Asianet Suvarna News Asianet Suvarna News

ಇಂದಿನಿಂದ ಥಾಮಸ್‌, ಉಬರ್‌ ಕಪ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ

* ಇಂದಿನಿಂದ ಥಾಮಸ್‌, ಉಬರ್‌ ಕಪ್‌ ಫೈನಲ್ಸ್‌ ಪಂದ್ಯಾವಳಿ ಆರಂಭ

* ಸೈನಾ ನೆಹ್ವಾಲ್‌, ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ ಸಾಯಿರಾಜ್‌ ರಂಕಿರೆಡ್ಡಿ ಕಣಕ್ಕೆ

* ಉಬರ್‌ ಕಪ್‌ನಲ್ಲಿ ಮಹಿಳಾ ತಂಡವು ‘ಬಿ’ ಗುಂಪಿನಲ್ಲಿ ಥಾಯ್ಲೆಂಡ್‌, ಸ್ಪೇನ್‌, ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ.

India look up to star Badminton players for good show at Thomas and Uber Cup 2021 kvn
Author
Ahaus, First Published Oct 9, 2021, 9:24 AM IST
  • Facebook
  • Twitter
  • Whatsapp

ಆಹಸ್‌(ಅ.09): ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೋಲಿನ ಆಘಾತದಿಂದ ಪುಟಿದೇಳುವ ಹಂಬಲದಲ್ಲಿರುವ ಭಾರತ ತಂಡವು ಶನಿವಾರದಿಂದ ಆರಂಭಗೊಳ್ಳಲಿರುವ ಥಾಮಸ್‌(ಪುರುಷ) ಮತ್ತು ಉಬರ್‌(ಮಹಿಳಾ) ಕಪ್‌ ಫೈನಲ್ಸ್‌ ಪಂದ್ಯಾವಳಿಯಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದೆ.

ಸೈನಾ ನೆಹ್ವಾಲ್‌ (Saina Nehwal) , ಚಿರಾಗ್‌ ಶೆಟ್ಟಿ (Chirag Shetty) ಮತ್ತು ಸಾತ್ವಿಕ ಸಾಯಿರಾಜ್‌ ರಂಕಿರೆಡ್ಡಿ ತಂಡಕ್ಕೆ ಮರಳಿರುವುದು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಳೆದ ವಾರ ಫಿನ್ಲೆಂಡ್‌ನಲ್ಲಿ ನಡೆದ ಸುದಿರ್ಮನ್‌ ಕಪ್‌ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದ ಭಾರತ ಚೀನಾ ಮತ್ತು ಥಾಯ್ಲೆಂಡ್‌ ವಿರುದ್ಧ ಸೋಲುಂಡಿತ್ತು. ಥಾಮಸ್‌ ಕಪ್‌ನಲ್ಲಿ ಭಾರತ ಪುರುಷರ ತಂಡವು ಚೀನಾ, ನೆದರ್ಲೆಂಡ್‌ ಮತ್ತು ತಹಿತಿಯೊಂದಿಗೆ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಬರ್‌ ಕಪ್‌ನಲ್ಲಿ ಮಹಿಳಾ ತಂಡವು ‘ಬಿ’ ಗುಂಪಿನಲ್ಲಿ ಥಾಯ್ಲೆಂಡ್‌, ಸ್ಪೇನ್‌, ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ.

ISSF ಶೂಟಿಂಗ್ ವಿಶ್ವಕಪ್‌: 11ನೇ ಚಿನ್ನದ ಪದಕ ಬೇಟೆಯಾಡಿದ ಭಾರತ

ಪುರುಷರ ತಂಡ ಮೊದಲ ಪಂದ್ಯದಲ್ಲಿ ನೆದರ್ಲೆಂಡ್‌ ವಿರುದ್ಧ ಕಣಕ್ಕೆ ಇಳಿದರೆ, ಮಹಿಳಾ ತಂಡ ಸ್ಪೇನ್‌ ವಿರುದ್ಧ ಪಂದ್ಯವನ್ನಾಡಲಿದೆ. ಪುರುಷರ ತಂಡ ಕಳೆದ 11 ವರ್ಷಗಳಿಂದ ಟೂರ್ನಿಯ ನಾಕೌಟ್‌ ಹಂತವನ್ನೂ ಪ್ರವೇಶಿಸಿಲ್ಲ. ಮಹಿಳಾ ತಂಡವು 2014 ಮತ್ತು 2016ರಲ್ಲಿ ಸತತ 2 ಬಾರಿ ಕಂಚಿನ ಪದಕ ಜಯಿಸಿತ್ತು. 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು ಪಂದ್ಯಾವಳಿಗೆ ಗೈರಾಲಿದ್ದು, ಸೈನಾ ನೆಹ್ವಾಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಬಿ ಸಾಯಿ ಪ್ರಣೀತ್‌, ಕಿದಂಬಿ ಶ್ರೀಕಾಂತ್‌ (Kidambi Srikant), ಸಮೀರ್‌ ವರ್ಮಾ, ಕಿರಣ್‌ ಜಾರ್ಜ್ ಪುರುಷರ ತಂಡದಲ್ಲಿದ್ದು, ಪದಕ ಆಸೆ ಚಿಗುರಿದೆ.

ಹಾಕಿ: ಪ್ರೋ ಲೀಗ್‌ನಲ್ಲಿ ಭಾರತ ಮಹಿಳಾ ಕಣಕ್ಕೆ

ಲೌಸನ್ನೆ: ಇದೇ ತಿಂಗಳು ನಡೆಯಲಿರುವ 3ನೇ ಆವೃತ್ತಿಯ ಮಹಿಳಾ ಹಾಕಿ ಪ್ರೋ ಲೀಗ್‌ನಲ್ಲಿ ಬದಲಿ ತಂಡಗಳಾಗಿ ಭಾರತ ಹಾಗೂ ಸ್ಪೇನ್‌ ತಂಡಗಳು ಆಡಲಿವೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಶುಕ್ರವಾರ ಪ್ರಕಟಿಸಿದೆ. 

ಕೋವಿಡ್‌ (Covid 19) ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದಿಂದಾಗಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ತಂಡಗಳು ಟೂರ್ನಿಯಿಂದ ಹಿಂದೆ ಸರಿದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಟೋಕಿಯೋ ಒಲಿಂಪಿಕ್ಸ್‌ ಬಳಿಕ ಭಾರತ ಮಹಿಳಾ ತಂಡ ಪಾಲ್ಗೊಳ್ಳುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಿ ಇದಾಗಿದೆ.

‘ಎಫ್‌ಐಎಚ್‌ ಹಾಕಿ ಪ್ರೋ ಲೀಗ್‌ (FIH Hockey Pro League) ಗೆ ಭಾರತ, ಸ್ಪೇನ್‌ ತಂಡಗಳು ಸೇರ್ಪಡೆಯಾಗಿದೆ ಎಂಬುದನ್ನು ಘೋಷಿಸಲು ಸಂತೋಷವಾಗುತ್ತಿದೆ. ಬದಲಿ ತಂಡಗಳಾಗಿ ಭಾರತ ಮತ್ತು ಸ್ಪೇನ್‌ ಈ ಆವೃತ್ತಿಯಲ್ಲಿ ಮಾತ್ರ ಆಡಲಿವೆ. ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಮುಂದಿನ ಆವೃತ್ತಿಯ ಪ್ರೋ ಲೀಗ್‌ಗೆ ಮರಳಲಿವೆ’ ಎಂದು ಎಫ್‌ಐಎಚ್‌ ತಿಳಿಸಿದೆ. ಟೂರ್ನಿ ಅಕ್ಟೋಬರ್ 13ರಿಂದ ಆರಂಭವಾಗಲಿದೆ.

ISSF ಶೂಟಿಂಗ್ ವಿಶ್ವಕಪ್‌‌: ಮತ್ತೊಂದು ಚಿನ್ನ ಬೇಟೆಯಾಡಿದ ಭಾರತ

ಟೋಕಿಯೋ ಒಲಿಂಪಿಕ್ಸ್‌ (Tokyo Olympics) ನಲ್ಲಿ ಅದ್ಭುತ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತ ತಂಡ ಅದೇ ಹುಮ್ಮಸ್ಸಿನೊಂದಿಗೆ ಪ್ರೋ ಲೀಗ್‌ನಲ್ಲಿ ಕಣಕ್ಕಿಳಿಯಲಿದೆ. ಅಲ್ಲದೇ, ಮುಂದಿನ ವರ್ಷ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ ಮಾಡಿಕೊಳ್ಳಲು ಇದು ತಂಡಕ್ಕೆ ಉತ್ತಮ ವೇದಿಕೆಯಾಗಿದೆ. ಏಷ್ಯನ್‌ ಗೇಮ್ಸ್‌ (Asian Games) ನಲ್ಲಿ ಗೆದ್ದರೆ ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics) ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

Follow Us:
Download App:
  • android
  • ios