Asianet Suvarna News Asianet Suvarna News

2020ರ ಒಲಿಂಪಿಕ್ಸ್‌ಗೆ ಕುಸ್ತಿಪಟು ಸುಶೀಲ್‌ ಅನುಮಾನ!

ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಮನವಿಯನ್ನು ಕುಸ್ತಿ ಫೆಡರೇಶನ್ ತಿರಸ್ಕರಿಸಿದೆ. ಹೀಗಾಗಿ 2020ರ ಒಲಿಂಪಿಕ್ಸ್ ಕೂಟದಿಂದ ಸುಶೀಲ್ ಹೊರಗುಳಿಯವ ಸಾಧ್ಯತೆ ಇದೆ.

Wrestler sushil kumar request rejected by wrestling federation India
Author
Bengaluru, First Published Jan 3, 2020, 11:10 AM IST

ನವದೆಹಲಿ(ಜ.03) : ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್‌ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವೆನಿಸಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸುಶೀಲ್‌, ಶುಕ್ರವಾರ ನಡೆಯಲಿರುವ ಆಯ್ಕೆ ಟ್ರಯಲ್ಸ್‌ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸುಶೀಲ್ ಪ್ರತಿಷ್ಠಿತ ಕೂಟದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಚುನಾವಣಾ ಅಖಾಡಕ್ಕೆ ಧುಮುಕಿದ ಕುಸ್ತಿ ಪಟು ಯೋಗೇಶ್ವರ್‌ಗೆ ಸೋಲು!

74 ಕೆ.ಜಿ ವಿಭಾಗದ ಆಯ್ಕೆ ಟ್ರಯಲ್ಸ್‌ ಅನ್ನು ಮುಂದೂಡುವಂತೆ ಅವರು ಮನವಿ ಮಾಡಿದ್ದರು. ಆದರೆ ಭಾರತೀಯ ಕುಸ್ತಿ ಫೆಡರೇಷನ್‌, ಸುಶೀಲ್‌ರ ಮನವಿಯನ್ನು ತಿರಸ್ಕರಿಸಿದೆ. ಆಯ್ಕೆ ಟ್ರಯಲ್ಸ್‌ನಲ್ಲಿ ಗೆಲ್ಲುವವರು ಜ.15ರಿಂದ 18ರ ವರೆಗೂ ರೋಮ್‌ನಲ್ಲಿ ನಡೆಯಲಿರುವ ಮೊದಲ ರಾರ‍ಯಂಕಿಂಗ್‌ ಸೀರೀಸ್‌ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ. 

ಇದನ್ನೂ ಓದಿ: ಸುಮೋ ಪಟುಗಳೊಂದಿಗೆ ಜೋಕೋವಿ​ಚ್‌!.

ಫೆ.18ರಿಂದ 23ರ ವರೆಗೂ ನವದೆಹಲಿಯಲ್ಲಿ ಏಷ್ಯನ್‌ ಚಾಂಪಿಯನ್‌ಶಿಪ್‌ ಹಾಗೂ ಮಾ.27ರಿಂದ 29ರ ವರೆಗೂ ಚೀನಾದ ಕ್ಸಿಯಾನ್‌ನಲ್ಲಿ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಸುತ್ತು ನಡೆಯಲಿದೆ. 74 ಕೆ.ಜಿ ವಿಭಾಗದಲ್ಲಿ ಆಯ್ಕೆಯಾಗುವ ಕುಸ್ತಿಪಟು, ರಾರ‍ಯಂಕಿಂಗ್‌ ಸೀರೀಸ್‌ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೆ ಸುಶೀಲ್‌ಗೆ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಗಬಹುದು.
 

Follow Us:
Download App:
  • android
  • ios