ಜಾಗ್ರೆಬ್‌(ಮಾ.07): 2020ರ ಡೇವಿಸ್‌ ಕಪ್‌ ಫೈನಲ್ಸ್‌ಗೆ ಪ್ರವೇಶಿಸುವ ಕನಸು ಕಾಣುತ್ತಿರುವ ಭಾರತಕ್ಕೆ ಹಿನ್ನಡೆಯಾಗಿದೆ. ಇಲ್ಲಿ ಶುಕ್ರವಾರ ಆರಂಭಗೊಂಡ ಕ್ರೊವೇಷಿಯಾದ ವಿರುದ್ಧದ ಅರ್ಹತಾ ಸುತ್ತಿನ ಮುಖಾಮುಖಿಯ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಪ್ರಜ್ನೇಶ್‌ ಗುಣೇಶ್ವರನ್‌ ಸೋಲು ಅನುಭವಿಸಿದರು.

ಇದನ್ನೂ ಓದಿ: ನಾಯಿಗಳನ್ನು ರಕ್ಷಿಸುವ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್...

ಮೊದಲ ಬಾರಿಗೆ ಡೇವಿಸ್‌ ಕಪ್‌ ಪಂದ್ಯವನ್ನಾಡಿದ ಬೊರ್ನಾ ಗೊಜೊ ವಿರುದ್ಧ ಪ್ರಜ್ನೇಶ್‌ 6-3, 3-6, 2-6 ಸೆಟ್‌ಗಳಲ್ಲಿ ಸೋಲುಂಡು ನಿರಾಸೆ ಅನುಭವಿಸಿದರು. ಮೊದಲ ಸೆಟ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದ ಪ್ರಜ್ನೇಶ್‌, 2ನೇ ಸೆಟ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೂ ಪ್ರಜ್ನೇಶ್‌ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. 3ನೇ ಹಾಗೂ ಅಂತಿಮ ಸೆಟ್‌ನಲ್ಲಿ ಕ್ರೊವೇಷಿಯಾ ಆಟಗಾರ ಸುಲಭ ಗೆಲುವು ಸಾಧಿಸಿದರು.

2ನೇ ಸಿಂಗಲ್ಸ್‌ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌ಗೆ ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಂನ ಮಾಜಿ ಚಾಂಪಿಯನ್‌ ಮರಿನ್‌ ಸಿಲಿಚ್‌ ಎದುರಾಗಲಿದ್ದಾರೆ. ಭಾರತ ಮೊದಲ ದಿನವೇ ಭಾರೀ ಹಿನ್ನಡೆ ಅನುಭವಿಸುವ ಆತಂಕಕ್ಕೆ ಸಿಲುಕಿತು. ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ರೋಹನ್‌ ಬೋಪಣ್ಣ ಗೆಲುವು ಸಾಧಿಸಿಬೇಕಿದ್ದು, ರಿವರ್ಸ್‌ ಸಿಂಗಲ್ಸ್‌ನಲ್ಲೂ ಭಾರತ ಜಯ ಗಳಿಸಿದರೆ ಮಾತ್ರ ಡೇವಿಸ್‌ ಕಪ್‌ ಫೈನಲ್ಸ್‌ ಪಂದ್ಯಾವಳಿಗೆ ಅರ್ಹತೆ ಸಿಗಲಿದೆ.