Asianet Suvarna News Asianet Suvarna News

Abhinav Bindra:IOC ಸಮಿತಿ ಸದಸ್ಯರ ಆಯೋಗ ಸೇರಿದ ಭಾರತದ ಒಲಿಂಪಿಕ್ ತಾರೆ ಹಾಗೂ ಕೋಸ್ಟರಿಕಾ ಅಧ್ಯಕ್ಷೆ!

  • IOC ಸಮಿತಿಯ ಇಬ್ಬರು ಅಧಿಕಾರಿಗಳ ನಿರ್ಗಮನದಿಂದ ಸಮಿತಿ ಪುನರ್ ರಚನೆ
  • ಸದಸ್ಯರ ಎಲೆಕ್ಷನ್ ಕಮಿಶನ್ ಸೇರಿದ ಕೋಸ್ಟರಿಕಾ ಮಾಜಿ ಅಧ್ಯಕ್ಷ
  • ಕೋಸ್ಟರಿಕಾ ಅಧ್ಯಕ್ಷರ ಜೊತೆ ಭಾರತದ ಒಲಿಂಪಿಕ್ ತಾರೆ ಅಭಿನವ್ ಬಿಂದ್ರಾಗೆ ಅವಕಾಶ
Former Costa Rica President Laura Chinchilla olympic medalist Abhinav Bindra joins IOC Members Election Commission ckm
Author
Bengaluru, First Published Nov 5, 2021, 9:25 PM IST
  • Facebook
  • Twitter
  • Whatsapp

ಲುಸಾನೆ(ನ.05): ಇಬ್ಬರು ಸದಸ್ಯರ ನಿರ್ಗಮನದಿಂದ ತೆರವಾಗಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮತಿ(IOC) ಸಂಭಾವ್ಯ ಹೊಸ ಸದಸ್ಯರ ನೇಮಕ ಹಾಗೂ ಪರಿಶೀಲನಾ ಆಯೋಗಕ್ಕೆ ಇದೀಗ ಕೋಸ್ಟರಿಕಾ ಮಾಜಿ ಅಧ್ಯಕ್ಷೆ ಲೌರಾ ಚಿಂಚಿಲ್ಲಾ(Laura Chinchilla) ಹಾಗೂ ಭಾರತದ ಒಲಿಂಪಿಕ್ ತಾರೆ ಅಭಿನವ್ ಬಿಂದ್ರಾ( Abhinav Bindra) ಸೇರಿಕೊಂಡಿದ್ದಾರೆ. 

ಭಾರತದಲ್ಲಿ 2036ರ ಒಲಿಂಪಿಕ್ಸ್‌ ಆಯೋಜನೆಗೆ ಯತ್ನ: ಐಒಎ ಅಧ್ಯಕ್ಷ ನರೀಂದರ್ ಬಾತ್ರಾ

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರ ಚುನಾವಣಾ ಆಯೋಗವನ್ನು(IOC Members Election Commission) ಸ್ವೀಡನ್‌ನ ಸ್ಟೀಫನ್ ಹೋಲ್ಮ್ ಹಾಗೂ ಅಮೆರಿಕದ ಎಂಜಲಾ ರುಗ್ಗೀರೋ ತೊರೆದಿದ್ದರು. ಸ್ಟೀಫನ್ ಹೋಲ್ಮ್, 2004ರ ಅಥೆನ್ಸ್ ಒಲಿಂಪಿಕ್ಸ್ ಕೂಟದ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇನ್ನು ಒಲಿಂಪಿಕ್ಸ್ ಕೂಡ ಐಸ್ ಹಾಕಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಎಂಜಲಾ ರುಗ್ಗೀರೋ ಇದೀಗ IOC ಸದಸ್ಯರ ಚುನಾವಣಾ ಆಯೋಗ ತೊರೆದಿದ್ದಾರೆ. ಈ ಎರಡು ಸ್ಥಾನವನ್ನು ಲೌರಾ ಚಿಂಚಿಲ್ಲಾ ಹಾಗೂ  ಅಭಿನವ್ ಬಿಂದ್ರಾ ತುಂಬಿದ್ದಾರೆ.

ಟೊಕಿಯೊ ಒಲಿಂಪಿಕ್ಸ್ ಕೂಟದ ಬಳಿಕ IOC ಸದಸ್ಯರಾಗಿ ಸ್ಟೀಫನ್ ಹೋಲ್ಮ್ ಅವಧಿ ಅಂತ್ಯಗೊಂಡಿತ್ತು. ಇನ್ನು ಎಂಜಲಾ ರುಗ್ಗೀರೋ 2018ರಲ್ಲೇ IOC ಅಥ್ಲೀಟ್‌ಗಳ ಆಯೋಗದ ಅಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯ ಸ್ಥಾನ ತೊರೆದಿದ್ದರು. 

2032ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯ

IOC ಸದಸ್ಯರ ಆಯೋಗ ಸೇರಿಕೊಂಡಿರುವ ಚಿಂಚಿಲ್ಲಾ ಹಾಗೂ ಬಿಂದ್ರಾ ಬ್ರಿಟನ್ ರಾಜಕುಮಾರಿ ಅನ್ನಿ ಅಧ್ಯಕ್ಷತೆಯಲ್ಲಿ ಸದಸ್ಯರ ಚುನಾವಣಾ ಆಯೋಗ ಸೇರಿಕೊಂಡರು.  ಕೋಸ್ಟರಿಕಾ ಅಧ್ಯಕ್ಷ ಚಿಂಚಿಲ್ಲಾ  ಹಾಗೂ ಭಾರತದ ಖ್ಯಾತ ಒಲಿಂಪಿಕ್ ತಾರೆ ಅಭಿನವ್ ಬಿಂದ್ರಾ ಆಗಮನಕ್ಕೆ ವಿಶ್ವ ಒಲಿಂಪಿಕ್ಸ್ ಕ್ರೀಡಾ ಕೂಡ ಸಂತಸ ವ್ಯಕ್ತಪಡಿಸಿದೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್ಸ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನಕ್ಕೆ ಗುರಿ ಇಟ್ಟಿದ್ದರು. ಈ ಮೂಲಕ ಒಲಿಂಪಿಕ್ಸ್ ಕೂಡದಲ್ಲಿ ಚಿನ್ನ ಗೆದ್ದ ದಾಖಲೆ ಬರೆದಿದ್ದರು. ವೈಯುಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಅನ್ನೋ ಹೆಗ್ಗಳಿಕೆಗೆ ಬಿಂದ್ರ ಪಾತ್ರರಾಗಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 7 ಪದಕ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ 3 ಪದಕ ಗದ್ದ ಸಾಧನೆ ಮಾಡಿದ್ದಾರೆ. 22 ವರ್ಷದ ಕ್ರೀಡಾ ಕರಿಯರ್‌ನಲ್ಲಿ ಬಿಂದ್ರಾ 150ಕ್ಕೂ ಹೆಚ್ಚು ಪದಕ ಗೆದ್ದ ಸಾಧನೆ ಮಾಡಿದ್ದಾರೆ. 

ಚಿಂಚಿಲ್ಲಾ 20210 ರಿಂದ 2014ರ ವರೆಗೆ ಕೋಸ್ಟಾರಿಕಾ ಅಧ್ಯಕ್ಷರಾಗಿದ್ದರು. ಕೋಸ್ಟಾರಿಕಾದ ಮೊತ್ತ ಮೊದಲ ಮಹಿಳಾ ಅಧ್ಯಕ್ಷೆ ಅನ್ನೋ ಹೆಗ್ಗಳಿಕೆಗೆ ಚಿಂಚಿಲ್ಲಾ ಪಾತ್ರರಾಗಿದ್ದಾರೆ. ಸದ್ಯ ಜಾರ್ಜ್‌ಡೌನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿರುವ ಚಿಂಚಿಲ್ಲಾ ಇದೀಗ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೇರಿಕೊಂಡಿದ್ದಾರೆ. 

ಚಿಂಚಿಲ್ಲ ಹಾಗೂ ಅಭಿನವ್ ಬಿಂದ್ರಾ IOC ಉಪಾಧ್ಯಕ್ಷೆ  ಝೈಕಿಂಗ್ ಯು, ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ ಅಸೋಸಿಯೇಷನ್ ​​​​ಮುಖ್ಯಸ್ಥ ರಾಬಿನ್ ಮಿಚೆಲ್ ಹಾಗೂ ಇಥಿಯೋಪಿಯಾದ ಡಾಗ್ಮಾವಿಟ್ ಬರ್ಹಾನ್ ತಂಡ ಸೇರಿಕೊಳ್ಳಲಿದ್ದಾರೆ.

Follow Us:
Download App:
  • android
  • ios