ಡೆನ್ಮಾರ್ಕ್ ಓಪನ್: ಮೊದಲ ಸುತ್ತಲ್ಲೇ ಸೈನಾಗೆ ಆಘಾತ!
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ದಿನ ಭಾರತಕ್ಕೆ ಮಿಶ್ರ ಫಲ ಎದುರಾಗಿದೆ. ಕಳೆದ ಡೆನ್ಮಾರ್ಕ್ ಓಪನ್ ಟೂರ್ನಿಯ ರನ್ನರ್ ಅಪ್ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಇನ್ನು ಸಮೀರ್ ವರ್ಮಾ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಒಡೆನ್ಸ್ (ಅ.17): ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮೊದಲ ಸುತ್ತಿನಲ್ಲೇ ಭಾರತದ ಸೈನಾ ನೆಹ್ವಾಲ್ ಹೊರಬಿದ್ದಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಜಪಾನ್‌ನ ಸಯಾಕ ತಕಹಾಶಿ ವಿರುದ್ಧ ಸೈನಾ ಸೋಲಿನ ಆಘಾತ ಅನುಭವಿಸಿದರು.
ಕೇವಲ 37 ನಿಮಿಷಗಳ ಪಂದ್ಯದಲ್ಲಿ ಸೈನಾ 15-21, 21-23 ನೇರ ಗೇಮ್ಗಳಿಂದ ಸೋತರು. ಇಬ್ಬರೂ ಪ್ರತಿಯೊಂದು ಅಂಕಗಳಿಗೂ ಸೆಣಸಾಡಿದರು. ಮೊದಲ ಗೇಮ್ ಕೊನೆಗೆ ಸೈನಾ ಹೋರಾಡಿ 2 ಗೇಮ್ ಪಾಯಿಂಟ್ ಪಡೆದೂ 15-21ರಲ್ಲಿ ಸೋತರು. ದ್ವಿತೀಯ ಗೇಮ್ನಲ್ಲಿ ಸೈನಾ ಭಾರೀ ಪೈಪೋಟಿ ನೀಡಿದರು. ಆದರೆ 23-21ರಲ್ಲಿ ಮೇಲುಗೈ ಸಾಧಿಸಿದ ಜಪಾನ್ ಶಟ್ಲರ್ ಗೆಲುವಿಗೆ ಅರ್ಹರಾಗಿದ್ದರು.
ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ
ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಸೈನಾ ನೆಹ್ವಾಲ್ ಸತತ 3ನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಚೀನಾ ಓಪನ್ ಹಾಗೂ ಕೊರಿಯಾ ಟೂರ್ನಿಗಳಲ್ಲಿ ಅಂತಿಮ 32ರ ಸುತ್ತಿನಲ್ಲೇ ಸೈನಾ ಹೊರಬಿದ್ದು ಆಘಾತ ಅನುಭವಿಸಿದ್ದರು. ತಕಹಾಶಿ ವಿರುದ್ಧ ಸೈನಾ ಸತತ 2ನೇ ಸೋಲನ್ನು ಕಂಡರು. ಥಾಯ್ಲೆಂಡ್ ಓಪನ್ನಲ್ಲಿ ತಕಹಾಶಿ ವಿರುದ್ಧ ಸೈನಾ ಸೋತಿದ್ದರು.
ವಿಜಯ್ ಹಜಾರೆ ಟ್ರೋಫಿ 2019: ಗೋವಾ ಎದುರು ಕರ್ನಾಟಕ ಜಯಭೇರಿ!
ಸಮೀರ್ಗೆ ಜಯ: ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಸಮೀರ್ ವರ್ಮಾ, ಜಪಾನ್‌ನ ಕೆಂಟ ತ್ಸುನೆಯಮಾ ವಿರುದ್ಧ 21-11, 21-11 ರಲ್ಲಿ ಜಯಿಸಿ ಪ್ರಿ ಕ್ವಾರ್ಟರ್‌ಗೇರಿದರು. ಗುರುವಾರ 2ನೇ ಸುತ್ತಿನಲ್ಲಿ ಸಮೀರ್ ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್ರನ್ನು ಎದುರಿಸಲಿದ್ದಾರೆ.
ಮಿಶ್ರ ಡಬಲ್ಸ್ನಲ್ಲಿ ಪ್ರಣವ್ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಗೆಲುವು ಪಡೆಯಿತು. ಗಾಯದ ಸಮಸ್ಯೆಯಿಂದ ಸಾತ್ವಿಕ್ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಿತು.
ಸಿಂಧು ಪಂದ್ಯ ಇಂದು:
ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು, ಗುರುವಾರ ಪ್ರಿ ಕ್ವಾರ್ಟರ್‌ನಲ್ಲಿ ದ.ಕೊರಿಯಾದ ಅನ್ ಸೆನ್ ಯಂಗ್‌ರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣೀತ್, ಜಪಾನ್‌ನ ಕೆಂಟೊ ಮೊಮೊಟ ವಿರುದ್ಧ ಸೆಣಸಲಿದ್ದಾರೆ.