Asianet Suvarna News Asianet Suvarna News

India Open‌: ಕಿದಂಬಿ ಶ್ರೀಕಾಂತ್ ಸೇರಿ 7 ಶಟ್ಲರ್‌ಗಳಿಗೆ ಕೋವಿಡ್‌ ಪಾಸಿಟಿವ್..!

* ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೇಲೆ ಕೊರೋನಾ ವೈರಸ್ ವಕ್ರದೃಷ್ಟಿ

* ತಾರಾ ಆಟಗಾರ ಕಿದಂಬಿ ಶ್ರೀಕಾಂತ್ ಸೇರಿ 7 ಮಂದಿಗೆ ಕೋವಿಡ್ ಪಾಸಿಟಿವ್

* ಸದ್ಯ ಕೋವಿಡ್‌ಗೊಳಗಾದ ಎಲ್ಲಾ ಶಟ್ಲರ್‌ಗಳು ಐಸೋಲೇಷನ್‌ಗೆ ಒಳಗಾಗಿದ್ದಾರೆ

India Open 2022 Kidambi Srikanth among seven Badminton Player test positive for Covid 19 kvn
Author
Bengaluru, First Published Jan 14, 2022, 2:23 PM IST
  • Facebook
  • Twitter
  • Whatsapp

ನವದೆಹಲಿ(ಜ.14): ಕೊರೋನಾ ಸೋಂಕು (Coronavirus) ದೃಢಪಟ್ಟಕಾರಣ ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ ಕಿದಂಬಿ ಶ್ರೀಕಾಂತ್‌ (Kidambi Srikanth) ಸೇರಿದಂತೆ ಭಾರತದ ಏಳು ಶಟ್ಲರ್‌ಗಳು ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ (India Open Badminton Tournament) ಹಿಂದೆ ಸರಿದಿದ್ದಾರೆ. ಇದನ್ನು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌(ಬಿಡಬ್ಲ್ಯೂಎಫ್‌) ಗುರುವಾರ ಖಚಿತಪಡಿಸಿದೆ. ಮೊದಲ ಸುತ್ತು ಗೆದ್ದಿದ್ದ ಶ್ರೀಕಾಂತ್‌ ಜೊತೆ, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್‌, ತ್ರೀಸಾ ಜೊಲ್ಲಿ, ಮಿಥುನ್‌ ಮಂಜುನಾಥ, ಸಿಮ್ರಾನ್‌ ಅಮನ್‌ ಸಿಂಗ್‌ ಹಾಗೂ ಖುಷಿ ಗುಪ್ತಾ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ ಅವರೆಲ್ಲರೂ ಐಸೋಲೇಸನ್‌ ಒಳಗಾಗಿದ್ದಾರೆ. ಇನ್ನು, ಡಬಲ್ಸ್‌ ವಿಭಾಗದ ಸ್ಪರ್ಧಿಗಳು ಕೂಡಾ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇಂಡಿಯಾ ಓಪನ್‌: ಸಿಂಧು, ಕ್ವಾರ್ಟರ್‌ಗೆ, ಸೈನಾ ಔಟ್‌

ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು(PV Sindhu), ಲಕ್ಷ್ಯ ಸೆನ್‌ (Lakshya Sen) ಹಾಗೂ ಎಚ್‌.ಎಸ್‌.ಪ್ರಣಯ್‌ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಮಾಜಿ ಚಾಂಪಿಯನ್‌ ಸೈನಾ ನೆಹ್ವಾಲ್‌ (Saina Nehwal) ಸೋತು ಹೊರಬಿದ್ದಿದ್ದಾರೆ. 

ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಸಿಂಧು, ಭಾರತದ ಇರಾ ಶರ್ಮಾ ವಿರುದ್ಧ 21-10, 21-10 ಗೇಮ್‌ಗಳಿಂದ ಗೆದ್ದರೆ, ಸೈನಾ ಯುವ ಆಟಗಾರ್ತಿ ಮಾಳವಿಕಾ ವಿರುದ್ಧ 17-21, 9-21 ಗೇಮ್‌ಗಳಲ್ಲಿ ಸೋಲನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಸೆನ್‌, ಡೆನ್ಮಾರ್ಕ್ನ ಫೆಲಿಕ್ಸ್‌ ವಿರುದ್ಧ 21-12, 21-15 ಅಂತರದಲ್ಲಿ ಗೆದ್ದರೆ, ತಮ್ಮ ಎದುರಾಳಿ ಮಂಜುನಾಥ್‌ ಕೊರೋನಾದಿಂದಾಗಿ ಟೂರ್ನಿಯಿಂದ ಹೊರಬಿದ್ದ ಕಾರಣ ಪ್ರಣಯ್‌ ಕ್ವಾರ್ಟರ್‌ಗೆ ಅರ್ಹತೆ ಪಡೆದರು. ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತದ 14 ಶಟ್ಲರ್‌ಗಳಲ್ಲಿ ಇಬ್ಬರೇ ಕ್ವಾರ್ಟರ್‌ ಪ್ರವೇಶಿಸಿದ್ದು, ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌: ಭಾರತದ ಭಾಂಬ್ರಿ ಔಟ್‌

ಮೆಲ್ಬರ್ನ್‌: ಆಸ್ಪ್ರೇಲಿಯನ್‌ ಓಪನ್‌ (Australian Open) ಆರ್ಹತಾ ಸುತ್ತಿನಲ್ಲಿ ಭಾರತದ ಯೂಕಿ ಭಾಂಬ್ರಿ 2ನೇ ಪಂದ್ಯದಲ್ಲಿ ಸೋತು ಪ್ರಧಾನ ಸುತ್ತಿಗೇರುವಲ್ಲಿ ವಿಫಲರಾಗಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಯೂಕಿ, ಚೆಕ್‌ ಗಣರಾಜ್ಯದ ಥಾಮಸ್‌ ಮಚಾಕ್‌ ವಿರುದ್ಧ 1-6, 3-6 ಸೆಟ್‌ಗಳಿಂದ ಸೋತರು. ಇದರೊಂದಿಗೆ ಈ ಬಾರಿ ಆಸ್ಪ್ರೇಲಿಯನ್‌ ಓಪನ್‌ ಪ್ರಧಾನ ಸುತ್ತಿನ ಸಿಂಗಲ್ಸ್‌ ವಿಭಾಗದಲ್ಲಿ ಭಾರತೀಯರ ಸ್ಪರ್ಧೆ ಇರುವುದಿಲ್ಲ.

ಜೋಕೋವಿಚ್ ಫ್ರೆಂಚ್‌ ಓಪನ್‌ ಆಡ್ಬಹುದು: ಫ್ರಾನ್ಸ್‌ ಸಚಿವ

ಪ್ಯಾರಿಸ್‌: ಕೋವಿಡ್‌ ಲಸಿಕೆ (COVID Vaccine) ಪಡೆಯದಿದ್ದರೂ ನೋವಾಕ್‌ ಜೋಕೋವಿಚ್‌ (Novak Djokovic) ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ (French Open Grandslam) ಪಾಲ್ಗೊಳ್ಳಬಹುದು ಎಂದು ಫ್ರಾನ್ಸ್‌ನ ಕ್ರೀಡಾ ಸಚಿವೆ ರೊಕ್ಷಾನಾ ಮರಾಕಿನೇನು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಂಡ ಬಗ್ಗೆ ಮಾಹಿತಿ ನೀಡದ ಕಾರಣಕ್ಕೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಜೋಕೋವಿಚ್‌ಗೆ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿ, ಭಾರೀ ತಿಕ್ಕಾಟಕ್ಕೆ ಕಾರಣವಾಗಿರುವ ನಡುವೆಯೇ ಫ್ರಾನ್ಸ್‌ ಸಚಿವರಿಂದ ಈ ಹೇಳಿಕೆ ಬಂದಿದೆ. ‘ಲಸಿಕೆ ಪಡೆಯದ ಕ್ರೀಡಾಪಟುಗಳಿಗೂ ಫ್ರೆಂಚ್‌ ಓಪನ್‌ನಲ್ಲಿ ಸ್ಪರ್ಧೆಗೆ ಅವಕಾಶವಿದೆ. ಜೋಕೋವಿಚ್‌ಗೆ ಆಸ್ಪ್ರೇಲಿಯಾದಲ್ಲಿ ಎದುರಾದಂತಹ ನಿರ್ಬಂಧಗಳು ಇಲ್ಲಿಲ್ಲ’ ಎಂದಿದ್ದಾರೆ. ಫ್ರೆಂಚ್‌ ಓಪನ್‌ ಮೇ 16ಕ್ಕೆ ಆರಂಭವಾಗಲಿದೆ.

Australian Open 2022: ನೊವಾಕ್ ಜೋಕೋವಿಚ್‌ಗೆ ಮತ್ತೆ ಶಾಕ್ ಕೊಟ್ಟ ಆಸ್ಟ್ರೇಲಿಯಾ ಸರ್ಕಾರ..!

ಇದೇ ಜನವರಿ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೂ ಮುನ್ನ ವಿಶ್ವದ ನಂ.1 ಟೆನಿಸಿಗ ಜೋಕೋವಿಚ್‌ಗೆ ಆಸ್ಟ್ರೇಲಿಯಾ ಸರ್ಕಾರವು ಎರಡನೇ ಬಾರಿಗೆ ಶಾಕ್‌ ನೀಡಿದ್ದು, ಎರಡನೇ ಬಾರಿಗೆ ಅವರ ವೀಸಾವನ್ನು ರದ್ದುಪಡಿಸಿದೆ. ಹೀಗಾಗಿ ಜೋಕೋವಿಚ್‌ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. 

Follow Us:
Download App:
  • android
  • ios