ಟೆನಿಸ್: ಸಾನಿಯಾ-ಕ್ರಿಸ್ಟಿನಾ ಜೋಡಿ ಸೆಮೀಸ್‌ಗೆ ಲಗ್ಗೆ
* ಲ್ಯಾಂಡ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಸಾನಿಯಾ ಮಿರ್ಜಾ ಜೋಡಿ
* ಮಹಿಳಾ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಜೋಡಿ ಅಂತಿಮ 4ರ ಘಟ್ಟ ಪ್ರವೇಶ
* ಯುಎಸ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲೇ ಭಾರತದ ಹೋರಾಟ ಅಂತ್ಯ
ಕ್ಲೇವೆಲ್ಯಾಂಡ್(ಆ.28): ಆಕರ್ಷಕ ಆಟ ಪ್ರದರ್ಶಿಸಿದ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಜೋಡಿ ಇಲ್ಲಿ ನಡೆಯುತ್ತಿರುವ ಲ್ಯಾಂಡ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಮಹಿಳಾ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಲೂಸಿ ರೆಡಾಕಾ ಹಾಗೂ ಚೀನಾದ ಶೂಯಿ ಜಾಂಗ್ ಜೋಡಿ ವಿರುದ್ಧ 6-3, 6-3 ಸೆಟ್‌ಗಳಿಂದ ಜಯ ಸಾಧಿಸಿ ಮುಂದಿನ ಹಂತಕ್ಕೇರಿತು. ಸೆಮಿಫೈನಲ್‌ನಲ್ಲಿ ಸಾನಿಯಾ ಜೋಡಿ ನಾರ್ವೆಯ ಉಲ್‌ರಿಕ್ ಐಕರಿ ಮತ್ತು ಅಮೆರಿಕದ ಕ್ಯಾಥರೀನ್ ಹ್ಯಾರಿಸನ್ ವಿರುದ್ಧ ಸೆಣಸಲಿದ್ದಾರೆ.
ಯುಎಸ್ ಓಪನ್: ಪ್ರೇಕ್ಷಕರಿಗೆ ಮಾಸ್ಕ್, ಲಸಿಕೆ ದಾಖಲೆ ಕಡ್ಡಾಯವಲ್ಲ
ಯುಎಸ್ ಓಪನ್: ಪ್ರಜ್ನೇಶ್ ಹೋರಾಟ ಅಂತ್ಯ
ನ್ಯೂಯಾರ್ಕ್: ಭಾರತದ ಅಗ್ರ ಶ್ರೇಯಾಂಕಿತ ಪ್ರಜ್ನೇಶ್ ಗುಣೇಶ್ವರನ್ ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಟೂರ್ನಿಯ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಅಮೆರಿಕಾದ ಕ್ರಿಸ್ಟೋಪರ್ ಎಬಂಕ್ಸ್ ವಿರುದ್ಧ ಸೋಲುಂಡರು. ಇದರೊಂದಿಗೆ ಅರ್ಹತಾ ಸುತ್ತಿನ ಸಿಂಗಲ್ಸ್ ವಿಭಾಗದಲ್ಲಿ ಭಾರತ ಹೋರಾಟ ಅಂತ್ಯಗೊಂಡಿತು.
ಪ್ರಜ್ನೇಶ್ 3-6, 4-6 ನೇರ ಸೆಟ್‌ಗಳಿಂದ ಎಬಂಕ್ಸ್ ವಿರುದ್ಧ ಸೋಲುಂಡರು. ಮೊದಲ ಪಂದ್ಯದಲ್ಲಿ ಕೆನಡಾದ ಬ್ರೈಡೆನ್ ಸ್ನುರ್ ವಿರುದ್ಧ ಪ್ರಜ್ನೇಶ್ 6-4, 7-6 ನೇರ ಸೆಟ್‌ಗಳಲ್ಲಿ ಜಯ ಸಾಧಿಸುವುದರೊಂದಿಗೆ 2ನೇ ಸುತ್ತು ಪ್ರವೇಶಿಸಿದ್ದರು.