ಬಾಕ್ಸಿಂಗ್: ಪೂಜಾ ರಾಣಿ, ವಿಕಾಸ್‌ಗೆ ಒಲಿಂಪಿಕ್ ಟಿಕೆಟ್
ವಿಕಾಸ್ ಕೃಷ್ಣನ್ ಸೇರಿದಂತೆ ಭಾರತದ ಐವರುಗಳು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಅಮ್ಮಾನ್(ಮಾ.09): ಭಾರತದ ತಾರಾ ಬಾಕ್ಸರ್‌ಗಳಾದ ಪೂಜಾ ರಾಣಿ ಮತ್ತು ವಿಕಾಸ್ ಕೃಷನ್ ಸೇರಿದಂತೆ ಐವರು ಬಾಕ್ಸರ್‌ಗಳು ಏಷ್ಯಾ/ಒಷಿಯಾನಿಯಾ ಒಲಿಂಪಿಕ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ 2020ರ ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಕೊರೋನಾ: ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ?
ಭಾನುವಾರ ನಡೆದ ಮಹಿಳೆಯರ 75 ಕೆ.ಜಿ. ವಿಭಾಗದ ಕ್ವಾರ್ಟರ್‌ನಲ್ಲಿ ಏಷ್ಯನ್ ಚಾಂಪಿಯನ್ ಪೂಜಾ ರಾಣಿ, ಥಾಯ್ಲೆಂಡ್‌ನ ಪೊರ್ನಾನಿಪಾ ಚುಟಿ ವಿರುದ್ಧ 5-0 ಯಿಂದ ಜಯದ ನಗೆ ಬೀರಿದರು. ಪುರುಷರ 69 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವಿಕಾಸ್, ಏಷ್ಯನ್ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಜಪಾನ್‌ನ ಸೆವೊನ್ರೆಟ್ಸ್ ಒಕಾಜವಾ ವಿರುದ್ಧ 5-0 ಯಿಂದ ಗೆಲುವು ಪಡೆದರು.
ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ಲಗ್ಗೆಯಿಟ್ಟ ವಿಕಾಸ್ ಕೃಷ್ಣನ್
ಪೂಜಾ ರಾಣಿ , ವಿಕಾಸ್ ಕೃಷನ್ ಮಾತ್ರವಲ್ಲದೇ ಸತೀಶ್ ಕುಮಾರ್(91 ಕೆ.ಜಿ.), ಲವ್‌ಲ್ಹಿನಾ ಬೋರ್ಗೊನ್(69 ಕೆ.ಜಿ.) ಹಾಗೂ ಆಶೀಸ್ ಕುಮಾರ್(75 ಕೆ.ಜಿ.) ಸಹಾ ಟೋಕಿಯೋ ಒಲಿಂಪಿಕ್ಸ್ ಟಿಕೆಟ್ ಪಕ್ಕಾ ಮಾಡಿಕೊಂಡಿದ್ದಾರೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಕ್ರೀಡಾ ಮಹಾಜಾತ್ರೆ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 24ರಿಂದ ಆಗಸ್ಟ್ 09ರವರೆಗೆ ಜರುಗಲಿದೆ. ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.