Asianet Suvarna News Asianet Suvarna News

ತಮ್ಮದೇ ದಾಖಲೆ ಮುರಿದು ಟೋಕಿಯೋಗೆ ಹೊರಟ ದೇವೇಂದ್ರ, ಗುಡ್ ಲಕ್!

* ತಮ್ಮದೇ ದಾಖಲೆಯನ್ನು ಮುರಿದ ದೇವೇಂದ್ರ ಝಾಜಾರಿಯಾ
* ಟೋಕಿಯೋ ಪ್ಯಾರಾಲಿಂಪಿಕ್ ಕಡೆ ಸಿದ್ಧತೆ
* ದೆಹಲಿಯ ಪ್ರಾಕ್ಟೀಸ್ ನಲ್ಲಿ ತಮ್ಮದ ದಾಖಲೆ ಮುರಿದಿದ್ದಾರೆ

devendra-jhajharia-broke-his-own-world-record-qualified-for-tokyo-paralympics mah
Author
Bengaluru, First Published Jun 30, 2021, 8:26 PM IST

ನವದೆಹಲಿ(ಜೂ. 30)  ಎರಡು ಬಾರಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಝಾಜಾರಿಯಾ   ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ನವದೆಹಲಿಯ ನೆಹರು ಸ್ಟೆಡಿಯಂನಲ್ಲಿ  ನಡೆದ ಪ್ರಾಕ್ಟೀಸ್ ನಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

"

ನಾನು ಟೋಕಿಯೋ ಒಲಿಂಪಿಕ್ಸ್ ಆಧಾರದಲ್ಲಿ ಹೆಚ್ಚಿನ ತರಬೇತಿ ಮಾಡಿಕೊಂಡು ಬಂದಿದ್ದೇನೆ.   ಸಾಯಿ ಗಾಂಧಿನಗರ ಸಿಬ್ಬಂದಿ ನನಗೆ ಎಲ್ಲ ರೀತಿಯ ನೆರವು ನೀಡಿದ್ದು ಲಾಕ್ ಡೌನ್ ನಲ್ಲಿ ನಿರಂತರ ಅಭ್ಯಾಸ ಮಾಡಿದ್ದೇನೆ.  ನನ್ನ ಕುಟುಂಬವನ್ನು ನೋಡದೇ ತಿಂಗಳುಗಳೆ ಆಗಿದೆ.  ನನಗೆ ಈ ತ್ಯಾಗ ಮುಂದಿನ ಪ್ಯಾರಾಲಿಂಪಿಕ್ಸ್ ನಲ್ಲಿ ಇನ್ನೊಂದು ಚಿನ್ನ ತಂದುಕೊಡಲಿದೆ ಎಂದು ಏಷಿಯಾನೆಟ್ ನೊಂದಿಗೆ  ಮಾತನಾಡುತ್ತ ತಿಳಿಸಿದರು.

ಟೋಕಿಯೋ ಸ್ಥಾನ ಭದ್ರ ಮಾಡಿಕೊಂಡ ದ್ಯುತಿ ಚಾಂದ್

ತಮ್ಮ ಹಿಂದಿನ ದಾಖಲೆ 63.97 ಮೀಟರ್ ಮುರಿದ ಜಾವೆಲಿನ್ ಎಸೆತಗಾರ ಈ ಬಾರಿ 65.71 ಮೀಟರ್ ದಾಖಲೆ ಮಾಡಿದರು. ಪದ್ಮಶ್ರೀ, ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ದೇವೇಂದ್ರ ಪಾತ್ರವಾಗಿದ್ದಾರೆ.  ಈ ಬಾರಿಯ ಟೋಕಿಯೋ ಒಲಿಂಪಿಕ್ಸ್  ಕಡೆ ಹೆಜ್ಜೆ  ಇಟ್ಟಿದ್ದು ಭಾರತದ  ಪಾಲಿಗೆ ದೇವೇಂದ್ರ ಕಪ್ ತರುವ ಫೆವರೇಟ್.

devendra-jhajharia-broke-his-own-world-record-qualified-for-tokyo-paralympics mah

Follow Us:
Download App:
  • android
  • ios