ಡೆಲ್ಲಿ ಕ್ರಿಕೆಟ್ ವಾರ್ಷಿಕ ಸಭೆಯಲ್ಲಿ ಬಡಿದಾಟ; ಬ್ಯಾನ್‌ಗೆ ಆಗ್ರಹಿಸಿದ ಗಂಭೀರ್!
ದೆಹಲಿ ಕ್ರಿಕೆಟ್ ಸಂಸ್ಥೆಯೊಳಗಿನ ಒಳಜಗಳ ಇಂದು ನಿನ್ನೆಯದಲ್ಲ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದಾಗ ಎಲ್ಲವೂ ಸರಿಯಾಗಿತ್ತು. ಜೇಟ್ಲಿ ಬಳಿಕ ದೆಹಲಿ ಕ್ರಿಕೆಟ್ ಸಂಸ್ಥೆ ಪಾತಾಳಕ್ಕೆ ಕುಸಿಯ ತೊಡಗಿತು. ಇತ್ತೀಚೆಗಷ್ಟೇ ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಜತ್ ಶರ್ಮಾ ರಾಜೀನಾಮೆ ನೀಡೋ ಮೂಲಕ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಬೀತಾಗಿತ್ತು. ಇದೀಗ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಡಿದಾಡಿಕೊಂಡು ಎಲ್ಲರೂ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ದೆಹಲಿ(ಡಿ.29): ದೆಹಲಿ ಕ್ರಿಕೆಟ್ ಸಂಸ್ಥೆಯ ಒಳಜಗಳದಿಂದಲೇ ಅಧ್ಯಕ್ಷ ರಜತ್ ಶರ್ಮಾ ಇತ್ತೀಚೆಗಷ್ಟ ರಾಜೀನಾಮೆ ನೀಡಿ ಹೊರಬಂದಿದ್ದರು. ಬಳಿಕ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದಿದ್ದರು. ಈ ಘಟನೆ ದೇಶದಲ್ಲೇ ಸದ್ದು ಮಾಡಿತ್ತು. ಇದೀಗ ದೆಹಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳು ಬಡಿದಾಡಿ ಇರೋ ಮಾನವನ್ನು ಕಳೆದಿದ್ದಾರೆ.
ಇದನ್ನೂ ಓದಿ: IPL ಹರಾಜು: KKR ತಂಡದ ಆಯ್ಕೆ ಬಗ್ಗೆ ಕಿಡಿಕಾರಿದ ಗೌತಮ್ ಗಂಭೀರ್!.
ವಾರ್ಷಿಕ ಸಾಮಾನ್ಯ ಸಭೆ ಅಂತ್ಯಗೊಂಡಿದ್ದು ಬಡಿದಾಟದಲ್ಲಿ. ಪದಾಧಿಕಾರಿಗಳು ಹೊಡೆದಾಟ, ರಂಪಾಟದಿಂದ ಕ್ರಿಕೆಟಿಗರು, ದೆಹಲಿ ಕ್ರಿಕೆಟ್ ಅಭಿವೃದ್ದಿ ಕುರಿತು ನಿರ್ಣಯ ಕೊಗೊಳ್ಳಬೇಕಿದ್ದ ಸಭೆ ರಣಾಂಗಣವಾಗಿ ಮಾರ್ಪಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಕ್ಷಣವೇ ಘಟನೆಯನ್ನು ಖಂಡಿಸಿದ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್, ರಂಪಾಟ ಮಾಡಿದವರನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ತಂಡ ಖರೀದಿಸಲು ಮುಂದಾದ ಗೌತಮ್ ಗಂಭೀರ್!
ವಿಡಿಯೋ ಪೋಸ್ಟ್ ಮಾಡಿರುವ ಗಂಭೀರ್, ದೆಹಲಿ ಕ್ರಿಕೆಟ್ ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದಕ್ಕೆ ಸಾಕ್ಷಿ ಇಲ್ಲಿದೆ. ತಕ್ಷಣವೇ ದೆಹಲಿ ಕ್ರಿಕೆಟ್ ಸಂಸ್ಥೆಯನ್ನು ಅಮಾನತು ಮಾಡಿ, ಬಡಿದಾಡಿಕೊಂಡವರಿಗೆ ಅಜೀವ ನಿಷೇಧ ಶಿಕ್ಷೆ ವಿಧಿಸಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾಗೆ ಮನವಿ ಮಾಡಿದ್ದಾರೆ.
ದೆಹಲಿ ಕ್ರಿಕೆಟ್ ಸಂಸ್ಥೆಯ ಅವ್ಯವಹಾರಗಳ ಬಗ್ಗೆ ಕಿಡಿ ಕಾರುತ್ತಲೇ ಇದ್ದ ಗಂಭೀರ್, ಈ ಹಿಂದೆಯೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ದೆಹಲಿ ಕ್ರಿಕೆಟ್ ಸಂಸ್ಥೆ ತಾರತಮ್ಯ ಮಾಡುತ್ತಿದೆ ಎಂದಿದ್ದರು.