ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕಂಚು ಗೆದ್ದ ಮೇರಿ ಕೋಮ್
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್ ಹೋರಾಟ ಅಂತ್ಯವಾಗಿದೆ. ಸೆಮಿಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಮೇರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಷ್ಯಾ(ಅ.12): 2019 ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸೆಮಿಫೈನಲ್’ನ 51 ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್ ಟರ್ಕಿಯ ಬ್ಯೂಸಿನಾಜ್ ಕಾಕಿರೋಗ್ಲು ವಿರುದ್ಧ ಮುಗ್ಗರಿಸುವುದರೊಂದಿಗೆ ಮೇರಿ ತಮ್ಮ ಅಭಿಯಾನ ಅಂತ್ಯಗೊಂಡಿದೆ.
ಮಹಿಳೆಯರ ವಿಶ್ವ ಬಾಕ್ಸಿಂಗ್ ಕೂಟ: ಜಯದ ನಿರೀಕ್ಷೆಯಲ್ಲಿ ಮೇರಿ
ಇದುವರೆಗೂ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದ ಮೇರಿ, ದಾಖಲೆಯ 7ನೇ ಚಿನ್ನ ಗೆಲ್ಲುವ ಕನಸು ಭಗ್ನವಾಗಿದೆ. ಬ್ಯೂಸಿನಾಜ್ ಕಾಕಿರೋಗ್ಲು ವಿರುದ್ಧ 4-1 ಅಂಕಗಳಿಂದ ಮೇರಿ ಕೋಮ್ ಸೋಲೊಪ್ಪಿಕೊಂಡರು.
ರಾಷ್ಟ್ರೀಯ ಅಥ್ಲೆಟಿಕ್ಸ್ : ದಾಖಲೆ ಬರೆದ ದ್ಯುತಿ
ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಮೂರು ಮಹಿಳಾ ಬಾಕ್ಸರ್’ಗಳು ಇಂದು ನಡೆಯಲಿರುವ ಪಂದ್ಯಗಳಲ್ಲಿ ಗೆದ್ದು ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಂಜು ರಾಣಿ 48 ಕೆ.ಜಿ ವಿಭಾಗದಲ್ಲಿ ಥಾಯ್ಲೆಂಡ್’ನ ರಕ್ಷತ್ ಚುಟಾಮಟ್ ರನ್ನು ಎದುರಿಸಲಿದ್ದಾರೆ. ಆ ಬಳಿಕ ಜಮುನಾ ಬೊರೊ 54 ಕೆ.ಜಿ ವಿಭಾಗದಲ್ಲಿ ತೈವಾನ್’ನ ಹಸಿವೋ ವ್ಯಾನ್ ಹ್ಯುಂಗ್ ವಿರುದ್ಧ ಕಾದಾಡಲಿದ್ದಾರೆ. ಇನ್ನು
ಭಾರತದ ಕೊನೆಯ ಹೋರಾಟದಲ್ಲಿ ಲೊವ್ಲಿನಾ ಬೊರ್ಗೈನ್ 69 ಕೆ.ಜಿ ವಿಭಾಗದಲ್ಲಿ ಚೀನಾದ ಲಿಯು ಯಂಗ್ ವಿರುದ್ಧ ಸೆಣಸಲಿದ್ದಾರೆ.