ಚಿನ್ನ ಗೆದ್ದ ದೀಪಿಕಾಗೆ ಟೋಕಿಯೋ ಟಿಕೆಟ್
ಭಾರತದ ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಏಷ್ಯನ್ ಕಾಂಟಿನೆಂಟಲ್ ಆರ್ಚರಿ ಅರ್ಹತಾ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬ್ಯಾಂಕಾಕ್ (ನ.29): ಭಾರತದ ತಾರಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಇಲ್ಲಿ ಗುರುವಾರ ನಡೆದ ಏಷ್ಯನ್ ಕಾಂಟಿನೆಂಟಲ್ ಆರ್ಚರಿ ಅರ್ಹತಾ ಟೂರ್ನಿಯ ಮಹಿಳೆಯರ ವೈಯಕ್ತಿಕ ರಿಕರ್ವ್ ಸ್ಪರ್ಧೆಯ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ದೀಪಿಕಾ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಭಾರತದಲ್ಲಿ ಬಾಂಗ್ಲಾ ಕ್ರಿಕೆಟಿಗನ ಅಕ್ರಮ ವಾಸ್ತವ್ಯ..!
ಮಹಿಳಾ ರಿಕರ್ವ್ ಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ, ಭಾರತದವರೇ ಆದ ಅಂಕಿತಾ ವಿರುದ್ಧ 6-0 ಅಂತರದಲ್ಲಿ ಗೆಲುವು ಸಾಧಿಸಿದರು. ಫೈನಲ್‌ನಲ್ಲಿ ಸೋಲು ಕಂಡ ಅಂಕಿತಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇದು ಈ ವರ್ಷ ಭಾರತ ಗೆದ್ದಿರುವ 2ನೇ ಒಲಿಂಪಿಕ್ಸ್‌ಗೆ ಕೋಟಾ ಆಗಿದೆ.
ಶೂಟಿಂಗ್ ವಿಶ್ವಕಪ್ ಫೈನಲ್ಸ್: ಭಾರತಕ್ಕೆ 3 ಚಿನ್ನ!
ವಿಶ್ವ ಚಾಂಪಿಯನ್ಶಿಪ್ನಲ್ಲಿ ತರುಣ್ದೀಪ್, ಅತನು ದಾಸ್, ಪ್ರವೀಣ್ ಜಾಧವ್ರನ್ನು ಒಳಗೊಂಡ ಪುರುಷರ ರಿಕರ್ವ್ ತಂಡ ಟೋಕಿಯೋ ಟಿಕೆಟ್ ಪಡೆದಿತ್ತು. 2020ರ ಬರ್ಲಿನ್ ವಿಶ್ವಕಪ್ನಲ್ಲಿ ಮಹಿಳಾ ರಿಕರ್ವ್ ತಂಡ ಒಲಿಂಪಿಕ್ ಕೋಟಾ ಗೆಲ್ಲುವ ವಿಶ್ವಾಸದಲ್ಲಿದೆ. ಬರ್ಲಿನ್ ವಿಶ್ವಕಪ್, ಒಲಿಂಪಿಕ್ಸ್ ಅರ್ಹತೆ ಸಂಪಾದಿಸಲು ಕಡೆಯ ಅವಕಾಶವಾಗಿರಲಿದೆ.