ಶೂಟಿಂಗ್ ವಿಶ್ವಕಪ್ ಫೈನಲ್ಸ್: ಭಾರತಕ್ಕೆ 3 ಚಿನ್ನ!
ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ಸ್‌ನಲ್ಲಿ ಭಾರತದ ಯುವ ಶೂಟರ್‌ಗಳು ಮತ್ತೊಮ್ಮೆ ಮಿಂಚುವ ಮೂಲಕ ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಪುಟಿಯನ್(ನ.22): ಭಾರತದ ಯುವ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ಸ್‌ನಲ್ಲಿ ಗುರುವಾರ 3 ಚಿನ್ನದ ಪದಕ ಜಯಿಸಿದರು.
ಏಷ್ಯನ್ ಶೂಟಿಂಗ್: ಬೆಳ್ಳಿ ಗೆದ್ದ ಸೌರಭ್ ಚೌಧರಿ
17 ವರ್ಷದ ಮನು ಭಾಕರ್, ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 244.7 ಅಂಕ ಗಳಿಸಿ ಅಗ್ರಸ್ಥಾನ ಗಳಿಸಿದರು. ಕಿರಿಯರ ವಿಭಾಗದಲ್ಲಿ ಇದು ವಿಶ್ವ ದಾಖಲೆಯ ಅಂಕವೆನಿಸಿತು. 20 ವರ್ಷದ ಎಲಾವೆನಿಲ್ ವಲರಿವನ್ ಮಹಿಳೆಯರ 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ 250.8 ಅಂಕ ಗಳಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ಬೆಳ್ಳಿ ಗೆದ್ದ ತೈವಾನ್‌ನ ಲಿನ್ ಯಿಂಗ್‌ಗಿಂತ 0.1 ಅಂಕ ಹೆಚ್ಚಿಗೆ ಗಳಿಸಿ ಅಗ್ರ ಸ್ಥಾನ ಪಡೆದರು.
ಪುರುಷರ 10 ಮೀ.ಏರ್ ರೈಫಲ್ ಸ್ಪರ್ಧೆಯ ಫೈನಲ್‌ನಲ್ಲಿ 250.1 ಅಂಕ ಗಳಿಸಿದ 17 ವರ್ಷದ ದಿವ್ಯಾನ್ಷ್ ಪನ್ವಾರ್ ಭಾರತಕ್ಕೆ 3ನೇ ಚಿನ್ನ ದೊರಕಿಸಿಕೊಟ್ಟರು. 3 ಚಿನ್ನದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೀನಾ 2 ಚಿನ್ನ, 1 ಬೆಳ್ಳಿ, 1 ಕಂಚಿನೊಂದಿಗೆ 2ನೇ ಸ್ಥಾನದಲ್ಲಿದೆ.
ಈಗಾಗಲೇ ಮನು ಭಾಕರ್, ದಿವ್ಯಾನ್ಷ್ ಪನ್ವಾರ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದು, ಭಾರತ ಪರ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.