ಖೇಲೋ ಇಂಡಿಯಾ: ಕರ್ನಾಟಕಕ್ಕೆ 2 ಚಿನ್ನ
ಖೇಲೋ ಇಂಡಿಯಾದ ನಾಲ್ಕನೇ ದಿನವೂ ಕರ್ನಾಟಕ 2 ಚಿನ್ನ ಹಾಗೂ 2 ಕಂಚಿನ ಪದಕಗಳೊಂದಿಗೆ ಒಟ್ಟು 4 ಪದಕ ಜಯಿಸಿದೆ. ಈ ಮೂಲಕ 16ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಗುವಾಹಟಿ(ಜ.16): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ 4ನೇ ದಿನವಾದ ಸೋಮವಾರ ಕರ್ನಾಟಕ 2 ಚಿನ್ನ, 2 ಕಂಚು ಗೆದ್ದಿದೆ. ಒಟ್ಟಾರೆ 2 ಚಿನ್ನ 2 ಬೆಳ್ಳಿ ಹಾಗೂ 5 ಕಂಚಿನೊಂದಿಗೆ 9 ಪದಕ ಗೆದ್ದ ಕರ್ನಾಟಕ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಜಿಗಿದಿದೆ.
ಖೇಲೋ ಇಂಡಿಯಾ: ಸೈಕ್ಲಿಂಗ್‌ನಲ್ಲಿ ಕರ್ನಾಟಕಕ್ಕೆ 4 ಪದಕ
ಅಂಡರ್ 21 ಬಾಲಕರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ನ ಫ್ಲೋರ್ ಎಕ್ಸರ್‌ಸೈಸ್ ಸ್ಪರ್ಧೆಯಲ್ಲಿ ಕರ್ನಾಟಕದ ಅಮೃತ್ ಮುದ್ರಾಬೆಟ್ 12.45 ಅಂಕಗಳಿಸುವ ಮೂಲಕ ಚಿನ್ನ ಗೆದ್ದರು. ಇದರೊಂದಿಗೆ ರಾಜ್ಯಕ್ಕೆ ಮೊದಲ ಚಿನ್ನ ತಂದ ಸಾಧನೆ ಮಾಡಿದರು. ಬಾಲಕಿಯರ ಜಿಮ್ನಾಸ್ಟಿಕ್‌ನ ವಾಲ್ಟಿಂಗ್ ಟೇಬಲ್ ಸ್ಪರ್ಧೆಯಲ್ಲಿ ವರ್ಷಿಣಿ ಚಿನ್ನ ಜಯಿಸಿದರು.
ಅಂಡರ್ 21 ಬಾಲಕರ ವಿಭಾಗದ 100 ಕಿ.ಮೀ. ರೋಡ್ ರೇಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಗಗನ್ ರೆಡ್ಡಿ ಕಂಚಿನ ಪದಕ ಗೆದ್ದರು. ಅಂಡರ್ 17 ಬಾಲಕಿಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ರಾಜ್ಯದ ಯಶಸ್ವಿನಿ ಘೋರ್ಪಡೆ, ಹರಾರಯಣದ ಸುಹನಾ ಸೈನಿ ವಿರುದ್ಧ 8-11, 11-4, 8-11, 11-6, 11-8 ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಕಂಚು ಗೆದ್ದರು.
ನಾಲ್ಕನೇ ದಿನದಂತ್ಯದಲ್ಲೂ ಮಹರಾಷ್ಟ್ರ ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಹರಾಷ್ಟ್ರ 17 ಚಿನ್ನ, 22 ಬೆಳ್ಳಿ ಹಾಗೂ 37 ಕಂಚಿನ ಪದಕಗಳೊಂದಿಗೆ ಒಟ್ಟು 76 ಪದಕ ಜಯಿಸಿ ನಂ.1 ಸ್ಥಾನದಲ್ಲಿದೆ. ಹರ್ಯಾಣ 17 ಚಿನ್ನ, 16 ಬೆಳ್ಳಿ ಹಾಗೂ 14 ಬೆಳ್ಳಿ ಸಹಿತ 47 ಪದಕಗಳೊಂದಿಗೆ ಡೆಲ್ಲಿ ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ 14 ಚಿನ್ನ, 7 ಬೆಳ್ಳಿ ಹಾಗೂ 15 ಕಂಚು ಸಹಿತ 36 ಪದಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.