Asianet Suvarna News Asianet Suvarna News

ಮತ್ತೊಂದು ಲೀಗ್: ಆರಂಭವಾಗುತ್ತಿದೆ ಕರ್ನಾಟಕ ಪ್ರೀಮಿಯರ್‌ ಕಬಡ್ಡಿ ಲೀಗ್‌ !

ಕರ್ನಾಟಕದಲ್ಲಿ ಇದೀಗ 2ನೇ ಕಬಡ್ಡಿ ಲೀಗ್ ಆರಂಭವಾಗುತ್ತಿದೆ. ಕರ್ನಾಟಕ ಪ್ರೋ ಕಬಡ್ಡಿ ಬೆನ್ನಲ್ಲೇ ಇದೀಗ ಕರ್ನಾಟಕ ಪ್ರೀಮಿಯರ್ ಕಬಡ್ಡಿ ಲೀಗ್ ಟೂರ್ನಿ ಆರಂಭವಾಗುತ್ತಿದೆ. 2ನೇ ಕಬಡ್ಡಿ ಲೀಗ್ ಮಾಹಿತಿ ಇಲ್ಲಿದೆ. 

Karnataka armature kabaddi  organize KPL league in Mangalore
Author
Bengaluru, First Published Dec 15, 2019, 12:20 PM IST
  • Facebook
  • Twitter
  • Whatsapp

ಬೆಂಗಳೂರು(ಡಿ.15):  ಕರ್ನಾಟಕ ಅಮೆಚೂರ್‌ ಕಬಡ್ಡಿ ಸಂಸ್ಥೆ, ರಾಜ್ಯದಲ್ಲಿ ಕಬಡ್ಡಿ ಕ್ರೀಡೆಯನ್ನು ಮತ್ತಷ್ಟುಜನಪ್ರಿಯಗೊಳಿಸಲು ದಿಢೀರನೆ ಎರಡೆರಡು ಟೂರ್ನಿಗಳನ್ನು ಆಯೋಜಿಸಲು ಮುಂದಾಗಿದೆ. ಕರ್ನಾಟಕ ಪ್ರೊ ಕಬಡ್ಡಿ ಹೆಸರಿನ ಟೂರ್ನಿ ಆರಂಭಗೊಳ್ಳುತ್ತಿದೆ ಎನ್ನುವ ಸುದ್ದಿಯನ್ನು ಶನಿವಾರವಷ್ಟೇ ‘ಸುವರ್ಣನ್ಯೂಸ್.ಕಾಂ’ ಪ್ರಕಟಿಸಿತ್ತು. ಹೊಸ ಸುದ್ದಿ ಏನೆಂದರೆ, ಈ ಟೂರ್ನಿಯ ಜತೆ ಕರ್ನಾಟಕ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಕೆಪಿಕೆಎಲ್‌) ಟೂರ್ನಿ ಸಹ ಆಯೋಜನೆಗೊಳ್ಳುತ್ತಿದೆ.

ಇದನ್ನೂ ಓದಿ: ಆರಂಭವಾಗುತ್ತಿದೆ ಕರ್ನಾಟಕ ಪ್ರೊ ಕಬಡ್ಡಿ ಲೀಗ್; ಆಯ್ಕೆಯಲ್ಲಿ 860 ಆಟಗಾರರು!.

ಪ್ರೊ ಕಬಡ್ಡಿ ಮಾದರಿಯಲ್ಲಿ ಈ ಎರಡೂ ಟೂರ್ನಿಗಳು ನಡೆಯಲಿವೆ. ಕೆಪಿಕೆಎಲ್‌, 2020ರ ಜ.31ರಿಂದ ಫೆ.16ರ ವರೆಗೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿ ಮುಕ್ತಾಯಗೊಂಡ 10 ದಿನಗಳ ಬಳಿಕ, ಮಂಗಳೂರಿನ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರೊ ಕಬಡ್ಡಿ ಟೂರ್ನಿ ನಡೆಯಲಿದೆ. 

ಇದನ್ನೂ ಓದಿ: ರಾಷ್ಟ್ರೀಯ ಕಬಡ್ಡಿ ಶಿಬಿರ: ರಾಜ್ಯದ ನಾಲ್ವರಿಗೆ ಸ್ಥಾನ

ಹೆಚ್ಚು ಪ್ರತಿಭೆಗಳಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಎರಡು ಟೂರ್ನಿಗಳನ್ನು ನಡೆಸುತ್ತಿರುವುದಾಗಿ ಅಮೆಚೂರ್‌ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಪ್ರೊ ಕಬಡ್ಡಿ ಮಾದರಿಯಲ್ಲೇ ಕೆಪಿಕೆಎಲ್‌ ಟೂರ್ನಿ ಸಹ ನಡೆಯಲಿದ್ದು, ರಾಜ್ಯದ ತಾರಾ ಆಟಗಾರರು ಎರಡೂ ಲೀಗ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Follow Us:
Download App:
  • android
  • ios