ಹೆನ್ರಿ ಫೀಲ್ಡ್‌ಮನ್ ಎನ್ನುವ ಅಥ್ಲೀಟ್‌ ಒಂದೇ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಮೂಲಕ ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಪ್ಯಾರಿಸ್‌: ಪ್ಯಾರಿಸ್ ಒಲಿಂಪಿಕ್ಸ್‌ ಈಗಾಗಲೇ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಇದೀಗ ಹೆನ್ರಿ ಫೀಲ್ಡ್‌ಮನ್ ಎನ್ನುವ ಅಥ್ಲೀಟ್‌ ಒಂದೇ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಮೂಲಕ ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಗ್ರೇಟ್ ಬ್ರಿಟನ್ ದೇಶದ ರೋವರ್ ಆಗಿರುವ ಹೆನ್ರಿ ಫೀಲ್ಡ್‌ಮನ್ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರೇ ಪುರುಷ ಅಥ್ಲೀಟ್‌ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ಸ್‌ ಪದಕ ಜಯಿಸಿದ್ದು ಹೇಗೆ ಎನ್ನುವುದು ನಿಮಗೂ ಅಚ್ಚರಿಯಾಗಬಹುದು ಅಲ್ಲವೇ? ಹೆನ್ರಿ ಫೀಲ್ಡ್‌ಮನ್ ಪುರುಷ ಅಥ್ಲೀಟ್‌ ಆಗಿದ್ದರೂ, ಗ್ರೇಟ್ ಬ್ರಿಟನ್ ತಂಡದ 8 ಮಹಿಳಾ ರೋಯಿಂಗ್ ತಂಡದಲ್ಲಿ ಕಾಕ್ಸ್‌ ಆಗಿ ಸ್ಥಾನ ಪಡೆದಿದ್ದರು. ಗ್ರೇಟ್‌ ಬ್ರಿಟನ್ ರೋಯಿಂಗ್ ತಂಡವು ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ವಿಭಾಗದಲ್ಲಿ ಕೆನಡಾ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ರೊಮೇನಿಯಾ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿತು.

Paris Olympics 2024 ಬ್ರಿಟೀಷರನ್ನು ಮಣಿಸಿದ ಭಾರತ ಹಾಕಿ ತಂಡ ಸೆಮಿಫೈನಲ್‌ಗೆ ಲಗ್ಗೆ..!

ಮಹಿಳಾ ತಂಡದಲ್ಲಿ ಹೆನ್ರಿ ಫೀಲ್ಡ್‌ಮನ್‌ಗೆ ಅವಕಾಶ ಕೊಟ್ಟಿದ್ದೇಕೆ..?: 

ಈ ಪ್ರಶ್ನೆ ಇದೀಗ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದಲ್ಲವೇ?. ರೋಯಿಂಗ್‌ನಲ್ಲಿ ದೋಣಿ ಓಡಿಸುವುದರ ಬಗ್ಗೆ ಭಿನ್ನ ಲಿಂಗಿಯರಿಗೆ ಪಾಲ್ಗೊಳ್ಳಲು 2017ರಲ್ಲಿ ನಿಯಮವನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ಮಹಿಳಾ ರೋಯಿಂಗ್ ತಂಡದಲ್ಲಿ ಕಾಕ್ಸ್‌ವೇನ್ಸ್‌ ಆಗಿ ಪುರುಷ ಅಥ್ಲೀಟ್ ಪಾಲ್ಗೊಳ್ಳಲು ಅವಕಾಶವಿದೆ. ಈ ನಿಯಮದ ಲಾಭ ಪಡೆದ ಹೆನ್ರಿ ಫೀಲ್ಡ್‌ಮನ್, ಮಹಿಳಾ ತಂಡದ ಜತೆಗೂಡಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ಕಾಕ್ಸ್‌ ಆದವರು ದೋಣಿ ಓಡಿಸುವುದಿಲ್ಲ. ದೋಣಿ ಓಡಿಸುವವರು ಒಂದೇ ಲಿಂಗದವರಾಗಿರಬೇಕು. ಆದರೆ ಭಿನ್ನ ಲಿಂಗಿಯಾದವರು ದೋಣಿಯಲ್ಲಿದ್ದುಕೊಂಡೇ, ತಂತ್ರಗಾರಿಕೆ ಹೆಣೆಯುವುದು, ದೋಣಿ ಸಮತೋಲನದಿಂದ ಮುನ್ನಡೆಯಲು ಬೇಕಾದ ಸೂಕ್ತ ಸಲಹೆ ನೀಡುವವರಾಗಿರುತ್ತಾರೆ. ಇದು ಗ್ರೇಟ್‌ ಬ್ರಿಟನ್ ಮಹಿಳಾ ತಂಡವು ಒಲಿಂಪಿಕ್ಸ್‌ ಪದಕ ಗೆಲ್ಲಲು ನೆರವಾಯಿತು.

Scroll to load tweet…

ಇಂಗ್ಲೆಂಡ್‌ ತಂಡಕ್ಕೆ ಕೋಚ್‌ ಆಗ್ತಾರಾ ರಾಹುಲ್‌ ದ್ರಾವಿಡ್‌? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಇಯಾನ್ ಮಾರ್ಗನ್

ಇನ್ನು ಇದಕ್ಕೂ ಮೊದಲು ಪ್ಯಾರಿಸ್ ಒಲಿಂಪಿಕ್ಸ್‌ನ ಹೆನ್ರಿ ಫೀಲ್ಡ್‌ಮನ್, ಗ್ರೇಟ್ ಬ್ರಿಟನ್ ಪುರುಷ ರೋಯಿಂಗ್ ತಂಡದ ಪರ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆನ್ರಿ ಫೀಲ್ಡ್‌ಮನ್ 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಪುರುಷ ರೋಯಿಂಗ್ ತಂಡದ ಪರ ಕಂಚಿನ ಪದಕ ಜಯಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.