ ಸೇನ್‌ ಗೆದ್ದರೆ, ಒಲಿಂಪಿಕ್ಸ್‌ ಪದಕ ಜಯಿಸಿದ ಭಾರತದ ಮೊದಲ ಪುರುಷ ಶಟ್ಲರ್‌ ಎನಿಸಿಕೊಳ್ಳಲಿದ್ದಾರೆ. ಸೈನಾ ನೆಹ್ವಾಲ್‌ 2012ರಲ್ಲಿ ಕಂಚು, ಪಿ.ವಿ.ಸಿಂಧು 2016ರಲ್ಲಿ ಬೆಳ್ಳಿ, 202ರಲ್ಲಿ ಕಂಚು ಗೆದ್ದಿದ್ದರು.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕವೇ ನಿವೃತ್ತಿ: ದೀಪಿಕಾ

ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಭಾರತದ ತಾರಾ ಆರ್ಚರಿ ಪಟು ದೀಪಿಕಾ ಕುಮಾರಿ, ಒಲಿಂಪಿಕ್ಸ್‌ ಪದಕ ಗೆಲ್ಲುವವರೆಗೂ ನಿವೃತ್ತಿ ಘೋಷಿಸಲ್ಲ ಎಂದಿದ್ದಾರೆ. ಈ ಬಗ್ಗೆ ಸೋಮವಾರ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ 30ರ ದೀಪಿಕಾ, ‘ನನಗೆ ಒಲಿಂಪಿಕ್ಸ್‌ ಪದಕ ಗೆಲ್ಲಬೇಕು. ಅದುವರೆಗೂ ನಾನು ನಿವೃತ್ತಿ ಘೋಷಿಸಲ್ಲ. ಕಠಿಣ ಅಭ್ಯಾಸದೊಂದಿಗೆ ಕಮ್‌ಬ್ಯಾಕ್‌ ಮಾಡುತ್ತೇನೆ’ ಎಂದಿದ್ದಾರೆ. 

Paris Olympics 2024 ಬ್ರಿಟೀಷರನ್ನು ಮಣಿಸಿದ ಭಾರತ ಹಾಕಿ ತಂಡ ಸೆಮಿಫೈನಲ್‌ಗೆ ಲಗ್ಗೆ..!

2022ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ ಈ ವರೆಗೂ ವಿಶ್ವಕಪ್‌ನಲ್ಲಿ 11 ಚಿನ್ನದ ಜೊತೆಗೆ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌, ಏಷ್ಯನ್‌ ಚಾಂಪಿಯನ್‌ಶಿಪ್‌ಗಳಲ್ಲೂ ಪದಕ ಗೆದ್ದಿದ್ದಾರೆ. ಆದರೆ ಸತತ 4 ಒಲಿಂಪಿಕ್ಸ್‌ಗಳಲ್ಲಿ ಆಡಿದರೂ ಒಂದೂ ಪದಕ ಗೆದ್ದಿಲ್ಲ.
 

Latest Videos
Follow Us:
Download App:
  • android
  • ios