ನವ​ದೆ​ಹ​ಲಿ(ಡಿ.03): ಭಾರ​ತೀಯ ಮಹಿಳಾ ಬಾಕ್ಸರ್‌ ನೀರ​ಜ್‌​, ಡೋಪಿಂಗ್‌ ಟೆಸ್ಟ್‌​ನಲ್ಲಿ ತೇರ್ಗ​ಡೆ​ಯಾ​ಗ​ದ ಹಿನ್ನೆಲೆಯಲ್ಲಿ ತಾತ್ಕಾ​ಲಿ​ಕ​ವಾಗಿ ಅಮಾ​ನ​ತು ಮಾಡ​ಲಾ​ಗಿ​ದೆ. ತಮ್ಮ ಪ್ರದ​ರ್ಶನವನ್ನು ಹೆಚ್ಚಿ​ಸು​ವು​ದ​ಕ್ಕಾಗಿ ‘ಲಿ​ಗಾಂಡ್ರೋ​ಲ್‌’ ಹಾಗೂ ವಾಡಾ ನಿಷೇ​ಧಿತ ಸ್ಟಿರಾ​ಯ್ಡ್‌​ಗ​ಳನ್ನು ಸೇವಿ​ಸಿರುವುದು ಡೋಪಿಂಗ್‌ ಪರೀ​ಕ್ಷೆ​ಯಲ್ಲಿ ಪತ್ತೆ​ಯಾ​ಗಿತ್ತು. 

ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಮೇರಿ ಕೋಮ್

ಮಾಜಿ ರಾಷ್ಟ್ರೀಯ ಚಾಂಪಿ​ಯನ್‌ ನೀರಜ್‌ ಇದೇ ವರ್ಷ ಬಲ್ಗೇ​ರಿ​ಯಾ​ದಲ್ಲಿ ಪ್ರತಿ​ಷ್ಠಿತ ಸ್ಟ್ರಾಂಡ್ಜಾ ಸ್ಮರ​ಣಾರ್ಥ ಬಾಕ್ಸಿಂಗ್‌ ಟೂರ್ನಿ​ಯಲ್ಲಿ ಕಂಚಿನ ಪದಕ ಗೆದ್ದಿ​ದ್ದ​ರು. ಗುವಾ​ಹ​ಟಿ​ಯಲ್ಲಿ ಇಂಡಿಯಾ ಓಪನ್‌ ಚಿನ್ನ ಮುಡಿ​ಗೇ​ರಿ​ಸಿ​ದ್ದ​ರು. ಸೆ.24ರಂದು ನೀರಜ್‌ ಸ್ಯಾಂಪ​ಲ್‌​ಗ​ಳನ್ನು ಸಂಗ್ರ​ಹಿ​ಸಲಾ​ಗಿ​ತ್ತು. ಕಳೆದ ತಿಂಗಳು ಡೋಪಿಂಗ್‌ ವರದಿ ಲಭಿ​ಸಿ​ದೆ ಎಂದು ರಾಷ್ಟ್ರೀಯ ಉದ್ದೀ​ಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ಹೇಳಿ​ದೆ.

ಇದನ್ನೂ ಓದಿ: ವಿಜೇಂದರ್‌ಗೆ ಸತತ 12ನೇ ಗೆಲು​ವು!

57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಹರ್ಯಾಣ ಮೂಲದ ನೀರಜ್, 2019ರ ಇಂಡಿಯಾ ಓಪನ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಸೆಪ್ಟೆಂಬರ್ 24 ರಂದು ನೀರಜ್ ಸ್ಯಾಂಪಲ್ ಸಂಗ್ರಹಿಸಿದ ಅಧಿಕಾರಿಗಳು, ಖತಾರ್‌ನಲ್ಲಿರುವ ಆ್ಯಂಟಿ ಡೋಪಿಂಗ್ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು.