ಜಾಗ್ರೆಬ್‌(ಮಾ.09): ಕ್ರೊವೇಷಿಯಾ ವಿರುದ್ಧದ ಡೇವಿಸ್‌ ಕಪ್‌ ಅರ್ಹತಾ ಪಂದ್ಯದಲ್ಲಿ ಭಾರತ ತಂಡ 1-3ರಿಂದ ಸೋಲುಂಡಿದ್ದು, ಟೂರ್ನಿಯಿಂದ ಹೊರಬಿದ್ದಿದೆ. 

ಕ್ರೊವೇಷಿಯಾ ತಂಡ, ವರ್ಷಾಂತ್ಯದಲ್ಲಿ ನಡೆಯಲಿರುವ ಡೇವಿಡ್‌ ಕಪ್‌ ಫೈನಲ್ಸ್‌ಗೆ ಅರ್ಹತೆ ಪಡೆದಿದೆ. ಶನಿವಾರ ರಾತ್ರಿ ನಡೆದ ರಿವರ್ಸ್‌ ಸಿಂಗಲ್ಸ್‌ನಲ್ಲಿ ಭಾರತದ ಸುಮಿತ್‌ ನಗಾಲ್‌, ತಾರಾ ಟೆನಿಸಿಗ ಮರಿನ್‌ ಸಿಲಿಚ್‌ ಎದುರು 0-6, 1-6 ಸೆಟ್‌ಗಳಲ್ಲಿ ಪರಾಭವ ಹೊಂದುವ ಮೂಲಕ ಭಾರತದ ಫೈನಲ್ಸ್‌ ಆಸೆ ನುಚ್ಚುನೂರಾಯಿತು. 

ಡೇವಿಸ್‌ ಕಪ್‌ ಅರ್ಹತಾ ಪಂದ್ಯ; ಭಾರತಕ್ಕೆ ಸೋಲಿನ ಆರಂಭ!

ಇದಕ್ಕೂ ಮುನ್ನ ನಡೆದಿದ್ದ ಡಬಲ್ಸ್‌ ಪಂದ್ಯದಲ್ಲಿ ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ ಜೋಡಿ ಮೇಟ್‌ ಪಾವಿಚ್‌ ಹಾಗೂ ಫ್ರಾಂಕೊ ಕುಗೊರ್‌ ವಿರುದ್ಧ 6-3, 6-7, 7-5 ಸೆಟ್‌ಗಳಲ್ಲಿ ಗೆದ್ದು ಫೈನಲ್ಸ್‌ ಆಸೆಯನ್ನು ಜೀವಂತವಾಗಿರಿಸಿತ್ತು.