Saikhom Mirabai Chanu Periods ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕೇವಲ 1 ಕೆಜಿ ಕಡಿಮೆ ತೂಕ ಎತ್ತಿದ ಪರಿಣಾಮ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ. 

ಪ್ಯಾರಿಸ್‌ (ಆ.8): ಮಹಿಳೆಯರ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸೈಖೋಮ್‌ ಮೀರಾಬಾಯಿ ಚಾನು ಈ ಬಾರಿಯೂ ಪದಕ ಸಾಧನೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆಕೆಯೂ ಕೂಡ ನಾಲ್ಕನೇ ಸ್ಥಾನ ಪಡೆಯುವುದರೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನ ಹಾಗೂ ಬೆಳ್ಳಿ ಪದಕದ ಬರ ಮುಂದುವರಿಸಿದೆ. ಕೇವಲ ಒಂದು ಕೆಜಿ ಕಡಿಮೆ ಭಾರ ಎತ್ತಿದ್ದ ಕಾರಣಕ್ಕಾಗಿ ಮೀರಾಬಾಯಿ ಚಾನು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕ್ಲೀನ್‌ & ಜರ್ಕ್‌ನ ತಮ್ಮ ಕೊನೆಯ ಯತ್ನದಲ್ಲಿ ಮೀರಾಬಾಯಿ ಚಾನು 114 ಕೆಜಿ ಭಾರವನ್ನು ಎತ್ತಲು ವಿಫಲವಾಗುವುದರೊಂದಿಗೆ ಅವರು ಮೆಡಲ್‌ ರೇಸ್‌ನಿಂದ ಹೊರಬಿದ್ದಿದ್ದರು. ಗುರುವಾರ ತಮ್ಮ 30ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಮೀರಾಬಾಯಿ ಚಾನುಗೆ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಆದರೆ, ಇದು ಸಾಧ್ಯವಾಗದೇ ಇರೋದಕ್ಕೆ ಅವರು ಬೇಸರಪಟ್ಟುಕೊಂಡಿದ್ದರು. ನನ್ನ ಪೀರಿಯಡ್ಸ್‌ನ ಮೂರನೇ ದಿನದಲ್ಲಿದ್ದೆ. ಆದ್ದರಿಂದ ಭಾರ ಎತ್ತುವುದು ಸ್ವಲ್ಪ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

ಇಂದಿನ ನಿವರ್ಹಣೆಯ ಬಗ್ಗೆ ನನಗೆ ಸಂತಸವಿದೆ. ನನಗೆ ಸಾಕಷ್ಟು ಇಂಜುರಿ ಆಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಏನಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲಿ ನಾನು ಪದಕ ತಪ್ಪಿಸಿಕೊಂಡಿದ್ದೆ. ಪ್ರತಿ ಅಥ್ಲೀಟ್‌ನ ಜೀವನದಲ್ಲಿ ಇದು ಸಾಮಾನ್ಯ ಕೂಡ. ವಿಶ್ವ ಚಾಂಪಿಯನ್‌ ಆದ ಬಳಿಕ ನಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದೆ. ಈ ಬಾರಿ ಕೂಡ ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ಇಂಜುರಿಯ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಏಷ್ಯನ್‌ ಗೇಮ್ಸ್‌ ವೇಳೆ ನನಗೆ ಇಂಜುರಿ ಆಗಿತ್ತು. ಅದಾದ ಬಳಿಕ ನಾನು 4-5 ತಿಂಗಳ ಕಾಲ ಪುನಃಶ್ಚೇತನ ಶಿಬಿರದಲ್ಲಿದೆ. ಹಾಗಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ ಸಿದ್ದತೆಗೆ ಬಹಳ ಕಡಿಮೆ ಸಮಯ ಸಿಕ್ಕಿತ್ತು. ಅದರಲ್ಲೂ ನಾನು ಉತ್ತಮವಾಗಿ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇಂದು ನನ್ನ ಅದೃಷ್ಟವೇ ಸರಿ ಇರಲಿಲ್ಲ. ಅದಲ್ಲದೆ, ಮಹಿಳೆಯ ಸಮಸ್ಯೆ (ಪಿರಿಯಡ್ಸ್‌) ಕೂಡ ನನಗೆ ಎದುರಾಗಿತ್ತು. ನಾನು ಪಿರಿಯಡ್ಸ್‌ನ ಮೂರನೇ ದಿನದಲ್ಲಿದೆ. ಕಳೆದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುವಾಗ ನಾನು ಪಿರಿಯಡ್ಸ್‌ನ 2ನೇ ದಿನದಲ್ಲಿದೆ. ಅಲ್ಲಿಯೂ ಕೂಡ ಪ್ರಯತ್ನ ಉತ್ತಮವಾಗಿತ್ತು. ಈ ಬಾರಿ ಪದಕ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಎಲ್ಲರ ಕ್ಷಮೆ ಕೇಳುತ್ತೇನೆ. ಈ ಬಾರಿ ನನ್ನ ಅದೃಷ್ಟದಲ್ಲಿ ಪದಕ ಬರೆದಿರಲಿಲ್ಲ ಎಂದು ಭಾವುಕವಾಗಿ ಮಾತನಾಡಿದ್ದಾರೆ.

ಇಂದು ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನು ಮೇಲೆ ಕಣ್ಣು..!

49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧೆ ಮಾಡಿದ್ದ ಮೀರಾಬಾಯಿ ಚಾನು, ಸ್ನ್ಯಾಚ್‌ ಸ್ಪರ್ಧೆ ಮುಗಿದ ಬಳಿಕ ಮೂರನೇ ಸ್ಥಾನದಲ್ಲಿದೆ. ಸ್ನ್ಯಾಚ್‌ನಲ್ಲಿ ಮೀರಾಬಾಯಿ ಚಾನು 88 ಕೆಜಿ ಭಾರ ಎತ್ತಿದ್ದರು. ಆ ಬಳಿಕ ನಡೆದ ಕ್ಲೀನ್‌ & ಜರ್ಕ್‌ನಲ್ಲಿ ಆಕೆಯಿಂದ ದೊಡ್ಡ ನಿರೀಕ್ಷೆ ಇಡಲಾಗಿತ್ತು. ಇಲ್ಲಿ ಮೀರಾಬಾಯಿ ನಿರಾಸೆ ಎದುರಿಸಿದರು. ಸ್ನ್ಯಾಚ್‌ನಲ್ಲಿ 88 ಕೆಜಿ ಹಾಗೂ ಕ್ಲೀನ್‌ & ಜರ್ಕ್‌ನಲ್ಲಿ 111ಕೆಜಿ ಭಾರದೊಂದಿಗೆ 199 ಕೆಜಿ ಭಾರ ಎತ್ತಿ ಮೀರಾಬಾಯಿ ನಾಲ್ಕನೇ ಸ್ಥಾನ ಪಡೆದರು. ಹಾಲಿ ಒಲಿಂಪಿಕ್‌ ಚಾಂಪಿಯನ್‌ ಚೀನಾ ಹೌ ಜಿಹೈ ನಿರೀಕ್ಷೆಯಂತೆ ಚಿನ್ನದ ಪದಕ ಗೆದ್ದರು.

ವೇದಿಕೆಯಲ್ಲಿ ನಟನನ್ನು ಹೂವಂತೆ ಸಲೀಸಾಗಿ ಎತ್ತಿದ ವೇಟ್‌ಲಿಫ್ಟರ್ ಚಾನು: ವಿಡಿಯೋ ವೈರಲ್

ಸ್ನ್ಯಾಚ್‌ನಲ್ಲಿ ಕೇವಲ 89 ಕೆಜಿ ಭಾರತ ಎತ್ತಿದ್ದ ಈಕೆ ಕ್ಲೀನ್‌ & ಜರ್ಕ್‌ನಲ್ಲಿ ಬರೋಬ್ಬರಿ 117 ಕೆಜಿ ಭಾರ ಎತ್ತಿದ್ದರು. ರೊಮೇನಿಯಾದ ವಲೆಂಟಿನಾ ಕ್ಯಾಂಬೈ 205 ಕೆಜಿ ಭಾರ ಎತ್ತುವುದರೊಂದಿಗೆ ಮೂರನೇ ಸ್ಥಾನ ಪಡೆದರು. ಥಾಯ್ಲೆಂಡ್‌ನ ಸುರೋದ್‌ಚನ್‌ ಖಾಂನೋ 200 ಕೆಜಿ ಭಾರದೊಂದಿಗೆ ಕಂಚಿನ ಪದಕ ಜಯಿಸಿದರು.