ಪ್ಯಾರಿಸ್(ಅ.02): ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ. 

ಪುರುಷರ ಸಿಂಗಲ್ಸ್‌ನ 2ನೇ ಸುತ್ತಲ್ಲಿ 2016ರ ಫ್ರೆಂಚ್ ಓಪನ್ ಚಾಂಪಿಯನ್ ಜೋಕೋವಿಚ್, ಲಿತುನಿಯಾದ ರಿಕರ್ಡಸ್ ಬೆರ್ನಾಕಿ ವಿರುದ್ಧ 6-1, 6-2, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಉಳಿದಂತೆ ಸ್ವಿಜರ್‌ಲೆಂಡ್‌ನ ಸ್ಟಾನ್ ವಾವ್ರಿಂಕಾ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೊವ್, ರಷ್ಯಾದ ಕರೆನ್ ಕಚನೊವ್ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

ಫ್ರೆಂಚ್ ಓಪನ್: ನಡಾಲ್, ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ

ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಸೋಫಿಯಾ ಕೆನಿನ್, ರೋಮೇನಿಯಾದ ಬೊಗ್ಡಾನ್ ವಿರುದ್ಧ 3-6, 6-3, 6-2ರಲ್ಲಿ ಗೆದ್ದು 3ನೇ ಸುತ್ತಿಗೇರಿದರು. 

ದಿವಿಜ್ ಶರಣ್ ಜೋಡಿಗೆ ಸೋಲು: ಪುರುಷರ ಡಬಲ್ಸ್‌ನ  ಮೊದಲ ಸುತ್ತಲ್ಲಿ ಭಾರತದ ದಿವಿಜ್ ಶರಣ್, ದಕ್ಷಿಣ ಕೊರಿಯಾದ ಕೌನ್ ಸೂನ್ ಜೋಡಿ ಸೋತು ಹೊರಬಿತ್ತು.