Asianet Suvarna News Asianet Suvarna News

Big Breaking: ವಿನೇಶ್ ಫೋಗಾಟ್ ಮನವಿ ಅಂಗೀಕರಿಸಿದ ಕ್ರೀಡಾ ನ್ಯಾಯ ಮಂಡಳಿ..! ಸಿಹಿ ಸುದ್ದಿಗೆ ಕ್ಷಣಗಣನೆ

ವಿನೇಶ್ ಫೋಗಟ್ ಅವರ ಅನರ್ಹ ಪ್ರಕರಣದ ಕುರಿತಂತೆ ಸಲ್ಲಿಸಿದ್ದ ಮನವಿಯನ್ನು ಕ್ರೀಡಾ ನ್ಯಾಯ ಮಂಡಳಿ ಸ್ವೀಕರಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Paris Olympics Court of Arbitration for Sports agreed to review Vinesh Phogat says report kvn
Author
First Published Aug 8, 2024, 6:40 PM IST | Last Updated Aug 8, 2024, 6:51 PM IST

ಪ್ಯಾರಿಸ್: ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಅವರ ತೂಕ ಹೆಚ್ಚಳದ ಕಾರಣದಿಂದ 50 ಕೆ.ಜಿ ವಿಭಾಗದ ಪ್ರಿಸ್ಟೈಲ್ ಫೈನಲ್ ಪಂದ್ಯದಿಂದ ಅವರನ್ನು ಅನರ್ಹಗೊಳಿಸಿದೆ. ಇದನ್ನು ಪ್ರಶ್ನಿಸಿ ವಿನೇಶ್ ಫೋಗಟ್, ಕ್ರೀಡಾ ನ್ಯಾಯ ಮಂಡಳಿ ಮೆಟ್ಟಿಲೇರಿದ್ದರು. ಇದೀಗ ವಿನೇಶ್ ಅವರ ಅರ್ಜಿಯನ್ನು ಕ್ರೀಡಾ ನ್ಯಾಯ ಮಂಡಳಿ ಪುರುಸ್ಕರಿಸಿದ್ದು, ವಿಚಾರಣೆ ಕೈಗೆತ್ತಿಕೊಂಡಿದೆ.

ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್‌ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಘಟಾನುಘಟಿ ಕುಸ್ತಿಪಟುಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೇ, ವಿನೇಶ್ ಫೋಗಟ್ ಮೂಲಕ ಭಾರತಕ್ಕೆ 4ನೇ ಪದಕ ಹಾಗೂ ವಿನೇಶ್ ಪಾಲಿಗೆ ಚೊಚ್ಚಲ ಒಲಿಂಪಿಕ್ ಪದಕ ಸಿಗುತ್ತಿತ್ತು. ಆದರೆ ವಿಧಿಯ ಕೈವಾಡ ಕೇವಲ 100 ತೂಕ ಹೆಚ್ಚಳು ದೇಶದ ಹೆಮ್ಮೆಯ ಕುಸ್ತಿಪಟುವಿನ ಕನಸನ್ನೇ ನುಚ್ಚುನೂರು ಮಾಡಿದೆ. ಹೀಗಿದ್ದೂ ವಿನೇಶ್ ಫೋಗಟ್‌ಗೆ ಒಲಿಂಪಿಕ್ ಪದಕ ಗೆಲ್ಲಲು ಕೊನೆಯ ಅವಕಾಶವೊಂದು ಇದೆ.

ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್‌ ಚಾನ್ಸ್‌..! ಆದ್ರೆ ಪವಾಡ ನಡಿಬೇಕು..!

ಹೌದು, ವಿನೇಶ್ ಫೋಗಟ್ ಇದೀಗ ತಮ್ಮನ್ನು  ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನೆ ಮಾಡಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯಲ್ಲಿ ವಿನೇಶ್ ಫೋಗಟ್, ತಮಗೆ ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಹಾಗೂ ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. 

ಈ ವಿಚಾರವಾಗಿ ಹೊಸ ಅಪ್‌ಡೇಟ್ ಹೊರಬಿದ್ದಿದ್ದು, ಕ್ರೀಡಾ ನ್ಯಾಯ ಮಂಡಳಿಯು ವಿನೇಶ್ ಅವರ ಮನವಿಯನ್ನು ಸ್ವೀಕರಿಸಿದ್ದು, ವಾದ-ಪ್ರತಿವಾದಗಳನ್ನು ಆಲಿಸಿ ಮುಂದಿನ 24-48 ಗಂಟೆಗಳೊಳಗಾಗಿ ಅಂತಿಮ ತೀರ್ಪು ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾದ ಪಕ್ಷದಲ್ಲಿ ನಾಳೆ ಅಂದರೆ ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ವಿನೇಶ್ ಫೋಗಟ್ ಅವರ ಬೆಳ್ಳಿ ಪದಕದ ಕುರಿತಾದ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಇಡೀ ದೇಶವೇ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಸಿಗಲಿ ಎಂದು ಪ್ರಾರ್ಥಿಸುತ್ತಿದೆ. ವಿನೇಶ್ ಪಾಲಿಗೆ ಶುಭ ಶುಕ್ರವಾರವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios