Asianet Suvarna News Asianet Suvarna News

ISSF ಕಿರಿಯರ ಶೂಟಿಂಗ್ ವಿಶ್ವಕಪ್‌: ಭಾರತ ಭರ್ಜರಿ ಪದಕ ಬೇಟೆ

* ಕಿರಿಯರ ಶೂಟಿಂಗ್ ವಿಶ್ವಕಪ್‌ನಲ್ಲಿ 30 ಪದಕಗಳನ್ನು ಬೇಟೆಯಾಡಿದ ಭಾರತ

* ಪದಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಭಾರತದ ಶೂಟರ್‌ಗಳು

* 13 ಚಿನ್ನ, 11 ಬೆಳ್ಳಿ ಹಾಗೂ 6 ಕಂಚಿನೊಂದಿಗೆ ಒಟ್ಟು 30 ಪದಕ ಗೆದ್ದ ದೇಶದ ಶೂಟರ್‌ಗಳು

ISSF junior world championship India ends with 30 medals and tops in the Table kvn
Author
Lima, First Published Oct 10, 2021, 9:37 AM IST

ಲಿಮಾ(ಅ.10): ಐಎಸ್‌ಎಸ್‌ಎಫ್‌ ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ (ISSF junior world championship) ನಲ್ಲಿ ಭಾರತ ಮತ್ತೆ 3 ಚಿನ್ನದ ಪದಕ ಗೆದ್ದಿದ್ದು, ಒಟ್ಟು 30 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. 

ಶುಕ್ರವಾರ ಪುರುಷರ 25 ಮೀ. ರ‍್ಯಾಪಿಡ್‌ ಪಿಸ್ತೂಲ್‌ ತಂಡ (rapid fire pistol team) ವಿಭಾಗದಲ್ಲಿ ಭಾರತ ಚಿನ್ನ ಜಯಿಸಿತು. ಬಳಿಕ ಪುರುಷ ಮತ್ತು ಮಹಿಳಾ ಟ್ರಾಪ್‌ ಸ್ಪರ್ಧೆಗಳಲ್ಲಿ ಭಾರತ ಕ್ಲೀನ್‌ಸ್ವೀಪ್‌ ಮಾಡಿತು. 25 ಮೀಟರ್‌ ರ‍್ಯಾಪಿಡ್‌ ಪಿಸ್ತೂಲ್‌  ಸ್ಪರ್ಧೆಯಲ್ಲಿ ಆದರ್ಶ್‌ ಸಿಂಗ್, ವಿಜಯ್‌ವೀರ್ ಸಿಧು ಹಾಗೂ ಅನೀಶ್‌ ಭಾನ್‌ವಾಲಾ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಬೇಟೆಯಾಡುವುದರೊಂದಿಗೆ ಅತ್ಯಂತ ಯಶಸ್ವಿಯಾಗಿ ತನ್ನ ಅಭಿಯಾನವನ್ನು ಮುಗಿಸಿತು.

 13 ಚಿನ್ನ, 11 ಬೆಳ್ಳಿ ಹಾಗೂ 6 ಕಂಚಿನೊಂದಿಗೆ ಒಟ್ಟು 30 ಪದಕದೊಂದಿಗೆ ಭಾರತ (India) ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, ಅಮೆರಿಕ (ISA) 6 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳೊಂದಿಗೆ 20 ಪದಕಗಳ ಸಹಿತ ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ಇನ್ನು ಇಟಲಿ 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆಲ್ಲುವುದರೊಂದಿಗೆ ಒಟ್ಟು 10 ಪದಕಗಳ ಸಹಿತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಈ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಶೂಟರ್‌ ಮನು ಭಾಕರ್ (Manu Bhaker) ಒಟ್ಟು 4 ಚಿನ್ನದ ಪದಕಗಳಿಗೆ ಕೊರಳೊಡ್ಡುವ ಮೂಲಕ ಅತ್ಯಂತ ಯಶಸ್ವಿ ಶೂಟರ್‌ ಆಗಿ ಹೊರಹೊಮ್ಮಿದರು. ಟೋಕಿಯೋ ಒಲಿಂಪಿಕ್ಸ್‌ (Tokyo Olympics)) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಪದಕ ಗೆಲ್ಲಲು ವಿಫಲವಾಗಿದ್ದರು. ಅದರೆ ಇದೀಗ  ಐಎಸ್‌ಎಸ್‌ಎಫ್‌ ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅತಿಹೆಚ್ಚು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅನುಭವಿಸಿದ್ದ ಕಹಿ ನೆನಪನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. 

ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಹರಾಜು..!

ಐಎಸ್‌ಎಸ್‌ಎಫ್‌ ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಒಟ್ಟು 39 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಭಾರತೀಯರು 12 ವಿಭಾಗಗಳಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು. ಒಲಿಂಪಿಕ್ಸ್‌ನಲ್ಲಿ ಇಲ್ಲದ ಹಲವು ವಿಭಾಗಗಳ ಸ್ಪರ್ಧೆಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಡೆದವು. 2017ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಭಾರತ 4 ಚಿನ್ನ ಸೇರಿ ಒಟ್ಟು 10 ಪದಕ ಗೆದ್ದು ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. 

ಸ್ಯಾಫ್‌: ಭಾರತಕ್ಕಿಂದು ನೇಪಾಳ ಸವಾಲು

ಮಾಲೆ: ಸ್ಯಾಫ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ತಂಡ ಭಾನುವಾರ ನೇಪಾಳ ವಿರುದ್ಧ ಸೆಣಸಲಿದ್ದು, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಸುನಿಲ್‌ ಚೆಟ್ರಿ (Sunil Chhetri) ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. 

ISSF ಶೂಟಿಂಗ್ ವಿಶ್ವಕಪ್‌: 11ನೇ ಚಿನ್ನದ ಪದಕ ಬೇಟೆಯಾಡಿದ ಭಾರತ

7 ಬಾರಿ ಚಾಂಪಿಯನ್‌ ಭಾರತ, ಫೈನಲ್‌ ಪ್ರವೇಶಿಸಬೇಕಿದ್ದರೆ ಕೊನೆ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯ ಮಾಲ್ಡೀವ್ಸ್‌ ವಿರುದ್ಧ ಆಡಲಿದೆ. ಕಳೆದ ತಿಂಗಳು ನೇಪಾಳ ವಿರುದ್ಧ 2 ಸ್ನೇಹಾರ್ಥ ಪಂದ್ಯಗಳನ್ನು ಆಡಿದ್ದ ಭಾರತ 2ನೇ ಪಂದ್ಯವನ್ನು 2-1ರಲ್ಲಿ ಗೆದ್ದರೆ, ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
 

Follow Us:
Download App:
  • android
  • ios