Asianet Suvarna News Asianet Suvarna News

ಕಿಂಗ್ ಆಫ್ ಕ್ಲೇ ಕೋರ್ಟ್‌ ನಡಾಲ್‌ ಪಾಲಾದ 10ನೇ ಇಟಾಲಿಯನ್‌ ಓಪನ್‌

* ಇಟಾಲಿಯನ್‌ ಓಪನ್‌ ಟೆನ್ನಿಸ್‌ ಟೂರ್ನಿಯಲ್ಲಿ ರಫೇಲ್‌ ನಡಾಲ್‌ ಚಾಂಪಿಯನ್

* ವಿಶ್ವದ ನಂ.1 ಟೆನ್ನಿಸ್‌ ಆಟಗಾರ ನೊವಾಕ್‌ ಜೋಕೋವಿಚ್‌ ವಿರುದ್ದ ನಡಾಲ್‌ಗೆ ಜಯ

* 10ನೇ ಬಾರಿಗೆ ಇಟಾಲಿಯನ್‌ ಓಪನ್‌ ಟ್ರೋಫಿ ಜಯಿಸಿದ ನಡಾಲ್

Italian Open 2021 Rafael Nadal Beats Novak Djokovic To Clinch Mens Singles Title kvn
Author
Rome, First Published May 18, 2021, 9:07 AM IST

ರೋಮ್‌(ಮೇ.18):  ಇಲ್ಲಿ ನಡೆದ ಇಟಾಲಿಯನ್‌ ಓಪನ್‌ ಟೆನ್ನಿಸ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಟೆನ್ನಿಸ್‌ ಆಟಗಾರ ಹಾಗೂ ಆವೆ ಅಂಗಣದ ರಾಜ(ಕಿಂಗ್  ಆಫ್‌ ಕ್ಲೇ ಕೋರ್ಟ್) ರಫೇಲ್‌ ನಡಾಲ್‌ ಅವರು ವಿಶ್ವದ ನಂ.1 ಟೆನ್ನಿಸ್‌ ಆಟಗಾರ ನೊವಾಕ್‌ ಜೋಕೋವಿಚ್‌ ವಿರುದ್ಧ ವಿಜಯ ಸಾಧಿಸಿದ್ದಾರೆ. 

ಈ ಮೂಲಕ ಎಡಗೈ ಟೆನಿಸಿಗ 10ನೇ ಸಲ ಇಟಾಲಿಯನ್‌ ಓಪನ್‌ ಗೆದ್ದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2 ಗಂಟೆ 49 ನಿಮಿಷಗಳ ಕಾಲ ನಡೆದ ಸುದೀರ್ಘ ಆಟದಲ್ಲಿ ನಡಾಲ್‌ 7-5, 1-6, 6-3 ಅಂತರದಿಂದ ನೊವಾಕ್‌ ಜೋಕೋವಿಚ್‌ ವಿರುದ್ದ ಜಯ ಸಾಧಿಸಿದರು.

Italian Open 2021 Rafael Nadal Beats Novak Djokovic To Clinch Mens Singles Title kvn

ಈ ಟ್ರೋಫಿಯನ್ನು 10ನೇ ಬಾರಿಗೆ ಎತ್ತಿ ಹಿಡಿಯುತ್ತಿರುವುದು ನಿಜಕ್ಕೂ ಒಂದು ರೀತಿಯ ಅದ್ಭುತ ಅನುಭವ. ಏನೋ ಒಂದು ರೀತಿಯ ಅಸಾಧ್ಯವಾದ್ದದ್ದನ್ನು ಸಾಧಿಸಿದ ಅನುಭವ ಎಂದು ನಡಾಲ್‌ ಈ ಗೆಲುವಿನ ಖುಷಿಯನ್ನು ಬಣ್ಣಿಸಿದ್ದಾರೆ. 

ಈ ವರ್ಷವೂ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿ‌ ಮುಂದೂಡಿಕೆ?

ಫೈನಲ್‌ನಲ್ಲಿ ರಫೇಲ್‌ ನಡಾಲ್‌ ಅವರನ್ನು ಎದುರಿಸುವುದಕ್ಕಿಂತ ದೊಡ್ಡ ಸವಾಲು ಮತ್ತೊಂದಿಲ್ಲ. ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಿದೆ. ಹಾಗಂತ ನನ್ನ ಪ್ರದರ್ಶನದ ಬಗ್ಗೆ ನನಗೆ ತೃಪ್ತಿಯಿದೆ. 3 ಗಂಟೆಗಳ ಕಾಲ ಒಳ್ಳೆಯ ಆಟ ಮೂಡಿ ಬಂತು ಎಂದು ನೊವಾಕ್‌ ಜೋಕೋವಿಚ್‌ ಅಭಿಪ್ರಾಯಪಟ್ಟಿದ್ದಾರೆ.
 

Follow Us:
Download App:
  • android
  • ios