* ಕಿರಿಯರ ಶೂಟಿಂಗ್ ವಿಶ್ವಕಪ್‌ನಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದ ಭಾರತ* ಮನು ಭಾಕರ್‌ಗೆ ಒಲಿದ ನಾಲ್ಕನೇ ಸ್ವರ್ಣ ಪದಕ* ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದ ಭಾರತ

ಲಿಮಾ(ಅ.08): ಐಎಸ್‌ಎಸ್‌ಎಫ್‌ ಕಿರಿಯರ ಶೂಟಿಂಗ್‌ ವಿಶ್ವಕಪ್‌ (ISSF Junior World Championships) ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಗುರುವಾರ ಮಹಿಳೆಯರ 25 ಮೀ. ಪಿಸ್ತೂಲ್‌ ತಂಡ ವಿಭಾಗದಲ್ಲಿ ಮನು ಭಾಕರ್‌ (Manu Bhaker), ರಿಧಮ್‌ ಸಾಂಗ್ವಾನ್‌, ನಾಮ್ಯ ಕಪೂರ್‌ ಅವರನ್ನೊಳಗೊಂಡ ಭಾರತ, ಅಮೆರಿಕಾ ತಂಡವನ್ನು 16-4ರಿಂದ ಸೋಲಿಸಿ ಸ್ವರ್ಣ ಗೆದ್ದುಕೊಂಡಿತು. 

Scroll to load tweet…
Scroll to load tweet…

ಇದರೊಂದಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಮನು 4ನೇ ಚಿನ್ನ ಗೆದ್ದರೆ, 14ರ ಹರೆಯದ ನಾಮ್ಯ 2ನೇ ಬಂಗಾರಕ್ಕೆ ಮುತ್ತಿಕ್ಕಿದರು. ಪುರುಷರು ಟ್ರಾಪ್‌ ತಂಡ ವಿಭಾಗದಲ್ಲಿ ಭಕ್ತಯರುದ್ದೀನ್‌, ಶಾರ್ದೂಲ್‌ ವಿಹಾನ್‌, ವಿವಾನ್‌ ಕಪೂರ್‌ ಅವರಿದ್ದ ತಂಡ ಇಟಲಿ ವಿರುದ್ಧ 4-6ರಿಂದ ಸೋತು ಬೆಳ್ಳಿ ಪಡೆದರೆ, ಪುರುಷರ 25 ಮೀ. ರಾರ‍ಯಪಿಡ್‌ ಫೈರ್‌ ಪಿಸ್ತೂಲ್‌ನಲ್ಲಿ ಆದರ್ಶ್‌ ಸಿಂಗ್‌ ಬೆಳ್ಳಿ ಗೆದ್ದರು. ಭಾರತ 9 ಚಿನ್ನ, 8 ಬೆಳ್ಳಿ, 3 ಕಂಚು ಸೇರಿ 20 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸ್ಯಾಫ್‌: ಲಂಕಾ ವಿರುದ್ಧವೂ ಡ್ರಾಗೆ ತೃಪ್ತಿಪಟ್ಟಭಾರತ

ಮಾಲೆ: ಸ್ಯಾಫ್‌ ಚಾಂಪಿಯನ್‌ಶಿಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ನಿರಾಸದಾಯಕ ಪ್ರದರ್ಶನ ಮುಂದುವರಿಸಿದೆ. ಶುಕ್ರವಾರ ಫಿಫಾ ರಾರ‍ಯಂಕಿಂಗ್‌ನಲ್ಲಿ 205ನೇ ಸ್ಥಾನದಲ್ಲಿರುವ ಶ್ರೀಲಂಕಾ ವಿರುದ್ಧ ಭಾರತ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತು. 

ISSF ಶೂಟಿಂಗ್: ಭಾರತಕ್ಕೆ ಮತ್ತೆ ನಾಲ್ಕು ಚಿನ್ನ

7 ಬಾರಿಯ ಚಾಂಪಿಯನ್‌ ಭಾರತ ಸತತ 2ನೇ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಉಳಿದಿದೆ. 5 ತಂಡಗಳು ಸ್ಪರ್ಧಿಸುತ್ತಿರುವ ಟೂರ್ನಿಯಲ್ಲಿ ನೇಪಾಳ 2 ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 1 ಗೆಲುವು, 1 ಸೋಲಿನೊಂದಿಗೆ 2ನೇ ಸ್ಥಾನದಲ್ಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಅ.10ರಂದು ನೇಪಾಳ ವಿರುದ್ಧ ಆಡಲಿದ್ದು, ಅಂತಿಮ ಪಂದ್ಯವನ್ನು ಅ.13ರಂದು ಮಾಲ್ಡೀವ್ಸ್‌ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳನ್ನೂ ಗೆದ್ದರಷ್ಟೇ ಭಾರತ ಫೈನಲ್‌ಗೇರಲಿದೆ.