ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಹಾಗೂ ರೋಮೇನಿಯಾದ ಸಿಮೊನಾ ಹಾಲೆಪ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್(ಅ.03): 2020ರ ಯುಎಸ್ ಚಾಂಪಿಯನ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಹಾಗೂ ರೋಮೇನಿಯಾದ ಸಿಮೊನಾ ಹಾಲೆಪ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುರುಷರ ಸಿಂಗಲ್ಸ್‌ನ 3ನೇ ಸುತ್ತಲ್ಲಿ ಥೀಮ್, ನಾರ್ವೆಯ ಟೆನಿಸಿಗ ಕ್ಯಾಸ್ಪರ್ ರುಡ್ ವಿರುದ್ಧ 6-4, 6-3, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2 ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಥೀಮ್, ರುಡ್‌ರನ್ನು ಮಣಿಸಿದರು. 

Scroll to load tweet…

ಮಹಿಳಾ ಸಿಂಗಲ್ಸ್ 3ನೇ ಸುತ್ತಲ್ಲಿ ರೋಮೇನಿಯಾದ ಹಾಲೆಪ್, ಅಮೆರಿಕದ ಅನಿಸಿಮೊವಾ ಎದುರು 6-0, 6-1 ಸೆಟ್‌ಗಳಲ್ಲಿ ಜಯ ಪಡೆದು 4ನೇ ಸುತ್ತಿಗೇರಿದರು. ಮತ್ತೊಂದು ಪಂದ್ಯದಲ್ಲಿ ಕೆನಡಾದ ಯುಜಿನಿ ಬೌಚರ್ಡ್, ಪೋಲೆಂಡ್‌ನ ಇಗಾ ಸ್ವಿಟೆಕ್ ವಿರುದ್ಧ ಸೋತರು. 

ಫ್ರೆಂಚ್ ಓಪನ್: ಮೂರನೇ ಸುತ್ತಿಗೆ ಜೋಕೋವಿಚ್ ಲಗ್ಗೆ

Scroll to load tweet…

ಭಾರತದ ಸವಾಲು ಅಂತ್ಯ: ಡಬಲ್ಸ್ ಮೊದಲ ಸುತ್ತಲ್ಲಿ ಭಾರತದ ರೋಹನ್ ಬೋಪಣ್ಣ, ಕೆನಡಾದ ಶಪೊಲವ್ ಜೋಡಿ, ಅಮೆರಿಕದ ಜಾಕ್ ಸಾಕ್, ಕೆನಡಾದ ವಾಸೆಕ್ ಜೋಡಿ ವಿರುದ್ಧ 2-6, 2-6 ರಲ್ಲಿ ಸೋತು, ಟೂರ್ನಿಯಿಂದ ಹೊರಬಿದ್ದಿತು.