ಡೇವಿಸ್ ಕಪ್: ಪಾಕ್ ಟೀಂನಲ್ಲಿ 17ರ ಟೆನಿಸಿಗರು!
ಭಾರತ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು 17 ವರ್ಷದ ಇಬ್ಬರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ(ನ.21): ಭಾರತ ವಿರುದ್ಧ ನ.29, 30ರಂದು ಕಜಕಸ್ತಾನದ ನೂರ್ ಸುಲ್ತಾನ್‌ನಲ್ಲಿ ನಡೆಯಲಿರುವ ಏಷ್ಯಾ/ಓಷಿಯಾನಿಯಾ ಹಂತದ ಡೇವಿಸ್ ಕಪ್ ಟೆನಿಸ್ ಪಂದ್ಯಕ್ಕೆ ಪಾಕಿಸ್ತಾನ ತಂಡ ಪ್ರಕಟಗೊಂಡಿದೆ.
ಕಜಕಸ್ತಾನದಲ್ಲಿ ಭಾರತ-ಪಾಕ್ ಡೇವಿಸ್ ಕಪ್ ಟೆನಿಸ್ ಪಂದ್ಯ?
ಪಂದ್ಯವನ್ನು ಇಸ್ಲಾಮಾಬಾದ್ನಿಂದ ಸ್ಥಳಾಂತರಗೊಳಿಸಿದ್ದನ್ನು ಪ್ರತಿಭಟಿಸಿ ಹಿರಿಯ ಆಟಗಾರರಾದ ಐಸಾಮ್ ಉಲ್ ಹಕ್ ಖುರೇಷಿ ಹಾಗೂ ಅಖೀಲ್ ಖಾನ್ ತಾವು ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಟೆನಿಸ್ ಫೆಡರೇಷನ್ (ಪಿಟಿಎಫ್) ಇಬ್ಬರು 17 ವರ್ಷದ ಆಟಗಾರರನ್ನು ಆಯ್ಕೆ ಮಾಡಿದೆ. ಹುಜೈಫಾ ಅಬ್ದುಲ್ ರೆಹಮಾನ್ ಹಾಗೂ ಶೋಯೆಬ್ ಖಾನ್ ಪಾಕ್ ತಂಡದಲ್ಲಿ ಸ್ಥಾನ ಪಡೆದ 17 ವರ್ಷದ ಆಟಗಾರರಾಗಿದ್ದಾರೆ.
ಡೇವಿಸ್ ಕಪ್: ಪಾಕ್ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ
ಈ ಬಗ್ಗೆ ಮಾತನಾಡಿರುವ ಪಿಟಿಎಫ್ ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್, ‘ಪಾಕಿಸ್ತಾನಕ್ಕೆ ಪ್ರತಿ ದಿನ ಸಾವಿರಾರು ಭಾರತೀಯರು ಭೇಟಿ ನೀಡುತ್ತಾರೆ. ಅವರಾರಯರಿಗೂ ಭದ್ರತಾ ಸಮಸ್ಯೆ ಆಗುವುದಿಲ್ಲ. ಆದರೆ 6 ಮಂದಿ ಟೆನಿಸಿಗರಿಗೆ ಸಮಸ್ಯೆ ಉಂಟಾಗುತ್ತದೆ. ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ’ ಎಂದಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2020ರ ಡೇವಿಸ್ ಕಪ್ ಅರ್ಹತಾ ಸುತ್ತಿಗೆ ಪ್ರವೇಶಿಸಲಿದೆ.