ಬೆಂಗಳೂರು[ನ.03]: ಡಿ. 1 ರಿಂದ 10 ರವರೆಗೆ ನೇಪಾಳದ ಕಠ್ಮಂಡು ಹಾಗೂ ಪೊಕಹಾರದಲ್ಲಿ ನಡೆಯಲಿರುವ 13ನೇ ತಂಡವನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ ನ. 5 ರಿಂದ 26 ರವರೆಗೆ ನಡೆಯಲಿರುವ ರಾಷ್ಟ್ರೀಯ ಶಿಬಿರದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.

ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್

ಶಿಬಿರದಲ್ಲಿ ಒಟ್ಟು 48 ಆಟಗಾರರು ಆಯ್ಕೆಯಾಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಯುವ ಹಾಗೂ ಅನುಭವಿ ಆಟಗಾರರು ಶಿಬಿರದಲ್ಲಿ ಸ್ಥಾನ ಪಡೆದಿದ್ದಾರೆ.

’ಸೂ​ಪರ್‌ ಕ್ಯಾಚ್‌’ ಹಿಡಿದ ಹರ್ಮ​ನ್‌​ಪ್ರೀ​ತ್‌ ಕೌರ್‌; ವಿಡಿಯೋ ವೈರಲ್

ರೈಲ್ವೇಸ್, ಸರ್ವೀಸಸ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ, ಉತ್ತರಾಖಂಡ್, ಮಧ್ಯಪ್ರದೇಶ, ಕೇರಳ, ಗುಜರಾತ್, ಪುದುಚೇರಿ, ತೆಲಂಗಾಣ, ಚಂಢೀಗಢ, ತಮಿಳುನಾಡು, ಪಂಜಾಬ್ ಹಾಗೂ ಆಂಧ್ರಪ್ರದೇಶದ ಆಟಗಾರರಿಗೆ ಶಿಬಿರದಲ್ಲಿ ಸ್ಥಾನ ನೀಡಲಾಗಿದೆ.

ಇದರಲ್ಲಿ ಸರ್ವೀಸಸ್‌ನ ತಾರಾ ರೈಡರ್ ನವೀನ್ ಕುಮಾರ್, ಡಿಫೆಂಡರ್ ಮಹೇಂದರ್ ಸಿಂಗ್, ವಿಕಾಸ್ ಖಂಡೋಲಾ, ಅನುಭವಿ ಆಟಗಾರ ಪ್ರದೀಪ್ ನರ್ವಾಲ್, ರಿಶಾಂಕ್ ದೇವಾಡಿಗ, ನಿತಿನ್ ತೋಮರ್, ರವೀಂದರ್ ಪೆಹಲ್ ಪ್ರಮುಖರಾಗಿದ್ದಾರೆ. ರಾಜ್ಯದಿಂದ ಪ್ರಶಾಂತ್ ಕುಮಾರ್ ರೈ, ತಮಿಳುನಾಡು ಮೂಲದ ಕರ್ನಾಟಕದ ಉದ್ಯೋಗಿ ಕೆ. ಪ್ರಪಂಜನ್, ಯುವ ಆಟಗಾರ ಸಚಿನ್ ವಿಠಲ ಹಾಗೂ ಜೆ. ದರ್ಶನ್ ಶಿಬಿರದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿ ಯಾಗಿದ್ದಾರೆ