Asianet Suvarna News Asianet Suvarna News

India Open Badminton: ವಿಶ್ವ ಚಾಂಪಿಯನ್ ಆಟಗಾರನ್ನು ಸೋಲಿಸಿದ ಲಕ್ಷ್ಯ ಸೆನ್, ಸಾತ್ವಿಕ್- ಚಿರಾಗ್ ಜೋಡಿ ಚಾಂಪಿಯನ್ !

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೆನ್ ಚಾಂಪಿಯನ್
ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಪ್ರಶಸ್ತಿ
ವಿಶ್ವ ಚಾಂಪಿಯನ್ ಆಟಗಾರನನ್ನು ಸೋಲಿಸಿ ಪ್ರಶಸ್ತಿ ಗೆದ್ದ ಲಕ್ಷ್ಯ ಸೆನ್

Lakshya SEN Satwik Sairaj Rankireddy and Chirag Shetty win India Open Badminton Title san
Author
Bengaluru, First Published Jan 16, 2022, 6:46 PM IST

ನವದೆಹಲಿ (ಜ. 16): ಭಾರತದ ಅಗ್ರ ಷಟ್ಲರ್ ಲಕ್ಷ್ಯ ಸೆನ್ (Lakshya Sen) ಹಾಗೂ ಸಾತ್ವಿಕ್ ಸಾಯಿರಾಜ್ ರಂಕಿ ರೆಡ್ಡಿ (Satwik Sairaj Rankireddy)  ಮತ್ತು ಚಿರಾಗ್ ಶೆಟ್ಟಿ (Chirag Shetty) ಜೋಡಿ ಭಾನುವಾರ ಮುಕ್ತಾಯಗೊಂಡ ಇಂಡಿಯಾ ಓಪನ್ ಬ್ಯಾಡ್ಮಿಂಟನ್ 500 (India Open Badminton 500) ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. 3ನೇ ಶ್ರೇಯಾಂಕದ ಲಕ್ಷ್ಯ ಸೆನ್ ಪುರುಷರ ಸಿಂಗಲ್ಸ್ (Mens Singles)ವಿಭಾಗದಲ್ಲಿ ಚಾಂಪಿಯನ್ ಆದರೆ, ಭಾರತದ ನಂ.1 ಪುರುಷರ ಡಬಲ್ಸ್ (Mens Doubles)ಜೋಡಿ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಮಿಂಚಿದರು.


ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಫೈನಲ್ ಪಂದ್ಯದಲ್ಲಿ  ಇಂಡೋನೇಷ್ಯಾದ ದಿಗ್ಗಜರಾದ ಹೆಂಡ್ರಾ ಸೆಟಿಯಾವಾನ್ ಮತ್ತು ಮೊಹಮ್ಮದ್ ಎಹ್ಸಾನ್ ಜೋಡಿಯನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿತು.  43 ನಿಮಿಷದ ಹೋರಾಟದ ಫೈನಲ್ ನಲ್ಲಿ ಭಾರತದ ಜೋಡಿ 21-16, 26-24 ಅತರದಿಂದ ವಿಶ್ವದ ಎರಡನೇ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾರತದ ಜೋಡಿ ಎರಡನೇ ಬಾರಿಗೆ ಸೂಪರ್ 500 ಟೂರ್ನಿಯ ಪ್ರಶಸ್ತಿ ಗೆದ್ದಿದೆ. ಇಬ್ಬರೂ ಈ ಹಿಂದೆ 2019 ರಲ್ಲಿ ಥಾಯ್ಲೆಂಡ್ ಓಪನ್ ಸೂಪರ್ 500 ಪ್ರಶಸ್ತಿಯನ್ನು ಗೆದ್ದಿದ್ದರು.

ಆ ಬಳಿಕ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ ನಲ್ಲಿ ಮೂರನೇ ಶ್ರೇಯಾಂಕದ ಲಕ್ಷ್ಯ ಸೆನ್ 24-22, 21-17 ರಿಂದ 5ನೇ ಶ್ರೇಯಾಂಕದ ಸಿಂಗಾಪುರದ ಆಟಗಾರ ಹಾಗೂ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಇದು ಲಕ್ಷ್ಯ ಸೆನ್ ಗೆ ಅವರ ಮೊಟ್ಟಮೊದಲ ಇಂಡಿಯಾ ಓಪನ್ ಪ್ರಶಸ್ತಿ ಎನಿಸಿದೆ. ಅದಲ್ಲದೆ, ಇಂಡಿಯಾ ಓಪನ್ ಟೂರ್ನಿಯಲ್ಲಿ ಸ್ಪರ್ಧೆ ಮಾಡಿದ ಮೊದಲ ವರ್ಷವೇ ಚಾಂಪಿಯನ್ ಆದ ಭಾರತ ಮೊದಲ ಷಟ್ಲರ್ ಎನಿಸಿದ್ದಾರೆ. 


ಕಳೆದ ವಿಶ್ವ ಚಾಂಪಿಯನ್ ಷಿಪ್ ಟೂರ್ನಿಯ ಫೈನಲ್ ನಲ್ಲಿ ಭಾರತದ ಕೆ.ಶ್ರೀಕಾಂತ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಲೋಹ್ ಕೀನ್ ಯೂ ಅವರನ್ನು ಲಕ್ಷ್ಯ ಸೆನ್ 54 ನಿಮಿಷದ ಕಾದಾಟದಲ್ಲಿ ಮಣಿಸಿದರು. ಇದು ಬಿಡಬ್ಲ್ಯುಎಫ್ ಟೂರ್ ನಲ್ಲಿ ಲಕ್ಷ್ಯ ಸೆನ್ ಅವರ ಮೊದಲ ಸೂಪರ್ 500 ಪ್ರಶಸ್ತಿ ಎನಿಸಿದೆ. ಇದಕ್ಕೂ ಮುನ್ನ 2021ರ ವಿಶ್ವ ಚಾಂಪಿಯನ್ ಷಿಪ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕೆ.ಶ್ರೀಕಾಂತ್ ಅವರಿಗೆ ಸೋಲು ಕಾಣುವ ಮೂಲಕ ಕಂಚಿನ ಪದಕ ಜಯಿಸಿದ್ದರು.
 


India Open‌: ಕಿದಂಬಿ ಶ್ರೀಕಾಂತ್ ಸೇರಿ 7 ಶಟ್ಲರ್‌ಗಳಿಗೆ ಕೋವಿಡ್‌ ಪಾಸಿಟಿವ್..!
ಪಂದ್ಯದ ಮೊದಲ ಗೇಮ್ ನಲ್ಲಿ 16-10 ರಿಂದ ಲಕ್ಷ್ಯ ಮುನ್ನಡೆಯಲ್ಲಿದ್ದರೂ, ಬಳಿಕ ಲೋಹ್ ತಿರುಗೇಟು ನೀಡಿದ್ದರಿಂದ 19-19 ರಿಂದ ಗೇಮ್ ಸಮಬಲ ಕಂಡಿತ್ತು. ಆದರೆ, ಕೊನೆಯಲ್ಲಿ ಹೋರಾಟದ ಆಟವಾಡುವ ಮೂಲಕ ಲಕ್ಷ್ಯ ಸೆನ್ 24-22 ರಿಂದ ಗೇಮ್ ಜಯಿಸಿದ್ದರು. ಇನ್ನು 2ನೇ ಗೇಮ್ ನಲ್ಲೂ ಲಕ್ಷ್ಯ ಹಾಗೂ ಲೋಹ್ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. 19-17ರಲ್ಲಿ ಇರುವಾಗ ಸತತ ಎರಡು ಅಂಕಗಳನ್ನು ಗೆಲ್ಲುವ ಮೂಲಕ ಪಂದ್ಯ ಹಾಗೂ ಚಾಂಪಿಯನ್ ಷಿಪ್ ಅನ್ನು ಜಯಿಸಿದರು.

ಅವಹೇಳನಕಾರಿ ಕಾಮೆಂಟ್‌ಗೆ ಕ್ಷಮೆಯಾಚಿಸಿದ ಸಿದ್ಧಾರ್ಥ್: ‌'God Bless Him' ಎಂದ ಸೈನಾ ನೆಹ್ವಾಲ್‌!
ಇತರ ಫಲಿತಾಂಶಗಳಲ್ಲಿ ಸಿಂಗಾಪುರದ ಹೀ ಯೋಂಗ್ ಕೈ ಟೆರ್ರಿ ಮತ್ತು ತಾನ್ ವೀ ಹಾನ್ ಅವರು ಮಲೇಷ್ಯಾದ ಚೆನ್ ಟ್ಯಾಂಗ್ ಜೀ ಮತ್ತು ಪೆಕ್ ಯೆನ್ ವೀ ಅವರನ್ನು 21-15, 21-18 ಸೆಟ್‌ಗಳಿಂದ ಸೋಲಿಸಿ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಗೆದ್ದರು. ಥಾಯ್ಲೆಂಡ್‌ನ ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ರಷ್ಯಾದ ಅನಸ್ತಾಸಿಯಾ ಅಚುರಿನಾ ಮತ್ತು ಓಲ್ಗಾ ಮೊರೊಜೊವಾ 21-13, 21-5 ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್ ಆದರು.  ಥಾಯ್ಲೆಂಡ್‌ನ ಎರಡನೇ ಶ್ರೇಯಾಂಕದ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ತನ್ನ ದೇಶದವರೇ ಆದ ಸುಪಾನಿಡಾ ಕಟೆಥಾಂಗ್ ಅವರನ್ನು 22-20, 19-21, 21-13 ಸೆಟ್‌ಗಳಿಂದ ಸೋಲಿಸಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 

Follow Us:
Download App:
  • android
  • ios