ಗುವಾಹಟಿ(ಜ.11): 3ನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಚಾಲನೆ ನೀಡಿದರು. ನೂರಾರು ಕಲಾವಿದರು ಉದ್ಘಾಟನಾ ಸಮಾರಂಭದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದರು. 

ಇದನ್ನೂ ಓದಿ: ಪ್ರೊ ಕಬಡ್ಡಿ ಬಳಿಕ ಬೆಂಗ್ಳೂರಿಂದ ಪಿಬಿಎಲ್‌ ಎತ್ತಂಗಡಿ!

ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು 25000ಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದು ವಿಶೇಷ. ಅಸ್ಸಾಂನ ತಾರಾ ಅಥ್ಲೀಟ್‌ ಹಿಮಾ ದಾಸ್‌ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಮೊದಲ ದಿನ ಜಿಮ್ನಾಸ್ಟಿಕ್ಸ್‌ನಲ್ಲಿ ಪದಕ ಸ್ಪರ್ಧೆಗಳು ನಡೆದವು. ತ್ರಿಪುರಾದ ಪ್ರಿಯಾಂಕ ದಾಸ್‌ ಗುಪ್ತಾ, ಅಂಡರ್‌-17 ಆಲ್ರೌಂಡ್‌ ಕ್ರೌನ್‌ನಲ್ಲಿ ಚಿನ್ನ ಗೆದ್ದು, ಈ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಪಾತ್ರರಾದರು.

ಇದನ್ನೂ ಓದಿ: 2020ರ ಒಲಿಂಪಿಕ್ಸ್‌ಗೆ ಕುಸ್ತಿಪಟು ಸುಶೀಲ್‌ ಅನುಮಾನ!

ಮಹಿಳೆಯರ ವಾಲಿಬಾಲ್‌ನಲ್ಲಿ ಕರ್ನಾಟಕ ಅಂಡರ್‌-17 ಮಹಿಳಾ ತಂಡ ಗೆಲುವಿನ ಆರಂಭ ಪಡೆದುಕೊಂಡಿತು. ರಾಜ್ಯದ ಮಹಿಳಾ ಹಾಗೂ ಪುರುಷರ ಕಬಡ್ಡಿ ತಂಡಗಳು ಸಹ ಜಯ ಸಾಧಿಸಿದವು.