* ಮುಷ್ತಾಕ್ ಅಲಿ, ವಿಜಯ್‌ ಹಜಾರೆ ಟೂರ್ನಿಗೆ ಕರ್ನಾಟಕ ಸಂಭವನೀಯ ತಂಡ ಪ್ರಕಟ* ಕಳಪೆ ಪ್ರದರ್ಶನದ ಹೊರತಾಗಿಯೂ ಕರುಣ್‌ ನಾಯರ್‌ಗೆ ಸ್ಥಾನ* ನವೆಂಬರ್ 4ರಿಂದ ಮುಷ್ತಾಕ್‌ ಅಲಿ ಟಿ20 ಟೂರ್ನಿ ಆರಂಭ

ಬೆಂಗಳೂರು(ಸೆ.15): 2021-22ರ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಹಾಗೂ ವಿಜಯ್‌ ಹಜಾರೆ ಏಕದಿನ ಟೂರ್ನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 35 ಆಟಗಾರರ ಸಂಭವನೀಯ ತಂಡವನ್ನು ಪ್ರಕಟಿಸಿದೆ. 

ತಂಡದಲ್ಲಿ ತಾರಾ ಆಟಗಾರರಾದ ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ ಸ್ಥಾನ ಪಡೆದಿದ್ದಾರೆ. ಕಳೆದ ಒಂದೆರಡು ಋುತುಗಳಲ್ಲಿ ಕಳಪೆ ಆಟವಾಡಿದ ಹೊರತಾಗಿಯೂ ಕರುಣ್‌ ನಾಯರ್‌ಗೆ ಸ್ಥಾನ ನೀಡಲಾಗಿದೆ. ನವೆಂಬರ್ 4ರಿಂದ ಮುಷ್ತಾಕ್‌ ಅಲಿ ಟಿ20 ಟೂರ್ನಿ ಆರಂಭಗೊಳ್ಳಲಿದ್ದು, ಡಿಸೆಂಬರ್ 8ರಿಂದ ವಿಜಯ್‌ ಹಜಾರೆ ಟೂರ್ನಿ ಶುರುವಾಗಲಿದೆ.

ಮಾಮರವೆಲ್ಲೋ ಕೋಗಿಲೆ ಎಲ್ಲೋ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಅನಿಲ್ ಕುಂಬ್ಳೆ!

Scroll to load tweet…

ಸಂಭವನೀಯ ತಂಡ: ರಾಹುಲ್‌, ಮಯಾಂಕ್‌, ಪಡಿಕ್ಕಲ್‌, ಸಮರ್ಥ್‍, ಅಕಿಬ್‌ ಜಾವದ್‌, ರೋಹನ್‌ ಕದಂ, ರೋಹನ್‌ ಪಾಟೀಲ್‌, ಅಭಿನವ್‌ ಮನೋಹರ್‌, ಕೆ.ವಿ.ಸಿದ್ಧಾರ್ಥ್‍, ಮನೀಶ್‌ ಪಾಂಡೆ, ಅನಿರುದ್ಧ ಜೋಶಿ, ಕರುಣ್‌ ನಾಯರ್‌, ಶ್ರೀಜಿತ್‌, ಬಿ.ಆರ್‌.ಶರತ್‌, ಶರತ್‌ ಶ್ರೀನಿವಾಸ್‌, ನಿಹಾಲ್‌, ಜೆ.ಸುಚಿತ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಪ್ರವೀಣ್‌ ದುಬೆ, ಆದಿತ್ಯ ಸೋಮಣ್ಣ, ಮನೋಜ್‌ ಭಂಡಾಗೆ, ಶುಭಾಂಗ್‌ ಹೆಗ್ಡೆ, ಕೆ.ಸಿ.ಕರಿಯಪ್ಪ, ಅಭಿಮನ್ಯು ಮಿಥುನ್‌, ಪ್ರಸಿದ್ಧ್ ಕೃಷ್ಣ, ಪ್ರತೀಕ್‌ ಜೈನ್‌, ವೈಶಾಕ್‌, ರೋನಿತ್‌ ಮೋರೆ, ನಿಶ್ಚಿತ್‌ ರಾವ್‌, ಆದಿತ್ಯ ಗೋಯಲ್‌, ದರ್ಶನ್‌ ಎಂ.ಬಿ, ವಿದ್ಯಾಧರ್‌ ಪಾಟೀಲ್‌, ಅನೀಶ್‌ ಕೆ.ವಿ., ಕುಶಾಲ್‌ ವಾಧ್ವಾನಿ.