Asianet Suvarna News Asianet Suvarna News

ISSF ಶೂಟಿಂಗ್ ವಿಶ್ವಕಪ್‌: 11ನೇ ಚಿನ್ನದ ಪದಕ ಬೇಟೆಯಾಡಿದ ಭಾರತ

* ISSF ಶೂಟಿಂಗ್ ವಿಶ್ವಕಪ್‌ ಕ್ರೀಡಾಕೂಟದಲ್ಲಿ 11 ಚಿನ್ನದ ಪದಕ ಗೆದ್ದ ಭಾರತ

* 11 ಚಿನ್ನದ ಪದಕ ಗೆಲ್ಲುವುದರೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಭಾರತ

* 11 ಚಿನ್ನ, 9 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ ಒಟ್ಟು 23 ಪದಕ ಗೆದ್ದ ಭಾರತ

ISSF Junior World Championship India wins mens 25m Rapid Fire Pistol team gold kvn
Author
Lima, First Published Oct 9, 2021, 8:59 AM IST

ಲಿಮಾ(ಅ.09): ಐಎಸ್‌ಎಸ್‌ಎಫ್‌ ಕಿರಿಯರ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌ (ISSF Junior World Championships) ನಲ್ಲಿ ಭಾರತದ ಪ್ರಾಬಲ್ಯ ಮುಂದುವರೆದಿದ್ದು, 11 ಚಿನ್ನದ ಪದಕ ಗೆಲ್ಲುವುದರೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದೆ. 

ಶನಿವಾರ (ಅ.09) ಮುಂಜಾನೆ ನಡೆದ ರ‍್ಯಾಪಿಡ್‌ ಫೈರ್ ಪಿಸ್ತೂಲ್‌ (men's 25m Rapid Fire Pistol team) ಸ್ಪರ್ಧೆಯಲ್ಲಿ ಭಾರತದ ಜೋಡಿಯಾದ ಆದರ್ಶ್‌ ಸಿಂಗ್ (Adarsh Singh), ವಿಜಯ್‌ವೀರ್ ಸಿಧು (Vijayveer Sidhu) ಮತ್ತು ಅನೀಶ್‌ (Anish) ಅವರನ್ನೊಳಗೊಂಡ ಭಾರತ ತಂಡವು ಚಿನ್ನದ ಬೇಟೆಯಾಡಿದೆ. ಫೈನಲ್‌ನಲ್ಲಿ ಜರ್ಮನಿಯ ಫ್ಯಾಬಿಯನ್ ಒಟ್ಟೋ, ಫೆಲಿಕ್ಸ್‌ ಲೂಕಾ ಹೊಲ್‌ಪೋತ್ ಹಾಗೂ ತೋಬಿಸ್‌ ಗ್ಲೋಸೆಲ್‌ ಅವರ ಎದುರು 10-2ರಿಂದ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.

ಇದಕ್ಕೂ ಮೊದಲು ಆಯುಶಿ ಪೊಡ್ಡಾರ್ ಮತ್ತು ಐಶ್ವರ್ಯ್‌ ಪ್ರತಾಪ್‌ ಸಿಂಗ್ ತೋಮರ್ ಅವರನ್ನೊಳಗೊಂಡ ತಂಡ 50 ಮೀಟರ್‌ ರೈಫಲ್‌ 3 ಪೊಸಿಷನ್‌ ಮಿಶ್ರ ತಂಡ (50m Rifle 3 Positions Mixed Team) ವಿಭಾಗದ ಫೈನಲ್‌ನಲ್ಲಿ ಜರ್ಮನಿಯ 17-31 ಅಂತರದಲ್ಲಿ ಜರ್ಮನಿಯಲ್ಲಿ ಮ್ಯಾಕ್ಸ್ ಬ್ರೌನ್‌ ಮತ್ತು ಅನ್ನ ಜಾನ್ಸೆನ್‌ ವಿರುದ್ದ ಸೋಲು ಕಾಣುವ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ISSF ಶೂಟಿಂಗ್ ವಿಶ್ವಕಪ್‌‌: ಮತ್ತೊಂದು ಚಿನ್ನ ಬೇಟೆಯಾಡಿದ ಭಾರತ

ಇನ್ನು ಶುಕ್ರವಾರ ನಡೆದ 25 ಮೀಟರ್ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಶ್ರ ತಂಡ (25m Rapid Fire Pistol Mixed event) ವಿಭಾಗದಲ್ಲಿ ರಿಧಮ್‌ ಸಂಗ್ವಾನ್‌ ಹಾಗೂ ವಿಜಯ್‌ವೀರ್‌ ಸಿಧು ಥಾಯ್ಲೆಂಡ್‌ನ ಜೋಡಿ ವಿರುದ್ಧ 9-1ರಿಂದ ಗೆದ್ದು ಬಂಗಾರದ ಪದಕಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಮತ್ತು ಅನೀಶ್‌ ಜೋಡಿ ಕಂಚಿನ ಪದಕ ಗೆದ್ದರು. ಮಹಿಳೆಯರ 50 ಮೀಟರ್ ರೈಫಲ್‌ 3 ಪೊಸಿಷನ್‌ನಲ್ಲಿ ಪ್ರಸಿದ್ಧಿ ಮಹಂತ್‌, ನಿಶ್ಚಲ್‌ ಹಾಗೂ ಅಯುಷಿ ಪೊದ್ದೆರ್‌ ತಂಡ ಅಮೆರಿಕದ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಗೊಂಡಿತು.

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದರೆ ಪಾಕ್‌ಗೆ Blank cheque ಸಿಗುತ್ತೆ: ರಮೀಜ್ ರಾಜಾ!

11 ಚಿನ್ನ, 9 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ ಒಟ್ಟು 24 ಪದಕದೊಂದಿಗೆ ಭಾರತ (India) ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಮನು ಭಾಕರ್ (Manu Bhaker) ಒಟ್ಟು 4 ಚಿನ್ನದ ಪದಕ ಬಾಚಿಕೊಳ್ಳುವ ಗಮನ ಸೆಳೆದರು. 6 ಚಿನ್ನ (Gold) ಸೇರಿ 20 ಪದಕಗಳೊಂದಿಗೆ ಅಮೆರಿಕ (USA) 2ನೇ ಸ್ಥಾನದಲ್ಲಿದೆ.

Follow Us:
Download App:
  • android
  • ios