ಬೆಂಗಳೂರು[ಡಿ.31]: ಒಲಿಂಪಿಕ್‌ ಅರ್ಹತಾ ಕೂಟಕ್ಕಾಗಿ ಸೋಮವಾರ ನಡೆಸಲಾದ ಪುರುಷರ ಟ್ರಯಲ್ಸ್‌ನಲ್ಲಿ ಗೆಲುವು ಕಂಡುಕೊಳ್ಳುವ ಮೂಲಕ ಬಾಕ್ಸರ್ ವಿಕಾಸ್‌ ಕೃಷ್ಣನ್‌ ಅವರು ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದಾರೆ. 69 ಕೆ.ಜಿ ವಿಭಾಗದಲ್ಲಿ ವಿಕಾಸ್‌ ಸ್ಪರ್ಧಿಸಲಿದ್ದಾರೆ. 

ಗೆಲುವಿನ ಬಳಿಕ ಮೇರಿ ಕೋಮ್ ವರ್ತನೆಗೆ ಕಿಡಿ; ನೋವಾಗಿದೆ ಎಂದ ಜರೀನ್!

ಅಮಿತ್‌ ಪಂಘಾಲ್‌ (52 ಕೆ.ಜಿ), ಗೌರವ್‌ ಸೋಲಂಕಿ (57 ಕೆ.ಜಿ), ಮನೀಶ್‌ ಕೌಶಿಕ್‌ (63 ಕೆ.ಜಿ), ಆಶಿಶ್‌ ಕುಮಾರ್‌ (75 ಕೆ.ಜಿ), ಸಚಿನ್‌ ಕುಮಾರ್‌ (81 ಕೆ.ಜಿ), ನಮನ್‌ ತನ್ವರ್‌ (91 ಕೆ.ಜಿ) ಹಾಗೂ ಸತೀಶ್‌ ಕುಮಾರ್‌ (+91 ಕೆ.ಜಿ) ಬಾಕ್ಸಿಂಗ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್; ದಾಖಲೆ ಬರೆದ ಅಮಿತ್ ಪಂಘಲ್!

ಸೆಪ್ಟೆಂಬರ್’ನಲ್ಲಿ ನಡೆದ ವಿಶ್ವ ಚಾಂಪಿಯನ್’ಶಿಪ್’ನಲ್ಲಿ ಅಮಿತ್ ಪಂಘಾಲ್ ಹಾಗೂ ಮನೀಶ್ ಕೌಶಿಕ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸುವ ಮೂಲಕ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಫೆಬ್ರವರಿ 3ರಿಂದ 14ರ ವರೆಗೂ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದಿದ್ದಾರೆ.