ಕನ್ನಡ ಪ್ರಭ ವರದಿಗೆ ಎಚ್ಚೆತ್ತ ಕ್ರೀಡಾ ಇಲಾಖೆ; 4 ಗಂಟೆಗೆ ಈಶ್ವರಪ್ಪ ತುರ್ತು ಸಭೆ!
ಕೋಚ್ ನೇಮಕಾತಿಯಲ್ಲಿ ರಾಜ್ಯ ಕ್ರೀಡಾ ಇಲಾಖೆ ಮಾಡಿರುವ ಭಾರೀ ಎಡವಟ್ಟನ್ನು ಕನ್ನಡ ಪ್ರಭ ಸುದೀರ್ಘ ವರದಿ ಪ್ರಕಟಿಸಿತ್ತು. ತಕ್ಷಣವೇ ಎಚ್ಚೆತ್ತ ಕ್ರೀಡಾ ಸಚಿವ ಕೆಎಸ್ ಈಶ್ವರಪ್ಪ ಇದೀಗ ತುರ್ತು ಸಭೆ ಕರೆದಿದ್ದಾರೆ.
ಬೆಂಗಳೂರು(ಅ.31): ರಾಜ್ಯದಲ್ಲಿರುವ ಕ್ರೀಡಾ ವಸತಿ ಶಾಲೆಗಳಲ್ಲಿನ ಕೋಚ್ ಆಯ್ಕೆಯಲ್ಲಿ ಇಲಾಖೆ ಭಾರೀ ಎಡವಟ್ಟು ಮಾಡಿದೆ. ನಿಯಮ ಉಲ್ಲಂಘಿಸಿ, ಬೇಕಾ ಬಿಟ್ಟಿ ಕೋಚ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಇದೀಗ ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳು ಸಮಸ್ಯೆ ಎದುರಿಸುವಂತಾಗಿದೆ. ಕ್ರೀಡಾ ಇಲಾಖೆಯ ಲೋಪದ ಕುರಿತು ಸುವರ್ಣನ್ಯೂಸ್.ಕಾಂ ಸಹೋದರ ಸಂಸ್ಥೆ ಕನ್ನಡ ಪ್ರಭ ಸುದೀರ್ಘ ವರದಿ ಪ್ರಕಟಿಸಿತ್ತು. ಇಂದು(ಅ.31) ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಕ್ರೀಡಾ ಸಚಿವ ಕೆಎಸ್ ಈಶ್ವರಪ್ಪ ತುರ್ತು ಸಭೆ ಕರೆದಿದ್ದಾರೆ.
ಇದನ್ನೂ ಓದಿ: ರಾಜ್ಯದ ಕ್ರೀಡಾ ಕೋಚ್ ಆಯ್ಕೆಯಲ್ಲಿ ಭಾರೀ ಎಡವಟ್ಟು; ಈಶ್ವರಪ್ಪನವರೇ ಗಮನಿಸಿ!
ತ್ತೀಚೆಗೆ ಕ್ರೀಡಾ ಖಾತೆಯ ಉಸ್ತುವಾರಿ ವಹಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಇಂದು(ಅ.31) ಸಂಜೆ 4 ಗಂಟೆಗೆ ಸಭೆ ಕರೆದಿದ್ದಾರೆ. ಕ್ರೀಡಾ ಇಲಾಖೆಯಲ್ಲಿ ಸಭೆ ಕರೆದಿದ್ದು, ಆಗಿರುವ ಲೋಪಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ಕ್ರೀಡಾಪಟುಗಳಿಗೆ ಅನ್ಯಾವಾಗದಂತೆ ಎಚ್ಚರವಹಿಸಲು ಈಶ್ವರಪ್ಪ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕಂಠೀರವದ ಸಿಂಥೆಟಿಕ್ ಟ್ರ್ಯಾಕ್ ಮತ್ತಷ್ಟುವಿಳಂಬ?
ಕೋಚ್ ಆಯ್ಕೆಯಲ್ಲಿ ಕ್ರೀಡಾ ಇಲಾಖೆ ಒಂದಲ್ಲ, ಎರಡಲ್ಲ ಹಲವು ನಿಯಮಗಳನ್ನು ಉಲ್ಲಂಘಿಸಿದೆ. ಅಗತ್ಯ ಇರುವ ಕ್ರೀಡಾ ವಿಭಾಗಕ್ಕೆ ಕೋಚ್‌ಗಳನ್ನು ಪೂರೈಸಿದ, ಕ್ರೀಡಾಪಟುಗಳೇ ಇಲ್ಲದ ಕ್ರೀಡೆಗಳಿಗೆ ಕೋಚ್‌ಗಳನ್ನು ಆಯ್ಕೆ ಮಾಡಿದೆ. ನೇಮಕಾತಿಯಲ್ಲಿ ಅನುತ್ತೀರ್ಣರಾದ ತರಬೇತುದಾರರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಈ ಕುರಿತ ಕನ್ನಡ ಪ್ರಭ ವರದಿ ಮಾಡಿದೆ.
ಎಂತೆಂಥ ಲೋಪ?
- ರಾಯಚೂರಲ್ಲಿ ಫುಟ್ಬಾಲ್ ಪ್ರತಿಭೆಗಳಿದ್ದರೂ, ಕೋಚ್ ಇಲ್ಲ. ಹಾಕಿ ಕೋಚ್ ಅವರೇ ಫುಟ್ಬಾಲ್ ಆಟಗಾರರಿಗೂ ಕೋಚ್
- ಸೈಕ್ಲಿಂಗ್ ಪ್ರತಿಭೆಗಳು ಹೆಚ್ಚಿರುವ, ಸೈಕ್ಲಿಂಗ್ ಸಂಸ್ಥೆಯ ಕೇಂದ್ರ ಸ್ಥಾನವೇ ಆಗಿದ್ದರೂ ವಿಜಯಪುರಕ್ಕಿಲ್ಲ ಸೈಕ್ಲಿಂಗ್ ಕೋಚ್
- ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌ಐಎಸ್) ತರಬೇತಿ ಪಡೆದವರು ಹಿಂದೆ ಕೋಚ್ ಆಗಿದ್ದರೂ, ಈ ಬಾರಿ ಆಯ್ಕೆ ಇಲ್ಲ
- ರಾಜ್ಯದ ಕೋಚ್ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಬದಲು ತಮಿಳುನಾಡು, ಉತ್ತರಾಖಂಡ, ಮಹಾರಾಷ್ಟ್ರದವರಿಗೆ ಆದ್ಯತೆ
- ಪ್ರಮುಖವಾದ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ಆದ ವ್ಯಕ್ತಿಗೂ ಸೈಕ್ಲಿಂಗ್ ತರಬೇತುದಾರರಾಗಿ ಆಯ್ಕೆಯಾಗುವ ಯೋಗ
- ಕೇವಲ ಇಬ್ಬರು ಅಥ್ಲೀಟ್‌ಗಳು ಇರುವ ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ಇಬ್ಬರು ಅಥ್ಲೆಟಿಕ್ಸ್ ತರಬೇತುದಾರರ ನೇಮಕ