ದುಬೈ(ನ.24): ಭಾರ​ತದ ವಿಜೇಂದರ್‌ ಸಿಂಗ್‌ ವೃತ್ತಿ​ಪರ ಬಾಕ್ಸಿಂಗ್‌ನಲ್ಲಿ ಗೆಲು​ವಿನ ಓಟ ಮುಂದು​ವ​ರಿ​ಸಿ​ದ್ದಾರೆ. ಶುಕ್ರ​ವಾರ ರಾತ್ರಿ ಇಲ್ಲಿ ನಡೆದ ಸ್ಪರ್ಧೆ​ಯಲ್ಲಿ ಘಾನಾದ ಮಾಜಿ ಕಾಮನ್‌ವೆಲ್ತ್‌ ಪದಕ ವಿಜೇತ ಚಾರ್ಲ್ಸ್ ಆ್ಯಡಮು ವಿರುದ್ಧ ಜಯ​ಭೇರಿ ಬಾರಿ​ಸಿ​ದರು. 34 ವರ್ಷದ ಮಾಜಿ ಒಲಿಂಪಿಕ್‌ ಪದಕ ವಿಜೇತ ವಿಜೇಂದರ್‌ಗಿದು ಸತತ 12ನೇ ಗೆಲು​ವಾ​ಗಿದೆ.

ಡಬ್ಲ್ಯು​ಬಿಒ ಏಷ್ಯಾ ಪೆಸಿ​ಫಿಕ್‌ ಹಾಗೂ ಓರಿ​ಯೆಂಟಲ್‌ ಸೂಪರ್‌ ಮಿಡ್ಲ್‌ವೇಟ್‌ ಚಾಂಪಿ​ಯನ್‌ಶಿಪ್‌ಗಳನ್ನು ತಮ್ಮ ಬಳಿ ಇಟ್ಟು​ಕೊಂಡಿ​ರುವ ಭಾರ​ತದ ಬಾಕ್ಸಿಂಗ್‌ ತಾರೆ, 8 ಸುತ್ತುಗಳ ಪಂದ್ಯ​ದಲ್ಲಿ ಅವಿ​ರೋಧ ಗೆಲುವು ಸಾಧಿ​ಸಿ​ದರು. ವಿಜೇಂದರ್‌ರ ಬಲಗೈ ಪಂಚ್‌ಗಳಿಗೆ ಚಾರ್ಲ್ಸ್ ಬಳಿ ಉತ್ತ​ರ​ವಿ​ರ​ಲಿಲ್ಲ. 

ದುಬೈ​ನಲ್ಲಿ ಬಾಕ್ಸರ್ ವಿಜೇಂದ​ರ್‌ ಕಾದಾಟಕ್ಕೆ ಡೇಟ್ ಫಿಕ್ಸ್..!

42 ವರ್ಷದ ಚಾರ್ಲ್ಸ್, ಈ ಪಂದ್ಯಕ್ಕೂ ಮುನ್ನ 47 ಬೌಟ್‌ಗಳನ್ನು ಆಡಿ​ದ್ದರು. ಅದ​ರಲ್ಲಿ 33(26 ನಾಕೌಟ್‌) ಗೆಲುವುಗಳನ್ನು ಸಾಧಿ​ಸಿ​ದ್ದರು. 1998ರ ಕೌಲಾ​ಲಂಪುರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಾರ್ಲ್ಸ್ ಕಂಚಿನ ಪದಕ ಜಯಿ​ಸಿ​ದ್ದರು. ಒಲಿಂಪಿಕ್ಸ್‌ನಲ್ಲೂ ಅವರು ಘಾನಾವನ್ನು ಪ್ರತಿ​ನಿ​ಧಿ​ಸಿ​ದ್ದರು.

ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ಗೆ 11ನೇ ಜಯ

ವಿಜೇಂದರ್ ಸಿಂಗ್ ಅದ್ಭುತ ಗೆಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.