ಭಾರತದಲ್ಲಿ 2036ರ ಒಲಿಂಪಿಕ್ಸ್ ಆಯೋಜನೆಗೆ ಯತ್ನ: ಐಒಎ ಅಧ್ಯಕ್ಷ ನರೀಂದರ್ ಬಾತ್ರಾ
* 2036ರ ಒಲಿಂಪಿಕ್ಸ್ ಭಾರತದಲ್ಲಿ ಆಯೋಜಿಸಲು ಈಗಿನಿಂದಲೇ ಯತ್ನ ಆರಂಭ
* ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ ಬಿಡ್ ಸಲ್ಲಿಸಲು ಸಿದ್ದತೆ
* ದೇಶದ ಮೂರ್ನಾಲ್ಕು ನಗರಗಳಲ್ಲಿ ಆಯೋಜಿಸಲು ಚಿಂತನೆ
ಅಹಮದಾಬಾದ್(ಅ.10): ಭಾರತದಲ್ಲಿ 2036ರ ಒಲಿಂಪಿಕ್ (Olympics) ಕ್ರೀಡಾಕೂಟ ಆಯೋಜನೆಯ ಬಿಡ್ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (International Olympic Committee)(ಐಒಸಿ) ಜೊತೆ ಮಾತುಕತೆ ನಡೆಸಲಾಗುತ್ತಿದೆ.
ಅಹಮದಾಬಾದ್‌ನ ಮೊಟೇರಾ (ನರೇಂದ್ರ ಮೋದಿ ಸ್ಟೇಡಿಯಂ) (Narendra Modi Stadium) ಕ್ರೀಡಾಂಗಣ ಉದ್ಘಾಟನಾ ಸಮಾರಂಭಕ್ಕೆ ಸೂಕ್ತವಾಗಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಅಧ್ಯಕ್ಷ ನರೀಂದರ್ ಬಾತ್ರ (Narinder Batra) ಶನಿವಾರ ಮಾಹಿತಿ ನೀಡಿದ್ದಾರೆ. ‘ಕ್ರೀಡಾಕೂಟವನ್ನು ದೇಶದ ಮೂರ್ನಾಲ್ಕು ನಗರಗಳಲ್ಲಿ ಆಯೋಜಿಸಲಾಗುತ್ತದೆ. ಐಒಎ (IOA) ಕ್ರೀಡಾಕೂಟ ಆಯೋಜನೆಯ ಬಿಡ್‌ಗಾಗಿ ಐಒಸಿ ಜೊತೆ ಚರ್ಚಿಸುತ್ತಿದೆ. ಭಾರತಕ್ಕೆ ಇದರ ಅವಕಾಶ ಸಿಗುವ ಸಾಧ್ಯತೆ ಉಜ್ವಲವಾಗಿದೆ. 2036ರ ಗೇಮ್ಸ್ ಆಯೋಜನೆ ಸಾಧ್ಯತೆ ಇರುವ 6-7 ದೇಶಗಳಲ್ಲಿ ಭಾರತವೂ ಕೂಡಾ ಒಂದು. ಈ ಬಗ್ಗೆ 2-3 ವರ್ಷಗಳಲ್ಲಿ ಅಂತಿಮ ನಿರ್ಧಾರವಾಗಲಿದೆ’ ಎಂದಿದ್ದಾರೆ.
ಜಗತ್ತಿನಲ್ಲಿ ಭಾರತ ಅತಿವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಜಗತ್ತಿನ ಮೂರನೇ ಬಲಿಷ್ಠ ಆರ್ಥಿಕತೆ ಹೊಂದುವ ರಾಷ್ಟ್ರವಾಗುವತ್ತ ಭಾರತ (India) ದಿಟ್ಟ ಹೆಜ್ಜೆಯನ್ನು ಹಾಕುತ್ತಿದೆ. 2036ರ ಹೊತ್ತಿಗಾಗಲೇ ಭಾರತ ವಿಶ್ವದ ಎರಡನೇ ಅಥವಾ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ನರೀಂದರ್ ಬಾತ್ರ ತಿಳಿಸಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ 1.5 ಕೋಟಿ ರುಪಾಯಿಗೆ ಹರಾಜು..!
ಇತ್ತೀಚೆಗಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್(Tokyo Olympics) ಕ್ರೀಡಾಕೂಟದಲ್ಲಿ ಭಾರತ ಒಂದು ಚಿನ್ನ(Gold), ಎರಡು ಬೆಳ್ಳಿ ಹಾಗೂ 4 ಕಂಚಿನ ಪದಕ ಸಹಿತ ಒಟ್ಟು 7 ಪದಕಗಳನ್ನು ಜಯಿಸುವ ಮೂಲಕ ಗರಿಷ್ಠ ಪದಕಗಳ ಸಾಧನೆ ಮಾಡಿತ್ತು. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ (Neeraj Chopra) 87.53 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು. 2024ರ ಒಲಿಂಪಿಕ್ಸ್ ಕ್ರೀಡಾಕೂಟವು ಪ್ಯಾರಿಸ್‌ನಲ್ಲಿ ನಡೆದರೆ, 2028 ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿದೆ. ಇನ್ನು 2032ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬ್ರಿಸ್ಬೇನ್ ಆತಿಥ್ಯದ ಹಕ್ಕು ಪಡೆದುಕೊಂಡಿದೆ.
ಫ್ರಾನ್ಸ್ ವಿವಿಯಿಂದ ಹರ್ಭಜನ್ ಸಿಂಗ್ ಗೌರವ ಡಾಕ್ಟರೇಟ್
ನವದೆಹಲಿ: ಭಾರತದ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಗೆ ಫ್ರಾನ್ಸ್‌ನ ಪ್ರತಿಷ್ಠಿತ ರಾಬರ್ಟ್ ಡೆ ಸೊರ್ಬೊನ್ ವಿಶ್ವವಿದ್ಯಾನಿಲಯ ಕ್ರೀಡೆಯಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆದರೆ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ (IPL 2021) ನಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಹರ್ಭಜನ್ ಘಟಿಕೋತ್ಸವ ಸಮಾರಂಭಕ್ಕೆ ಗೈರಾದರು. ಐಪಿಎಲ್‌ನಲ್ಲಿ ಹರ್ಭಜನ್ ಸಿಂಗ್ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
T20 World Cup ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಟಾಮ್ ಮೂಡಿ ಆಸಕ್ತಿ..!
41 ವರ್ಷದ ಹರ್ಭಜನ್ ಸಿಂಗ್ ಅವರ ಹೆಸರನ್ನು ಅವರ ಅಭಿಮಾನಿಗಳು ಗೌರವ ಡಾಕ್ಟರೇಟ್‌ಗೆ ಶಿಫಾರಸು ಮಾಡಿದ್ದರು. ‘ಯಾವುದೇ ಸಂಸ್ಥೆ ಗೌರವ ನೀಡಿದರೆ ಅದನ್ನು ವಿನಮ್ರತೆಯಿಂದ ಸ್ವೀಕರಿಸಬೇಕು’ ಎಂದು ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಹರ್ಭಜನ್ ಸಿಂಗ್ ಟೀಂ ಇಂಡಿಯಾ (Team India) ಪರ ಒಟ್ಟು 103 ಟೆಸ್ಟ್, 236 ಏಕದಿನ ಹಾಗೂ 28 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 417, 236 ಹಾಗೂ 25 ವಿಕೆಟ್ ಕಬಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಸದಸ್ಯರಾಗಿದ್ದರು.