Asianet Suvarna News Asianet Suvarna News

Paris Olympics: ಪ್ಯಾರಿಸ್‌ನಲ್ಲಿ ಕಂಚಿನ ಹಣತೆ ಹಚ್ಚಿದ ಹಾಕಿ ಟೀಮ್‌!

India Mens Hockey Team Bronze ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನ ಕಂಚಿನ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ತಂಡ ಸ್ಪೇನ್‌ಅನ್ನು ಸೋಲಿಸಿ ಕಂಚಿನ ಪದಕ ಜಯಿಸಿದೆ.

indian mens hockey team Defends Olympic Bronze medal in Paris after Beating Spain san
Author
First Published Aug 8, 2024, 7:17 PM IST | Last Updated Aug 8, 2024, 7:35 PM IST

ಪ್ಯಾರಿಸ್‌ (ಆ.8): ಸ್ವಪ್ನಿಲ್‌ ಕುಶಾಲೆ ಕಂಚಿನ ಪದಕ ಗೆದ್ದ ಬಳಿಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (hockey olympics 2024) ಬರೀ ಹಿನ್ನಡೆಗಳನ್ನೇ ಎದುರಿಸಿದ್ದ ಭಾರತ ತಂಡಕ್ಕೆ ಕೊನೆಗೂ ಹಾಕಿ ಟೀಮ್‌ ಸಂಭ್ರಮದ ವಿಚಾರ ನೀಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕವನ್ನು ಉಳಿಸಿಕೊಳ್ಳುವಲ್ಲಿ ಭಾರತ ಪುರುಷರ ಹಾಕಿ (India Mens Hockey Team) ತಂಡ ಯಶಸ್ವಿಯಾಗಿದೆ. ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಭಾರತ ತಂಡ 2-1 ಗೋಲುಗಳಿಂದ ಸ್ಪೇನ್‌ ತಂಡವನ್ನು ಸೋಲಿಸಿ ಕಂಚಿನ ಪದಕ ಜಯಿಸಿತು. ಆ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ನಾಲ್ಕನೇ ಕಂಚಿನ ಪದಕ ಇದಾಗಿದ್ದು, ಟೀಮ್‌ ಇವೆಂಟ್‌ನಲ್ಲಿ ಗೆದ್ದ 2ನೇ ಪದಕವಾಗಿದೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಬಲಿಷ್ಠ ಜರ್ಮನಿಯನ್ನು ಸೋಲಿಸಿ ಕಂಚಿನ ಪದಕ ಜಯಿಸಿತ್ತು. ಈ ಗೆಲುವಿನೊಂದಿಗೆ ಭಾರತ ತಂಡ ತಂಡದ ಅನುಭವಿ ಗೋಲ್‌ಕೀಪರ್‌ ಪಿಆರ್‌ ಶ್ರೀಜೇಶ್‌ಗೂ ವಿದಾಯ ಹೇಳಿದೆ. ಇದು ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ನಾಲ್ಕನೇ ಕಂಚಿನ ಪದಕವಾಗಿದೆ. ಇನ್ನು ಭಾರತದ ಇದು 13ನೇ ಒಲಿಂಪಿಕ್‌ ಪದಕ ಇದಾಗಿದೆ. 8 ಬಾರಿ ಚಿನ್ನ ಗೆದ್ದಿರುವ ಭಾರತ, 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಏಕೈಕ ಬಾರಿಗೆ ಫೈನಲ್‌ನಲ್ಲಿ ಸೋಲು ಕಂಡು ಬೆಳ್ಳಿ ಪದಕ ಸಂಪಾದಿಸಿತ್ತು.

ಕಂಚಿನ ಪದಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಭಾರತ ಹಾಕಿ ತಂಡ 2-1 ಗೋಲುಗಳಿಂದ ಸ್ಪೇನ್‌ ತಂಡವನ್ನು ಸೋಲಿಸಿತು. ಮೊದಲ ಅವಧಿಯ ಆಟದಲ್ಲಿ ಸ್ಪೇನ್‌ ತಂಡ ಮುನ್ನಡೆ ಗಳಿಸಿದ್ದರೂ, ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ನಲ್ಲಿ ಎರಡೂ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಸ್ಪೇನ್‌ ತಂಡಕ್ಕೆ ಪಂದ್ಯ ಮುಕ್ತಾಯವಾಗಲು 44 ಸೆಕೆಂಡ್‌ಗಳಿದ್ದಾಗ 6 ಸೆಕೆಂಡ್‌ಗಳ ಅಂತರದಲ್ಲಿ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿದ್ದವು. ಈ ಎರಡೂ ಪೆನಾಲ್ಟಿ ಕಾರ್ನರ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳುವ ಮೂಲಕ ಭಾರತ ಪದಕ ವೇದಿಕೆ ಏರುವಲ್ಲಿ ಯಶಸ್ವಿಯಾಯಿತು.

18ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ ಮೂಲಕ ಸ್ಪೇನ್‌ ತಂಡ ಗೋಲಿನ ಖಾತೆ ತೆರೆದಿತ್ತು. ಆದರೆ, ಮೂರನೇ ಕ್ವಾರ್ಟರ್‌ ಆಟ ಆರಂಭವಾದ ಬೆನ್ನಲ್ಲಿಯೇ ಸಿಕ್ಕ ಕ್ವಾರ್ಟರ್‌ಫೈನಲ್‌ನಲ್ಲಿ ಹರ್ಮಾನ್‌ಪ್ರೀತ್‌ ಸಿಂಗ್‌ ಗೋಲು ಸಿಡಿಸಿದರೆ, ಅದಾದ ಮೂರೇ ನಿಮಿಷಕ್ಕೆ ಹರ್ಮಾನ್‌ಪ್ರೀತ್‌ ಸಿಂಗ್‌ ಮತ್ತೊಂದು ಪೆನಾಲ್ಟಿ ಕಾರ್ನರ್‌ಅನ್ನು ಗೋಲ್‌ ಆಗಿ ಪರಿವರ್ತಿಸಿದ್ದರು.1972ರ ಬಳಿಕ ಸತತ ಒಲಿಂಪಿಕ್ಸ್‌ನಲ್ಲಿ ಪದಕ ಭಾರತ ಹಾಕಿ ತಂಡ ಪದಕ ಗೆಲ್ಲುತ್ತಿರುವುದು ಇದೇ ಮೊದಲ ಬಾರಿಯಾಗಿದೆ. 52 ವರ್ಷಗಳ ಬಳಿಕ ಭಾರತ ಸತತ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದಂತಾಗಿದೆ.

ಪಿರಿಯಡ್ಸ್‌ನ ಮೂರನೇ ದಿನದಲ್ಲಿದ್ದೆ, ಹೆಚ್ಚಿನ ಭಾರ ಎತ್ತಲು ಸಾಧ್ಯವಾಗಲಿಲ್ಲ: ಮೀರಾಬಾಯಿ ಚಾನು ಅಳಲು!

ಪಿಆರ್‌ ಶ್ರೀಜೇಶ್‌ ವಿದಾಯ: ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನವೇ ಇದು ತಮ್ಮ ವೃತ್ತಿಜೀವನದ ಕೊನೆಯ ಟೂರ್ನಿ ಎಂದು ಹೇಳಿದ್ದರು. ಈಗ ಕಂಚಿನ ಪದಕದೊಂದಿಗೆ ಅವರು ಹಾಕಿಗೆ ವಿದಾಯ ಹೇಳಿದ್ದಾರೆ.

Big Breaking: ವಿನೇಶ್ ಫೋಗಾಟ್ ಮನವಿ ಅಂಗೀಕರಿಸಿದ ಕ್ರೀಡಾ ನ್ಯಾಯ ಮಂಡಳಿ..! ಸಿಹಿ ಸುದ್ದಿಗೆ ಕ್ಷಣಗಣನೆ

 

Latest Videos
Follow Us:
Download App:
  • android
  • ios