ಇಂದಿನಿಂದ ಬಳ್ಳಾರಿಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್‌ ಕೂಟ

* ರಾಷ್ಟ್ರೀಯ ಪುರುಷರ ಬಾಕ್ಸಿಂಗ್‌ ಟೂರ್ನಿಗೆ ಬಳ್ಳಾರಿ ಆತಿಥ್ಯ

* ಏಷ್ಯನ್‌ ಚಾಂಪಿಯನ್‌ಶಿಪ್‌ ಪದಕ ವಿಜೇತ ಶಿವ ಥಾಪ ಭಾಗಿ

* ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಪಡೆಯಲಿದ್ದಾರೆ

Karnataka Ballari to host Boxing Senior National Championship kvn

ಬೆಂಗಳೂರು(ಸೆ.15): ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ಭಾರತದ ತಾರಾ ಬಾಕ್ಸರ್‌ಗಳು ಬುಧವಾರದಿಂದ ಬಳ್ಳಾರಿಯ ವಿಜಯನಗರದಲ್ಲಿರುವ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌‍(ಐಐಎಸ್‌)ನಲ್ಲಿ ನಡೆಯಲಿರುವ ರಾಷ್ಟ್ರೀಯ ಪುರುಷರ ಬಾಕ್ಸಿಂಗ್‌ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅಮಿತ್‌ ಪಂಘಾಲ್‌ ಟೂರ್ನಿಗೆ ಗೈರಾದರೂ, ತಾರಾ ಆಕರ್ಷಣೆಗೆ ಕೊರತೆ ಇಲ್ಲ. 5 ಬಾರಿ ಏಷ್ಯನ್‌ ಚಾಂಪಿಯನ್‌ಶಿಪ್‌ ಪದಕ ವಿಜೇತ ಶಿವ ಥಾಪ, ಮಾಜಿ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಗೌರವ್‌ ಬಿದೂರಿ ಸೇರಿ ಇನ್ನೂ ಅನೇಕರು ಕಣದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಬಾಕ್ಸರ್‌ಗಳು, ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಪಡೆಯಲಿದ್ದಾರೆ.

ಕರ್ನಾಟಕ ಟಿ20, ಏಕದಿನ ಸಂಭವನೀಯ ಕ್ರಿಕೆಟ್ ತಂಡ ಪ್ರಕಟ

ಇಂದಿನಿಂದ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಕೂಟ

ವಾರಾಂಗಲ್‌: ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಯುವ ಅಥ್ಲೀಟ್‌ಗಳು ಬುಧವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ. 

5 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಕರ್ನಾಟಕದ 26 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 15 ವರ್ಷದ ಹೈಜಂಪ್‌ ಪಟು ಪವನಾ ನಾಗರಾಜ್‌ ಮೇಲೆ ಎಲ್ಲರ ಕಣ್ಣಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಕೇವಲ ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ಕ್ರೀಡಾಕೂಟಕ್ಕೆ ಗೈರಾಗಲಿದ್ದಾರೆ.

Latest Videos
Follow Us:
Download App:
  • android
  • ios