ಮಾಸ್ಕೋ[ಡಿ.30]: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ವಿಶ್ವ ಮಹಿಳಾ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಹಾಗೂ 2ನೇ ಚೆಸ್‌ ಪಟು ಎನಿಸಿಕೊಂಡಿದ್ದಾರೆ. 2017ರಲ್ಲಿ ವಿಶ್ವನಾಥನ್‌ ಆನಂದ್‌ ಪ್ರಶಸ್ತಿ ಜಯಿಸಿದ್ದರು.

ಅಪ್ಪನ ಸವಾಲು ಸ್ವೀಕರಿಸದೆಯೇ ವಿಶ್ವ ಚಾಂಪಿಯನ್‌ ಆದ ವಿಶ್ವನಾಥನ್ ಆನಂದ್!

ಇಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಟೈ ಬ್ರೇಕರ್‌ ಪಂದ್ಯದಲ್ಲಿ ಚೀನಾದ ಲೀ ಟಿನ್‌ಜೀ ವಿರುದ್ಧ ರೋಚಕ ಗೆಲುವು ಸಾಧಿಸಿದರು. 32 ವರ್ಷದ ಭಾರತೀಯ ಆಟಗಾರ್ತಿ 12ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನಾದ ಟ್ಯಾಂಗ್‌ ಝಾಂಗ್ಯಿ ವಿರುದ್ಧ ಗೆದ್ದು ಟೈ ಬ್ರೇಕರ್‌ ಸುತ್ತಿಗೆ ಪ್ರವೇಶಿಸಿದರು. ಮೊದಲ 5 ಸುತ್ತಿನಲ್ಲಿ 4.5 ಅಂಕಗಳನ್ನು ಪಡೆದು ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಹಂಪಿ, ಬಳಿಕ ರಷ್ಯಾದ ಇರಿನಾ ಬುಲ್ಮಗಾ ವಿರುದ್ಧ ಸೋಲುಂಡು ತುಸು ಹಿನ್ನಡೆ ಅನುಭವಿಸಿದರು. ಆನಂತರ ಕೊನೆ 2 ಸುತ್ತುಗಳನ್ನು ಗೆದ್ದು ಮತ್ತೆ ಲಯ ಕಂಡುಕೊಂಡರು. ಅಂತಿಮವಾಗಿ 9 ಅಂಕಗಳನ್ನು ಸಂಪಾದಿಸಿದ ಹಂಪಿ, ಟಿಂಗ್‌ಜೀ ಹಾಗೂ ಟರ್ಕಿಯ ಎಕಟೆರಿನಾ ಅಟಾಲಿಕ್‌ ಜತೆ ಸಮಬಲ ಸಾಧಿಸಿದರು. ಅಟಾಲಿಕ್‌ ವಿರುದ್ಧ ಟಿಂಗ್‌ಜೀ ಸೋತಿದ್ದರಿಂದ ಭಾರತೀಯ ಆಟಗಾರ್ತಿಗೆ ಟೈ ಬ್ರೇಕರ್‌ ಸುತ್ತು ಪ್ರವೇಶಿಸುವ ಅವಕಾಶ ದೊರೆಯಿತು.

ಡೆಲ್ಲಿ ಕ್ರಿಕೆಟ್ ವಾರ್ಷಿಕ ಸಭೆಯಲ್ಲಿ ಬಡಿದಾಟ; ಬ್ಯಾನ್‌ಗೆ ಆಗ್ರಹಿಸಿದ ಗಂಭೀರ್!

ಟೈ ಬ್ರೇಕರ್‌ನ ಮೊದಲ ಗೇಮ್‌ನಲ್ಲಿ ಸೋಲುಂಡ ಹಂಪಿ, 2ನೇ ಗೇಮ್‌ನಲ್ಲಿ ಜಯಗಳಿಸಿದರು. ಆರ್ಮಗೆಡ್ಡೋನ್‌ (ಕಟ್ಟಕಡೆಯ) ಸುತ್ತಿನಲ್ಲಿ ಕಪ್ಪು ಕಾಯಿಗಳನ್ನು ಮುನ್ನಡೆಸಿದ ಹಂಪಿ, ಚಿನ್ನದ ಪದಕ ಗೆಲ್ಲಲು ಡ್ರಾ ಸಾಧಿಸಿದ್ದರೆ ಸಾಕಾಗಿತ್ತು. ಟಿಂಗ್‌ಜೀ ಬೆಳ್ಳಿ ಗೆದ್ದರೆ, ಅಟಾಲಿಕ್‌ ಕಂಚಿಗೆ ತೃಪ್ತಿಪಟ್ಟರು.