ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೆಮೀಸ್‌ಗೆ ಸಿಂಧು ಲಗ್ಗೆ
* ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಮೀಸ್ ಪ್ರವೇಶಿಸಿದ ಸಿಂಧು
* ಥಾಯ್ಲೆಂಡ್ ಆಟಗಾರ್ತಿ ಎದುರು ಅಮೋಘ ಗೆಲುವು ದಾಖಲಿಸಿದ ಸಿಂಧು
* ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ ಲಕ್ಷ್ಯ ಸೆನ್
ಪ್ಯಾರಿಸ್(ಅ.30): ಹಾಲಿ ವಿಶ್ವಚಾಂಪಿಯನ್, ಭಾರತದ ತಾರಾ ಶಟ್ಲರ್, ಪಿ.ವಿ. ಸಿಂಧು (PV Sindhu) ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ (French Open Badminton) ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್‌ನ ಬುಸಾನನ್ ಓಂಗ್ಬಾಮ್ರುನ್ಪಾನ್ ವಿರುದ್ದ 21-14, 21-14 ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ ಕಂಚು ಡೆನ್ಮಾರ್ಕ್ ಓಪನ್ (Denmark Open) ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದರು.
ಇದೀಗ ಸೆಮಿಫೈನಲ್‌ನಲ್ಲಿ ಸಿಂಧುವಿಗೆ ಜಪಾನ್‌ನ ಸಯಾಕ ತಕಹಾಶಿ ಎದುರಾಗಲಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೆನ್ (Lakshya Sen), ದಕ್ಷಿಣ ಕೊರಿಯಾದ ಡೇನಿಯಲ್ ಹಿಯೋ ಕ್ವಾಂಗ್ ಹೀ ವಿರುದ್ದ 17-21, 15-21 ನೇರ ಗೇಮ್‌ಗಳಲ್ಲಿ ಸೋಲುಂಡರು. ಆಕರ್ಷಕ ಆಟದೊಂದಿಗೆ ಕ್ವಾರ್ಟರ್ ಫೈನಲ್‌ಗೇರಿದ್ದ ಲಕ್ಷ್ಯ ಸೆನ್, ಜಯದ ಲಯ ಕಾಯ್ದುಕೊಳ್ಳುವಲ್ಲಿ ವಿಫಲರಾದರು.
T20 World Cup: ಕೋಕಾ ಕೋಲಾ ಬದಿಗೆ ಸರಿಸಿ, ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್..!
ಇದೇ ವೇಳೆ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಸಾತ್ವಿಕ್‌ರಾಜ್ ರಂಕಿರೆಡ್ಡಿ -ಚಿರಾಗ್ ಶೆಟ್ಟಿ (Chirag Shetty) ಜೋಡಿ ಟೂರ್ನಿಯಿಂದ ಹೊರಬಿದ್ದಿತು. 4ನೇ ಶ್ರೇಯಾಂಕಿತ ಮಲೇಶಿಯಾದ ಜೋಡಿಯಾದ ಆರೋನ್ ಚಿಯಾ ಹಾಗೂ ಸೋ ವೀ ಯಿಕ್ ಎದುರು 21-18, 18-21 ಹಾಗೂ 12-21 ಅಂಕಗಳಿಂದ ರೋಚಕ ಸೋಲು ಅನುಭವಿಸಿತು.
ಇದಕ್ಕೂ ಮೊದಲು ಗುರುವಾರ ನಡೆದ ಪುರುಷರ ಡಬಲ್ಸ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಚಿರಾಗ್ ಶೆಟ್ಟ - ಸಾತ್ವಿಕ್‌ರಾಜ್ ರಂಕಿರೆಡ್ಡಿ ಜೋಡಿ 15-21, 21-10,21-19 ಗೇಮ್‌ಗಳಿಂದ ಎಂ.ಆರ್ ಅರ್ಜುನ್ ಹಾಗೂ ಧೃವ್ ಕಪಿಲ ವಿರುದ್ದ ಗೆಲುವು ಸಾಧಿಸಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿತ್ತು.
ವಿಶ್ವ ಬಾಕ್ಸಿಂಗ್ ಕೂಟ: ಪ್ರೀ ಕ್ವಾರ್ಟರ್‌ಗೆ ಸಂಜೀತ್
ಬೆಲ್ಗ್ರೇಡ್: ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಂಜೀತ್(92 ಕೆ.ಜಿ) ಹಾಗೂ ಆಕಾಶ್ ಕುಮಾರ್ (54 ಕೆ.ಜಿ) ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
Puneeth Rajkumar Death: ಆರ್‌ಸಿಬಿ, ಬೆಂಗ್ಳೂರು ಬುಲ್ಸ್‌ಗೆ ರಾಯಭಾರಿಯಾಗಿದ್ದ ಪವರ್‌ಸ್ಟಾರ್
ಏಷ್ಯನ್ ಚಾಂಪಿಯನ್ ಸಂಜೀತ್, ರಷ್ಯಾದ ಆಂಡ್ರೆ ಸ್ಪೋಟ್ಸಿ ವಿರುದ್ದ ಜಯ ಗಳಿಸಿದರೆ, ಜರ್ಮನಿಯ ಒಮರ್ ಸಲ್ಹಾ ಅನಾರೋಗ್ಯದ ಕಾರಣದಿಂದ ಪಂದ್ಯದಲ್ಲಿ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಆಕಾಶ್‌ಗೆ ವಾಕ್ ಓವರ್ ದೊರೆಯಿತು. ಇನ್ನು 60 ಕೆ.ಜಿ. ವಿಭಾಗದಲ್ಲಿ ವರೀಂದರ್ ಪಂದ್ಯದಿಂದ ಹಿಂದೆ ಸರಿದರು. ವರೀಂದರ್ ಜ್ವರದಿಂದ ಬಳಲುತ್ತಿದ್ದಾರೆ.
ರಾಷ್ಟ್ರೀಯ ಈಜು: ಕರ್ನಾಟಕ ಸಮಗ್ರ ಚಾಂಪಿಯನ್
ಬೆಂಗಳೂರು: 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಜ್ಯ ತಂಡ 30ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್: ರಾಜ್ಯದ ಸಂಭವ್ ಹೊಸ ದಾಖಲೆ
ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ ಕ್ರೀಡಾಕೂಟದ ಅಂತಿಮ ದಿನವಾದ ಶುಕ್ರವಾರ , ಪುರುಷರ 200 ಮೀಟರ್ ಫ್ರೀ ಸ್ಟೈಲ್ ವಿಭಾಗದಲ್ಲಿ ರಾಜ್ಯದ ತಾರಾ ಈಜುಪಟು ಶ್ರೀಹರಿ ನಟರಾಜ್ ಹೊಸ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 17 ಚಿನ್ನ, 10 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಜಯಿಸಿತು.