Asianet Suvarna News Asianet Suvarna News

ಖೇಲೋ ಇಂಡಿಯಾ: ಸೈಕ್ಲಿಂಗ್‌ನಲ್ಲಿ ಕರ್ನಾಟಕಕ್ಕೆ 4 ಪದಕ

ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಮೂರನೇ ದಿನ ಕರ್ನಾಟಕದ ಕ್ರೀಡಾಪಟಗಳು 4 ಪದಕ ಬಾಚಿಕೊಂಡಿದ್ದಾರೆ. ಈ ನಾಲ್ಕು ಪದಕಗಳು ಸೈಕ್ಲಿಂಗ್ ವಿಭಾಗದಿಂದ ಬಂದಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Khelo India Youth Games karnataka won 4 medals on day 3
Author
Guwahati, First Published Jan 13, 2020, 10:52 AM IST
  • Facebook
  • Twitter
  • Whatsapp

ಗುವಾಹಟಿ(ಜ.13):3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ 3ನೇ ದಿನವಾದ ಭಾನುವಾರ ಕರ್ನಾಟಕದ ಸೈಕ್ಲಿಸ್ಟ್‌ಗಳು 4 ಪದಕ ಗೆದ್ದಿದ್ದಾರೆ. 

ಖೇಲೋ ಇಂಡಿಯಾಗೆ ಅದ್ಧೂರಿ ಚಾಲನೆ

ಇದರೊಂದಿಗೆ ಕರ್ನಾಟಕ 2 ಬೆಳ್ಳಿ ಹಾಗೂ 3 ಕಂಚಿನೊಂದಿಗೆ ಒಟ್ಟಾರೆ 5 ಪದಕ ಜಯಿಸಿದ್ದು ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದೆ. ಸೈಕ್ಲಿಂಗ್‌ ಸ್ಪರ್ಧೆ ಭಾನುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ರಾಜ್ಯದ ಸೈಕ್ಲಿಸ್ಟ್‌ಗಳು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಅಂಡರ್‌ 21 ಬಾಲಕರ ವೈಯಕ್ತಿಕ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ 30 ಕಿ.ಮೀ. ದೂರವನ್ನು ರಾಜು ಬಾಟಿ 41:05.179 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಕಂಚಿನ ಪದಕ ಗೆದ್ದರು.

ಅಂಡರ್‌ 21 ಬಾಲಕಿಯರ ವೈಯಕ್ತಿಕ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ 20 ಕಿ.ಮೀ. ದೂರವನ್ನು ಮೇಘಾ ಗುಗಾಡ್‌ 31:05.423 ನಿಮಿಷಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಇದೇ ಸ್ಪರ್ಧೆಯಲ್ಲಿ ರಾಜ್ಯದ ಸೌಮ್ಯ ಅಂತಾಪುರ 31:33.206 ನಿಮಿಷಗಳಲ್ಲಿ ಕ್ರಮಿಸಿ ಕಂಚಿನ ಪದಕ ಗೆದ್ದರು. ಅಂಡರ್‌ 17 ಬಾಲಕರ ವೈಯಕ್ತಿಕ ಟೈಮ್‌ ಟ್ರಯಲ್‌ ಸ್ಪರ್ಧೆಯ 20 ಕಿ.ಮೀ. ದೂರವನ್ನು ಸಂಪತ್‌ ಪಸಮೆಲ್‌ 27:55.685 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಕಂಚು ಜಯಿಸಿದರು.

ಮೂರನೇ ದಿನದಂತ್ಯಕ್ಕೆ 12 ಚಿನ್ನ, 10 ಬೆಳ್ಳಿ ಹಾಗೂ 16 ಕಂಚು ಸಹಿತ 38 ಪದಕಗಳೊಂದಿಗೆ ಮಹರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿ 8 ಚಿನ್ನ, 6 ಬೆಳ್ಳಿ, 9 ಕಂಚಿನೊಂದಿಗೆ  23 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು 7 ಚಿನ್ನ 3 ಬೆಳ್ಳಿ ಹಾಗೂ 6 ಕಂಚಿನ ಪದಕ ಜಯಿಸಿರುವ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ.

Follow Us:
Download App:
  • android
  • ios