Asianet Suvarna News Asianet Suvarna News

ಆರಂಭವಾಗುತ್ತಿದೆ ಕರ್ನಾಟಕ ಪ್ರೊ ಕಬಡ್ಡಿ ಲೀಗ್; ಆಯ್ಕೆಯಲ್ಲಿ 860 ಆಟಗಾರರು!

ಪ್ರೊ ಕಬಡ್ಡಿ ಲೀಗ್ ರೀತಿಯಲ್ಲೇ ರಾಜ್ಯದಲ್ಲಿ ಕಬಡ್ಡಿ ಲೀಗ್ ಆರಂಭವಾಗುತ್ತಿದೆ. ಆಯ್ಕೆ ಪ್ರಕ್ರಿಯೆಗೆ 25 ಜಿಲ್ಲೆಗಳ ಬರೋಬ್ಬರಿ 860 ಆಟಗಾರರು ಪಾಲ್ಗೊಳುತ್ತಿದ್ದಾರೆ. ಲೀಗ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Karnataka set to start state kabaddi league like pro kabaddi
Author
Bengaluru, First Published Dec 14, 2019, 11:13 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.14):  ಪ್ರೊ ಕಬಡ್ಡಿ ಲೀಗ್‌ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಕರ್ನಾಟಕ ಅಮೆಚೂರ್‌ ಕಬಡ್ಡಿ ಸಂಸ್ಥೆ, ಕರ್ನಾಟಕ ಪ್ರೊ ಕಬಡ್ಡಿ (ಕೆಪಿಕೆ) ಆಯೋಜಿಸಲು ನಿರ್ಧರಿಸಿದೆ. 2020ರ ಜನವರಿ 31ರಿಂದ ಫೆಬ್ರವರಿ 16ರ ವರೆಗೂ ಚೊಚ್ಚಲ ಆವೃತ್ತಿ ನಡೆಯಲಿದ್ದು, ಇದಕ್ಕಾಗಿ ಶುಕ್ರವಾರದಿಂದ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಕಬಡ್ಡಿ ಸಂಸ್ಥೆ ನಡೆಸುತ್ತಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಗೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಮಾರು 25 ಜಿಲ್ಲೆಗಳಿಂದ 860 ಆಟಗಾರರು ಆಗಮಿಸಿದ್ದು, ಆಯೋಜಕರಲ್ಲಿ ಉತ್ಸಾಹ ಹೆಚ್ಚಿಸಿತು. ಶನಿವಾರ ಹಾಗೂ ಭಾನುವಾರವೂ ಆಯ್ಕೆ ಪ್ರಕ್ರಿಯೆ ಮುಂದುವರಿಯಲಿದೆ.

ಇದನ್ನೂ ಓದಿ: ದಕ್ಷಿಣ ಏಷ್ಯನ್ ಗೇಮ್ಸ್: ತ್ರಿಶತಕದತ್ತ ಭಾರತ ದಾಪುಗಾಲು

ಆಯ್ಕೆ ಪ್ರಕ್ರಿಯೆ ಹೇಗೆ?: 
ಟೂರ್ನಿಯಲ್ಲಿ 8 ತಂಡಗಳು ಇರಲಿದ್ದು, ಮಂಗಳೂರಿನ ನೆಹರು ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 120 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಟಗಾರರನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಹಿರಿಯ ಆಟಗಾರರು, ‘ಸಿ’ ಹಾಗೂ ‘ಡಿ’ ಗುಂಪಿನಲ್ಲಿ ಕಿರಿಯ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ‘ಎ’ ಗ್ರೇಡ್‌ನಲ್ಲಿನ ಆಟಗಾರರಿಗೆ .50 ಸಾವಿರ, ‘ಬಿ’ ಗ್ರೇಡ್‌ನಲ್ಲಿನ ಆಟಗಾರರಿಗೆ .25 ಸಾವಿರ, ‘ಸಿ’ ಗ್ರೇಡ್‌ನಲ್ಲಿನ ಆಟಗಾರರಿಗೆ .15 ಸಾವಿರ ಹಾಗೂ ‘ಡಿ’ ಗ್ರೇಡ್‌ನಲ್ಲಿನ ಆಟಗಾರರಿಗೆ .10 ಸಾವಿರ ನಿಗದಿಪಡಿಸಲಾಗಿದೆ. 

ಎ ಮತ್ತು ಬಿ ಗ್ರೇಡ್‌ನಲ್ಲಿ 40 ಆಟಗಾರರು ಆಯ್ಕೆಯಾದರೆ, ಸಿ ಮತ್ತು ಡಿ ಗ್ರೇಡ್‌ನಲ್ಲಿ 40 ಆಟಗಾರರು ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಇನ್ನುಳಿದ 40 ಆಟಗಾರರು ಐಕಾನ್‌ ಆಟಗಾರರಾಗಿರುತ್ತಾರೆ. ಪ್ರೊ ಕಬಡ್ಡಿ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾರತ ಪರ ಆಡಿದ, ರಾಷ್ಟ್ರೀಯ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಟಗಾರರನ್ನು ಐಕಾನ್‌ ಆಟಗಾರರು ಎಂದು ಪರಿಗಣಿಸಲಾಗಿದೆ. ಈ ಆಟಗಾರರಿಗೆ .1 ಲಕ್ಷ ಸಂಭಾವನೆ ನಿಗದಿ ಮಾಡಲಾಗಿದೆ.
 

Follow Us:
Download App:
  • android
  • ios